ಸುದ್ದಿಮೂಲ ವಾರ್ತೆ ಕೊಪ್ಪಳ, ನ.09:
ಇತ್ತೀಚೆಗೆ ನಡೆದ ದುರಂತದಲ್ಲಿ ಇಬ್ಬರು ಅಮಾಯಕ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿಿದ್ದರು. ಆರಂಭದಲ್ಲಿ ಇದನ್ನು ಆಕಸ್ಮಿಿಕವೆಂದೇ ಭಾವಿಸಲಾಗಿತ್ತು. ಆದರೆ ಈಗ ಈ ಸಾವಿನ ಹಿಂದಿನ ರಹಸ್ಯ ಇದೀಗ ಬಯಲಾಗಿದೆ.
ಬರೀ ಕೂಲಿ ಹಣಕ್ಕಾಾಗಿ, ನಿಯಮಗಳನ್ನು ಗಾಳಿಗೆ ತೂರಿ ಕಡಿದಾದ ರಸ್ತೆೆಯ ಪಕ್ಕದಲ್ಲಿ ತೋಡಿದ್ದ ಆ ಆಳವಾದ ತೆಗ್ಗೇ, ಈಗ ಎರಡು ಜೀವಗಳನ್ನು ಬಲಿ ಪಡೆದಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಜಿಲ್ಲಾಾ ಪಂಚಾಯತ ಮತ್ತು ತಾಲೂಕು ಪಂಚಾಯತ ನರೇಗಾ ಅಧಿಕಾರಿಗಳ ಬೇಜವಾಬ್ದಾಾರಿತನಕ್ಕೆೆ, ಎರಡು ಪುಟ್ಟ ಜೀವಗಳು ಬಲಿಯಾಗಬೇಕಾಯಿತೇ? ಎಂಬ ಆರೋಪ ಕೇಳಿ ಬಂದಿದೆ.
ಅ. 28 ರಂದು ಕೊಪ್ಪಳ ಜಿಲ್ಲೆೆಯ ಕುಷ್ಟಗಿ ತಾಲೂಕಿನ ಹೊಮ್ಮಿಿನಾಳ ಗ್ರಾಾಮದ ಈ ಇಬ್ಬರು ಬಾಲಕರು ಊರ ಹೊರಗಿನ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿಿದ್ದಾಾರೆ ಎಂದು ವರದಿಯಾಗಿತ್ತು, ಆದರೆ ಅಸಲಿ ವಿಷಯ ಇದೀಗ ಬಯಲಾಗಿದೆ. ಈ ಇಬ್ಬರು ಬಾಲಕರು ಎಂದಿನಂತೆ ಹೊಲದಿಂದ ಮನೆಗೆ ಮರಳುತ್ತಿಿದ್ದರು. ಹೊಮ್ಮಿಿನಾಳ ಗ್ರಾಾಮದ ಹೊರ ವಲಯದ ರಸ್ತೆೆಯ ಹೊಲಕ್ಕೆೆ ಹೋಗುವ ದಾರಿಯಲ್ಲಿ ನರೇಗಾ ಯೋಜನೆಯಿಂದ ಕಾಮಗಾರಿ ನಿರ್ವಹಣೆ ಮಾಡಲಾಗಿತ್ತು. ಇಲ್ಲಿ ನಿಯಮ ಮೀರಿ ಅಗೆದಿದ್ದ ಅಪಾಯಕಾರಿ ತೆಗ್ಗುಗಳೆ ಬಾಲಕರ ಸಾವಿಗಾಗಿ ಕಾದಿತ್ತು. ನರೇಗಾ ಕಾಮಗಾರಿ ಹೆಸರಿನಲ್ಲಿ ಕೂಲಿ ಹಣದ ಬಿಲ್ ಪಡೆಯುವ ದುರುದ್ದೇಶದಿಂದ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಹೊಲದ ರಸ್ತೆೆಯ ಪಕ್ಕದಲ್ಲಿ ಆಳವಾದ ಕಂದಕವನ್ನು ತೋಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ಈ ಕಂದಕ ಸಂಪೂರ್ಣವಾಗಿ ತುಂಬಿ ರಸ್ತೆೆಯ ಮಟ್ಟಕ್ಕೆೆ ಸಮನಾಗಿತ್ತು. ಪರಿಣಾಮ? ರಸ್ತೆೆಗೂ ಮತ್ತು ಕಂದಕಕ್ಕೂ ವ್ಯತ್ಯಾಾಸ ತಿಳಿಯದ ಅಮಾಯಕ ಮಕ್ಕಳು ಹೊಲದಿಂದ ಮನೆಗೆ ಹಿಂತಿರುಗುವಾಗ ಆಕಸ್ಮಿಿಕವಾಗಿ ನೀರಿನಲ್ಲಿ ಮುಳುಗಿ ಪ್ರಾಾಣ ಕಳೆದುಕೊಂಡಿದ್ದಾಾರೆ.
