ಸುದ್ದಿಮೂಲ ವಾರ್ತೆ ಬೆಂಗಳೂರು, ನ.09:
ಬಿಜೆಪಿ ರಾಜ್ಯಾಾಧ್ಯಕ್ಷ ಸ್ಥಾಾನದಿಂದ ಬಿ.ವೈ. ವಿಜಯೇಂದ್ರ ಬದಲಾವಣೆ ಸನ್ನಿಿಹಿತವಾಗಿದ್ದು, ಲಿಂಗಾಯತ ಸಮುದಾಯ ಹಿರಿಯ ನಾಯಕ, ಕೇಂದ್ರ ಜಲಶಕ್ತಿಿ ಮತ್ತು ರೈಲ್ವೆೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬಿಜೆಪಿಯ ನೂತನ ರಾಜ್ಯಾಾಧ್ಯಕ್ಷರಾಗಿ ಆಯ್ಕೆೆಯಾಗುವ ಸಾಧ್ಯತೆ ದಟ್ಟವಾಗಿದೆ.
ಈ ಕುರಿತು ತೆರೆಮರೆ ಚಟುವಟಿಕೆಗಳು ನಡೆಯುತ್ತಿಿದ್ದು, ಸೋಮಣ್ಣ ಅವರನ್ನು ಅಧ್ಯಕ್ಷರನ್ನಾಾಗಿ ನೇಮಿಸಿ ಬಿಜೆಪಿ ಬಣ ರಾಜಕೀಯಕ್ಕೆೆ ತೆರೆ ಎಳೆಯಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಾಳ್ ನಡುವಿನ ಹಗ್ಗ ಜಗ್ಗಾಾಟ ಮುಂದುವರೆಯತ್ತಿಿರುವ ಬೆನ್ನಲ್ಲೇ ಸೋಮಣ್ಣ ಅವರಿಗೆ ಪಕ್ಷದ ಜವಾಬ್ದಾಾರಿ ನೀಡುವ ಸಾಧ್ಯತೆಯಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕರಾಗಿ ಸೋಮಣ್ಣ ಅವರನ್ನು ನಿಯೋಜಿಸಲಾಗುತ್ತಿಿದೆ.
ರಾಜ್ಯದ ಪ್ರಭಾವಿ ಮಠಾಧೀಶರೊಂದಿಗೆ ಸೋಮಣ್ಣ ಖುದ್ದು ಈ ಮಾಹಿತಿ ಹಂಚಿಕೊಂಡಿದ್ದಾರೆಂದು ಆಪ್ತ ಮೂಲಗಳು ದೃಢಪಡಿಸಿವೆ. ನಾನು ಬಿಜೆಪಿ ರಾಜ್ಯಾಾಧ್ಯಕ್ಷನಾಗಲಿದ್ದೇನೆ. ವಿಜಯೇಂದ್ರ ಅವರ ಸೋದರ ಮತ್ತು ಸಂಸದ ಬಿ ವೈ ರಾಘವೇಂದ್ರ ಕೇಂದ್ರ ಸಚಿವರಾಗಲಿದ್ದಾರೆ ಎಂದು ಸೋಮಣ್ಣ ಸ್ವಾಾಮೀಜಿ ಬಳಿ ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಾಧ್ಯಕ್ಷ ಸ್ಥಾಾನದ ಗೊಂದಲ ಪಕ್ಷದಲ್ಲಿ ಈವರೆಗೂ ಬಗೆಹರಿದಿಲ್ಲ. ರಾಜ್ಯಾಾಧ್ಯಕ್ಷ ಸ್ಥಾಾನದಲ್ಲೇ ಮುಂದುವರಿಯಲು ಸಾಕಷ್ಟು ಶ್ರಮಿಸಿ, ದೆಹಲಿ ವರಿಷ್ಠರ ಬಾಗಿಲುಗಳ ಬಡಿದು ಸುತ್ತಾಾಡಿರುವ ಬಿ ವೈ ವಿಜಯೇಂದ್ರ ಇತ್ತೀಚೆಗೆ ಬಹುತೇಕ ಮೌನ ವಹಿಸಿದ್ದಾರೆ.
ಬಿಜೆಪಿ ರಾಜ್ಯಾಾಧ್ಯಕ್ಷ ಸ್ಥಾಾನದ ರೇಸ್ನಲ್ಲಿ ಲಿಂಗಾಯತ ಸಮದಾಯದ ಬಸವರಾಜ ಬೊಮ್ಮಾಾಯಿ ಹೆಸರು ಸಹ ಬಲವಾಗಿ ಕೇಳಿಬರುತ್ತಿಿದೆ. ಜೊತೆಗೆ ಒಬಿಸಿ ನಾಯಕನನ್ನು ಆಯ್ಕೆೆ ಮಾಡುವ ಸಾಧ್ಯತೆಗಳು ಸಹ ಇವೆ. ಒಬಿಸಿಯಿಂದ ಸುನೀಲ್ ಕುಮಾರ್ ಹೆಸರಿದೆ. ಒಂದು ವೇಳೆ ಸುನೀಲ್ ಕುಮಾರ್ ರಾಜ್ಯಾಾಧ್ಯಕ್ಷರಾಗಿ ಆಯ್ಕೆೆಯಾದರೆ, ಅಶೋಕ್ ಸ್ಥಾಾನಕ್ಕೆೆ ಕಂಟಕ ಬರಲಿದೆ. ವಿರೋಧ ಪಕ್ಷದ ನಾಯಕನ ಸ್ಥಾಾನ ಲಿಂಗಾಯತ ಸಮುದಾಯದ ಪಾಲಾಗಲಿದೆ. ಜಾತಿ ಸಮೀಕರಣದ ಸಂದರ್ಭದಲ್ಲಿ ಅಶೋಕ್ ಸ್ಥಾಾನ ಭದ್ರವಾಗಿಲ್ಲ. ವಿಜಯೇಂದ್ರ ಅವರೇ ರಾಜ್ಯಾಾಧ್ಯಕ್ಷರಾಗಿ ಮುಂದುವರೆಯುತ್ತಾಾರೋ? ಅಥವಾ ಬೇರೆಯವರ ನೇಮಕ ಆಗುತ್ತದೆಯೋ ಎಂಬ ಚರ್ಚೆ ರಾಜ್ಯ ಬಿಜೆಪಿಯಲ್ಲಿ ಜೀವಂತವಾಗಿದೆ.
