ಸುದ್ದಿಮೂಲ ವಾರ್ತೆ ಬೀದರ್, ನ.08:
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆೆ ಮಣಿದ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಿಗೆ 3300 ರೂ. ನೀಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದು, ಆ ಭಾಗದ ಬೆಳೆಗಾರರಲ್ಲಿ ಕೊಂಚ ಭರವಸೆ ಮೂಡಿದೆ.
ಆದರೆ, ಕಲ್ಯಾಾಣ ಕರ್ನಾಟಕದ ಅದರಲ್ಲೂ ಗಡಿ ಜಿಲ್ಲೆ ಬೀದರ್ ರೈತರ ಆತಂಕ ತಗ್ಗಿಿಲ್ಲ. ಕಳೆದ ಸಾಲಿನಲ್ಲಿ ಸರ್ಕಾರದ ನಿರ್ಧಾರದ ಮಧ್ಯೆೆಯೂ ಜಿಲ್ಲೆಯ ಸಹಕಾರ ಹಾಗೂ ಖಾಂಡಸಾರಿ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಿಗೆ ಕೇವಲ 2600 ರೂ. ಮಾತ್ರ ನೀಡಿದ್ದು ಗಮನಾರ್ಹ.
ಅನೇಕ ರೈತ ಸಂಘಟನೆಗಳು, ಪ್ರಗತಿಪರ ರೈತರ ಹೋರಾಟದ ಮಧ್ಯೆೆಯೂ ದರ ಏರಿಕೆ ಮಾಡಿಲ್ಲ. ಹಾಗಾಗಿ, ಈ ಬಾರಿಯೂ ಸರ್ಕಾರದ ಬೆಲೆ ಏರಿಕೆ ತೀರ್ಮಾನ ಜಿಲ್ಲೆಯಲ್ಲಿ ಅನ್ವಯವಾಗುತ್ತಾಾ ? ಎಂಬುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆೆಯಾಗಿದೆ.
ರಿಕವರಿ ಕಥೆ – ರೈತರ ವ್ಯಥೆ !
ನೆರೆಯ ಮಹಾರಾಷ್ಟ್ರದಲ್ಲಿ ಟನ್ ಕಬ್ಬಿಿಗೆ 3500 ರೂ. ಗೂ ಅಧಿಕ ಹಣ ನೀಡಲಾಗುತ್ತಿಿದೆ. ಆದರೆ, ನಮಲ್ಲಿ ಮಾತ್ರ ಕಡಿಮೆ ಹಣ ನೀಡಲಾಗುತ್ತಿಿದೆ. ಈ ಬಗ್ಗೆೆ ಹಲವು ಬಾರಿ ಸಚಿವರ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಬ್ಬು ಕಾರ್ಖಾನೆ ಪ್ರತಿನಿಧಿಗಳ ಹಾಗೂ ರೈತರ ಸಭೆಯಲ್ಲಿ ಈ ಬಗ್ಗೆೆ ಚರ್ಚೆಗಳೂ ನಡೆದಿವೆ. ಆದರೆ, ಜಿಲ್ಲೆಯಲ್ಲಿ ಬೆಳೆದ ಕಬ್ಬಿಿನಿಂದ ರಿಕವರಿ ಸರಿಯಾಗಿ ಬರುವುದಿಲ್ಲ (ಕಬ್ಬಿಿನಲ್ಲಿ ಸಕ್ಕರೆ ಅಂಶ ಅಧಿಕವಿರಬೇಕು)
ಎಂಬ ನೆಪವೊಡ್ಡಿಿ ಟನ್ ಕಬ್ಬಿಿಗೆ ಕಡಿಮೆ ಹಣ ನೀಡಲಾಗುತ್ತಿಿದೆ. ಆದರೆ, ಕಾರ್ಖಾನೆ ಮಂಡಳಿಗಳ ಬಳಿ ರಿಕವರಿ ಕಡಿಮೆ ಬರುತ್ತಿಿರುವ ಬಗ್ಗೆೆ ಯಾವ ವೈಜ್ಞಾನಿಕ ಪುರಾವೆಗಳೂ ಇಲ್ಲ. ಒಟ್ಟಿಿನಲ್ಲಿ ಕಬ್ಬು ಬೆಳೆಗಾರರಿಗೆ ಸಮರ್ಪಕ ದರ ಮಾತ್ರ ದೊರಕುತ್ತಿಿಲ್ಲ.
ಸಕ್ಕರೆ ಕಾರ್ಖಾನೆಗಳ ಮೇಲಿಲ್ಲ ನಿಯಂತ್ರಣ
ಪ್ರತಿ ವರ್ಷ ಸಕ್ಕರೆ ಕಾರ್ಖಾನೆಗಳ ಸಭೆ ನಡೆಸುವ ಜಿಲ್ಲಾಡಳಿತ ಕಾಟಾಚಾರಕ್ಕೆೆ ಮಾತ ಆದೇಶಗಳು ನೀಡುತ್ತಿಿದೆಯಾ? ಎಂಬ ಅನುಮಾನ ರೈತ ವಲಯವನ್ನು ಕಾಡುತ್ತಿಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಕ್ಕೆೆ ತನ್ನ ಬಳಿ ಕರೆಸಿಕೊಂಡು ಒತ್ತಡ ಹೇರುವಲ್ಲಿ ಯಶಸ್ವಿಿಯಾದ ಕಬ್ಬು ಬೆಳೆಗಾರರು ಕಳೆದ ಸಾಲಿಗಿಂತ 300 ರೂ. ದರ ಹೆಚ್ಚಿಿಸಿಕೊಂಡು ಮುಗುಳುನಗೆ ಬೀರುತ್ತಿಿದ್ದಾರೆ. ಆದರೆ, ಜಿಲ್ಲೆಯ ಕಬ್ಬು ಬೆಳೆಗಾರರು ಈ ವರ್ಷವೂ ಆತಂಕದಲ್ಲೇ ಕಬ್ಬು ಸಾಗಾಣೆಗೆ ಮುಂದಾಗಿರುವುದು ವಿಪರ್ಯಾಸ.
