ಸುದ್ದಿಮೂಲ ವಾರ್ತೆ ಬೆಂಗಳೂರು, ನ.09:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ದೊರೆಯುತ್ತಿಿರುವ ಆರೋಪದ ಬಗ್ಗೆೆ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಬಂಧಿಖಾನೆ ಎಡಿಜಿಪಿ ಬಿ. ದಯಾನಂದ್ ಅವರಿಗೆ ಸೂಚಿಸಿದ್ದಾರೆ.
ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಈ ರೀತಿಯ ಅಕ್ರಮಗಳು ನಡೆಯುತ್ತಿಿರುವ ಬಗ್ಗೆೆ ಪದೇ, ಪದೇ ಮಾಹಿತಿ ಬರುತ್ತಿಿದೆ. ಹೀಗಾಗಿ ಇದನ್ನು ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.
ಜೈಲಿನಲ್ಲಿ ಅಕ್ರಮ ನಡೆದರೆ ಅದನ್ನು ಸಹಿಸುವುದಿಲ್ಲ. ಹಿಂದೆಯೂ ಅಕ್ರಮ ನಡೆದಾಗ ಕ್ರಮ ಕೈಗೊಳ್ಳಲಾಗಿದೆ. . ಕೈದಿಗಳಿಗೆ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಒದಗಿಸುವವರ ವಿರುದ್ಧ ಕ್ರಮ ಆಗಲೇಬೇಕು ಅಂದಿದ್ದೇನೆ. ನಾನೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದರು.
ಎಡಿಜಿಪಿ ಬಿ. ದಯಾನಂದ್ ಅವರು ವರದಿ ಕೊಟ್ಟಮೇಲೆ ಪರಿಶೀಲನೆ ಮಾಡಲಾಗುವುದು ವರದಿ ನಮಗೆ ಸಮಾಧಾನ ಆಗದಿದ್ದರೆ ಉನ್ನತಮಟ್ಟದ ತನಿಖೆ ಮಾಡಲು ಸೂಚಿಸಲಾಗುವುದು. ತನಿಖೆಗೆ ಸಮಿತಿ ರಚನೆ ಮಾಡಲಾಗುವುದು.
ಇದು ಹಳೆಯ ವಿಡಿಯೋ ಎಂಬ ಮಾಹಿತಿ ಇದೆ. ಹಿಂದೆಯೂ ಹಳೆಯ ವಿಡಿಯೋ ಬಂದಿತ್ತು. ಏನೇ ಇರಲಿ, ಇದು ಯಾವುದೂ ನಡೆಯಬಾರದು. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ನಟ ದರ್ಶನ್ ಅವರು ದಿಂಬು, ಹಾಸಿಗೆಗೆ ಕೋರ್ಟ್ನಲ್ಲಿ ಮನವಿ ಮಾಡಿಕೊಳ್ಳುತ್ತಾಾರೆ. ಆದರೆ ಈ ಕೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಜೈಲಾಧಿಕಾರಿಗಳ ವಿರುದ್ಧ ಸಚಿವರು ಅಸಮಾಧಾನ ಹೊರಹಾಕಿದರು.
ಉಗ್ರನಾಗಲಿ, ಯಾರೇ ಆಗಲಿ ೆನ್ ಕೊಡುವ ಹಾಗಿಲ್ಲ. ಹೀಗೆಲ್ಲಾ ಆಗುತ್ತಿಿದ್ದರೆ, ಅದು ಜೈಲು ಅನಿಸಿಕೊಳ್ಳಲ್ಲ. ಬೆಂಗಳೂರು, ಬೆಳಗಾವಿ, ಮಂಗಳೂರಿನಲ್ಲಿ ಪದೇ ಪದೆ ಈ ರೀತಿ ಯಾಕೆ ಆಗುತ್ತಿಿದೆ ಎನ್ನುವ ಬಗ್ಗೆೆಯೂ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಈಗ ವೈರಲ್ ಆಗಿರುವುದು ಹಳೆಯ ವಿಡಿಯೋನಾ ಅಂತಾ ಗೊತ್ತಿಿಲ್ಲ, ತನಿಖೆ ಆಗಬೇಕು. ಹಳೆಯದೇ ವಿಡಿಯೋ ಆದರೂ ಆ ರೀತಿ ಆಗಬಾರದು ಎಂದರು.
ಕನ್ನಡಪರ ಹೋರಾಟಗಾರರ ಕೇಸ್ ವಾಪಸ್ ಕುರಿತು ಪ್ರತಿಕ್ರಿಿಯಿಸಿದ ಅವರು, ಕಾನೂನು ವಿರುದ್ಧ ಕೆಲಸ ಮಾಡಿದವರ ಮೇಲೆ ಕ್ರಮ ಆಗುತ್ತದೆ. ಒಳ್ಳೆೆಯ ಉದ್ದೇಶದಿಂದ ಹೋರಾಟ ನಡೆದರೆ, ಅದರಿಂದ ಸಾರ್ವಜನಿಕ ಆಸ್ತಿಿ ನಷ್ಟ ಆಗದಿದ್ದರೆ ಅದಕ್ಕೆೆ ಸಂಪುಟ ಉಪಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಸಂಪುಟ ಉಪಸಮಿತಿಯಲ್ಲಿ ಚರ್ಚೆ ಮಾಡಿ, ಅಪರಾಧದ ಅಂಶಗಳಿಲ್ಲದಿದ್ದರೆ ಅಂತಹ ಕೇಸ್ ವಾಪಸ್ ಬಗ್ಗೆೆ ನಿರ್ಧಾರ ಆಗಲಿದೆ. ಅನೇಕ ಸಂದರ್ಭಗಳಲ್ಲಿ ಕನ್ನಡಪರ, ರೈತಪರ ಹೋರಾಟಗಾರರ ಕೇಸ್ ವಾಪಸ್ ಪಡೆಯಲಾಗಿದೆ. ಅದಕ್ಕೊೊಂದು ಪ್ರಕ್ರಿಿಯೆ ಇದೆ. ಅದರಂತೆ ಕ್ರಮ ಆಗಲಿದೆ. ಸಂಪುಟ ಉಪಸಮಿತಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದ ಮೇಲೆ ನಿರ್ಧಾರ ಆಗುತ್ತದೆ ಎಂದು ತಿಳಿಸಿದರು.
ಬಾಕ್ಸ್
ಹಿಟ್ನಾಾಳ್ ಔತಣಕ್ಕೆೆ ಹೋಗಲ್ಲ
ದೆಹಲಿಯಲ್ಲಿ ಸಂಸದ ರಾಜಶೇಖರ್ ಹಿಟ್ನಾಾಳ್ ನಿವಾಸದಲ್ಲಿ ಔತಣಕೂಟ ಆಯೋಜನೆ ವಿಚಾರವಾಗಿ ಪ್ರತಿಕ್ರಿಿಯಿಸುತ್ತಾಾ, ಹಿಟ್ನಾಾಳ್ ಅವರು ಕರೆದಿರುವ ಊಟಕ್ಕೆೆ ನಾನೇನೂ ಹೋಗುವುದಿಲ್ಲ. ಅದರ ಬಗ್ಗೆೆ ನನಗೆ ಗೊತ್ತಿಿಲ್ಲ, ನನಗೇನೂ ಅವರು ಕರೆದಿಲ್ಲ. ಅಥವಾ ನಾನು ದೆಹಲಿಗೆ ಹೋಗುತ್ತಿಿಲ್ಲ. ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆಗೆ ಸಿಎಂ ಹೋಗುತ್ತಿಿದ್ದಾರೆ ಎಂದರು.