ಸದ್ಯ ಕುಟುಂಬಸ್ಥರು ಬಿಡುಗಡೆ ಮಾಡಿದ ಕಾಮಗಾರಿ ಮೊದಲು ಮತ್ತು ನಂತರದ ಈ ಸಾಕ್ಷ್ಯಚಿತ್ರಗಳು ಸಾವಿನ ಹಿಂದಿನ ವ್ಯವಸ್ಥೆೆಯ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ಹೇಳುತ್ತಿಿವೆ. ಇದು ಕೇವಲ ಮಳೆಯ ದುರಂತವಲ್ಲ ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾಾರಿತನದ ದುರಂತ. ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಈಗ ನ್ಯಾಾಯಕ್ಕಾಾಗಿ ಹೋರಾಟ ನಡೆಸುತ್ತಿಿದೆ.
ನರೇಗಾ ಯೋಜನೆಯ ನಿಯಮಗಳು ಸ್ಪಷ್ಟವಾಗಿವೆ. ಯಾವುದೇ ಕಾಮಗಾರಿ ಮಾಡುವಾಗ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಈ ಎಲ್ಲಾಾ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ತಮ್ಮ ಲಾಭಕ್ಕಾಾಗಿ ಸರ್ಕಾರದ ಹಣ ಬಳಸಿಕೊಂಡು, ನಿಯಮ ಮೀರಿ ಜೀವ ತೆಗೆಯುವ ಕೆಲಸ ಮಾಡಿದ ಅಧಿಕಾರಿಗಳ ವಿರುದ್ಧ ಕೊಪ್ಪಳ ಜಿಲ್ಲಾಾ ಪಂಚಾಯತ್ ಸಿಇಒ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮೊದಲು ನೊಂದ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಮನವಿ ಮಾಡಿದ್ದಾಾರೆ.
ಜಿ.ಪಂ.ಸಿಇಒ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಳ್ಳಬೇಕು ಇದು ಬರಿ ಒಂದು ಗ್ರಾಾಮದ ಪರಿಸ್ಥಿಿತಿ ಅಲ್ಲ. ಜಿಲ್ಲೆೆಯ ಬಹುತೇಕ ಕಡೆ ಇದೇ ಪರಿಸ್ಥಿಿತಿ ನಿರ್ಮಾಣವಾಗಿದೆ. ನರೇಗಾ ಕಾಮಗಾರಿ ಬೇಕಾಬಿಟ್ಟಿಿ ನಡೆಸಿ ಇಂತಹ ದುರಂತಗಳಿಗೆ ಕಾರಣವಾಗುತ್ತಿಿವೆ. ಈ ದುರಂತಕ್ಕೆೆ ಕಾರಣರಾದವರು ಯಾರು? ಈ ಕಂದಕವನ್ನು ಅಗೆಯಲು ಯಾರು ಅನುಮತಿ ನೀಡಿದರು? ಈ ಎಲ್ಲದರ ಹಿಂದೆ ನರೇಗಾ ಕಾಮಗಾರಿಯ ಬೃಹತ್ ಭ್ರಷ್ಟಾಾಚಾರದ ಜಾಲ ಅಡಗಿದೆಯೇ? ಎಂಬ ಅನುಮಾನಗಳು ಮೂಡಿವೆ. ಜಿಲ್ಲಾಾ ಮತ್ತು ತಾಲ್ಲೂಕು ಪಂಚಾಯತ್ ನರೇಗಾ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆೆ ಕಾರಣ ಎಂದು ಕುಟುಂಬಸ್ಥರು ನೇರವಾಗಿ ಆರೋಪಿಸುತ್ತಿಿದ್ದಾಾರೆ. ಒಂದು ಸರ್ಕಾರಿ ಯೋಜನೆಯ ನಿರ್ಲಕ್ಷ್ಯ ಹೀಗೆ ಅಮಾಯಕ ಮಕ್ಕಳ ಜೀವಗಳನ್ನು ಬಲಿ ಪಡೆಯುತ್ತಿಿದ್ದರೆ, ಇದಕ್ಕೆೆ ಹೊಣೆಗಾರರು ಯಾರು? ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ, ಜನಪರ ಎನ್ನಲಾದ ಈ ಯೋಜನೆ ಮುಂದೆ ಮತ್ತಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳುವ ಅಪಾಯವಿದೆ.