ದರ ನಿಗದಿಯಾಗದೇ ಕ್ರಷಿಂಗ್ ಆರಂಭ
ಮಹಾತ್ಮಾಾ ಗಾಂಧಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಮೂರು ಖಾಸಗಿ ಸ್ವಾಾಮ್ಯದ ಕಾರ್ಖಾನೆಗಳಿವೆ. ಹೆಚ್ಚು ಕಡಿಮೆ ಪ್ರಸಕ್ತ ತಿಂಗಳಲ್ಲಿ ಎಲ್ಲಾ ಕಾರ್ಖಾನೆಗಳು ಕಬ್ಬು ನುರಿಸುವ ಕ್ರಷಿಂಗ್ ಆರಂಭಿಸಲಿವೆ. ಈಗಾಗಲೇ ಭಾಲ್ಕಿಿಯ ಎರಡು ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಿವೆ. ಆದರೆ, ಈವರೆಗೂ ದರ ನಿಗದಿಗೊಳಿಸಿಲ್ಲ. ಇದು ರೈತರನ್ನು ಚಿಂತೆಗೀಡು ಮಾಡಿದೆ.
ಸಭೆ ವಿಲ : ನ. 10ಕ್ಕೆೆ ಮರು ಸಭೆ
ನ. 6ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಹಾಗೂ ರೈತ ಮುಖಂಡರ ಸಭೆ ಕರೆಯಲಾಗಿತ್ತು. ಕಳೆದ ಬಾರಿಗಿಂತ 50 ರೂ. ಅಂದರೆ ಟನ್ ಕಬ್ಬಿಿಗೆ 2650 ರೂ. ಮಾತ್ರ ನೀಡಲು ಕಾರ್ಖಾನೆ ಪ್ರತಿನಿಧಿಗಳು ಸಭೆಗೆ ತಿಳಿಸಿವೆ. ರೈತ ಮುಖಂಡರು ಟನ್ ಕಬ್ಬಿಿಗೆ 3500 ರೂ. ನೀಡಬೇಕೆಂದು ಪಟ್ಟು ಹಿಡಿದ ಹಿನ್ನಲೆ ಸಭೆ ವಿಲಗೊಂಡಿದೆ. ಮತ್ತೆೆ ನ. 10ರಂದು ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಸಭೆ ಕರೆದಿದ್ದು, ದರ ನಿಗದಿ ಸಂಬಂಧ ಚರ್ಚೆ ನಡೆಯಲಿದೆ.
ಮಾನದಂಡ ಒಂದೇ ಇರಲಿ
ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಿಗೆ 3300 ರೂ. ನಿಗದಿಗೊಳಿಸಿದೆ. ಕೆಲ ಕಡೆ ಇನ್ನು ಕೆಲ ರೈತ ಸಂಘಟನೆಗಳು 3500ರೂ. ನೀಡಬೇಕು ಎಂದು ಪಟ್ಟು ಹಿಡಿದು ಹೋರಾಟ ಮುಂದುವರೆಸಿವೆ. ಏನೇ ಇರಲಿ, ಸದ್ಯ ಘೋಷಣೆಯಾಗಿರುವ 3300 ರೂ. ದರ ರಾಜ್ಯದ ಎಲ್ಲಾ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೂ ಅನ್ವಯವಾಗಬೇಕು. ಈ ನಿಟ್ಟಿಿನಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ರೈತ ಪರ ವಕಾಲತು ವಹಿಸಬೇಕು. ಹಲವು ವರ್ಷಗಳ ಕಾಲ ಸಕ್ಕರೆ ಕಾರ್ಖಾನೆ ಮುನ್ನಡೆಸಿರುವ ಈಶ್ವರ್ ಖಂಡ್ರೆೆ ಸದ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದು, ರೈತರಿಗೆ ನ್ಯಾಾಯ ದೊರಕಿಸಿಕೊಡಬೇಕಿದೆ.
ಸಕ್ಕರೆ ಕಾರ್ಖಾನೆಗಳ ಅವೈಜ್ಞಾನಿಕ (ರಿಕವರಿ) ವಾದಕ್ಕೆೆ ಸೊಪ್ಪುು ಹಾಕದೇ ಸರ್ಕಾರ ನಿಗದಿಗೊಳಿಸಿದ ದರ ದೊರಕಿಸಿಕೊಡಲು ಪ್ರಾಾಮಾಣಿಕ ಪ್ರಯತ್ನ ಮಾಡಬೇಕಿದೆ. ಮುಂಗಾರು ಹಂಗಾಮು ಕಳೆದುಕೊಂಡು ಹಣ್ಣಾಾಗಿರುವ ಕೃಷಿಕರಿಗೆ ಈ ಮೂಲಕ ನೆರವಾಗಬೇಕಿದೆ.

