ಸುದ್ದಿಮೂಲ ವಾರ್ತೆ ಬಳ್ಳಾಾರಿ, ನ.08:
ಬಳ್ಳಾಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತರೆಡ್ಡಿಿ ಅವರು ಭಕ್ತ ಶ್ರೇೇಷ್ಠ, ದಾಸ ಶ್ರೇೇಷ್ಠ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಭಕ್ತಿಿ ನಮನ ಸಲ್ಲಿಸಿದ್ದಾಾರೆ.
ಅಲ್ಲದೇ, ಹಾಲುಮತ ಸಮಾಜದ ಜನರಿಗೆ ಕಳೆದ ಕನಕದಾಸ ಜಯಂತಿ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸುವ ನಿಟ್ಟಿಿನಲ್ಲಿ ಕ್ರಾಾಂತಿವೀರ ಸಂಗೊಳ್ಳಿಿ ರಾಯಣ್ಣ ಅವರ ಪುತ್ಥಳಿ ನಿರ್ಮಾಣಕ್ಕೆೆ ಡಾ. ಜೋಳದರಾಶಿ ದೊಡ್ಡನಗೌಡರ ರಂಗಮಂದಿರದ ಸಮೀಪದ ಬುಡಾ ಪಾರ್ಕ್ನಲ್ಲಿ ಭೂಮಿ ಪೂಜೆ ನೇರವೇರಿಸಿ, ಅತಿ ಶೀಘ್ರದಲ್ಲಿ ಸುಸಜ್ಜಿಿತವಾದ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದರು.
ಆ ನಂತರ, ಬಳ್ಳಾಾರಿಯ 35ನೇ ವಾರ್ಡಿನ ಇಂದಿರಾ ನಗರದಲ್ಲಿ 1,2 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ (ಅಂದಾಜು 40 ಲಕ್ಷ ರೂ.ಗಳು) ಭೂಮಿ ಪೂಜೆ ನೆರವೇರಿಸಲಾಯಿತು. ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ, ಸಿದ್ದೇಶ ಮತ್ತಿಿತರರು ಹಾಜರಿದ್ದರು.
ಬಳ್ಳಾಾರಿಯ 37ನೇ ವಾರ್ಡ್ ವ್ಯಾಾಪ್ತಿಿಯ ಮಾರುತಿ ನಗರ, ಬಸವನಕುಂಟೆಯಲ್ಲಿ ಅಂದಾಜು 40 ಲಕ್ಷ ರೂ.ಗಳ ವೆಚ್ಚದಲ್ಲಿ 2 ಅಂಗನವಾಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭ ಪಾಲಿಕೆಯ ಸದಸ್ಯರಾದ ಕುಬೇರಾ, ಸ್ಥಳೀಯ ಮುಖಂಡರಾದ ಮಹಮ್ಮದ್ ಭಾಯ್ ಸೇರಿದಂತೆ ಹಲವರು ಹಾಜರಿದ್ದರು.
ನಗರದ 23ನೇ ವಾರ್ಡಿನ ಮಹಾನಂದಿ ಕೊಟ್ಟಂನಲ್ಲಿ ಅಂದಾಜು ವೆಚ್ಚ 1 ಕೋಟಿ ರೂ.ಗಳ ಸಿಸಿ ರಸ್ತೆೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಪಾಲಿಕೆಯ ಸದಸ್ಯ ಗಾದೆಪ್ಪ, ಸ್ಥಳೀಯ ಮುಖಂಡರಾದ ಸೋಮಣ್ಣ, ಹುಲುಗಣ್ಣ, ವಿಜಯ್, ಗೋವಿಂದ, ಗೌತಮ್, ಉದ್ಯಮಿ ಶ್ರೀಧರ್ ಮತ್ತಿಿತರರು ಹಾಜರಿದ್ದರು.
ಅದೇ ರೀತಿ ವಾರ್ಡ್ ಸಂಖ್ಯೆೆ 17ರ ವ್ಯಾಾಪ್ತಿಿಯ ದರ್ಗಾ ಕಾಲೋನಿಯಲ್ಲಿ ಅಂದಾಜು 20 ಲಕ್ಷ ರೂ.ಗಳ ವೆಚ್ಚದ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಪಾಲಿಕೆಯ ಸದಸ್ಯರಾದ ಕವಿತಾ ಹೊನ್ನಪ್ಪ, ಮಾಜಿ ಮೇಯರ್ ಎಂ. ರಾಜೇಶ್ವರಿ, ಸದಸ್ಯರಾದ ಮಿಂಚು ಶ್ರೀನಿವಾಸ, ನೂರ್ ಮೊಹಮ್ಮದ್, ಪ್ರಭಂಜನಕುಮಾರ್ ಮತ್ತಿಿತರರು ಹಾಜರಿದ್ದರು.