ಸೋಮಣ್ಣ ಅವರನ್ನು ರಾಜ್ಯಾಾಧ್ಯಕ್ಷರನ್ನಾಾಗಿ ನೇಮಕ ಮಾಡಿದರೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತಾಾರೆ ಎಂಬ ಯೋಚನೆ ದೆಹಲಿ ನಾಯಕರಲ್ಲಿದೆ. ಜೊತೆಗೆ ಯತ್ನಾಾಳ್ ಹಾಗೂ ಬಿಜೆಪಿ ತಟಸ್ಥ ಬಣವನ್ನೂ ವಿಶ್ವಾಾಸಕ್ಕೆೆ ತೆಗೆದುಕೊಂಡಂತೆಯೂ ಆಗುತ್ತದೆ ಎಂಬ ಲೆಕ್ಕಾಾಚಾರವಿದೆ.
ಒಕ್ಕಲಿಗ ಸಮುದಾಯಕ್ಕೆೆ ಹೇಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾಾನ ಆರ್. ಅಶೋಕ್ಗೆ ನೀಡಲಾಗಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾಾನವನ್ನು ದಲಿತ ಸಮುದಾಯದ ಛಲವಾದಿ ನಾರಾಯಣಸ್ವಾಾಮಿಗೆ ನೀಡಲಾಗಿದೆ. ಈಗ ಬಿಜೆಪಿ ರಾಜ್ಯಾಾಧ್ಯಕ್ಷ ಸ್ಥಾಾನವನ್ನು ಲಿಂಗಾಯತ ಸಮುದಾಯದಲ್ಲೇ ಉಳಿಸಿಕೊಂಡು, ವಿ ಸೋಮಣ್ಣ ಅವರಿಗೆ ಒಪ್ಪಿಿಸಿದರೆ ಪಕ್ಷದೊಳಗಿನ ಅಸಮಾಧಾನ ಬಹುತೇಕ ಅಸಮಾಧಾನ ತಣಿಯುತ್ತದೆ. ಜೊತೆಗೆ ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರ ಚುನಾವಣೆ ಗೆಲ್ಲಲು ಕೂಡ ಸಹಾಯಕವಾಗುತ್ತದೆ ಎಂಬುದು ವರಿಷ್ಠರ ಲೆಕ್ಕಾಾಚಾರ.
ತಾವು ರಾಜ್ಯಾಾಧ್ಯಕ್ಷರಾದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ಚುನಾವಣೆಯಲ್ಲಿ ಯಶಸ್ಸು ಕಂಡರೆ ಸಿಎಂ ಸ್ಥಾಾನಕ್ಕೆೆ ಪ್ರಬಲ ದಾವೆ ಹೂಡಬಹುದು. ಇದೇ ಕಾರಣಕ್ಕೆೆ ಕೇಂದ್ರ ಮಂತ್ರಿಿ ಸ್ಥಾಾನ ಬಿಟ್ಟು ಕೊಡಲು ಸೋಮಣ್ಣ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿಿದೆ.
ಬಿ ಎಸ್ ಯಡಿಯೂರಪ್ಪ ಕುಟುಂಬವನ್ನು ನೇರವಾಗಿ ಟೀಕಿಸಿದವರಲ್ಲಿ ಸೋಮಣ್ಣ ಕೂಡ ಒಬ್ಬರು. 2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ವರುಣಾ ಕ್ಷೇತ್ರಕ್ಕೆೆ ಮತ್ತು ಸ್ವಕ್ಷೇತ್ರ ಗೋವಿಂದರಾಜ ನಗರ ಬಿಟ್ಟು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಉಭಯ ಕ್ಷೇತ್ರಗಳಲ್ಲೂ ಸೋಮಣ್ಣ ಸೋಲು ಕಂಡಿದ್ದರು. ಆ ಸೋಲಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿ ಬಿಸಿ ಸುದ್ದಿಯಾಗಿದ್ದರು.
ಎರಡೂ ಕ್ಷೇತ್ರಗಳಲ್ಲಿ ಸೋತು ರಾಜಕೀಯವಾಗಿ ಅತಂತ್ರವಾಗಿದ್ದ ಸೋಮಣ್ಣ ಅವರು ತ್ಯಾಾಗ’ ಮಾಡಿದ್ದರ ಪ್ರತಿಲವಾಗಿ ಪಕ್ಷದ ರಾಜ್ಯಾಾಧ್ಯಕ್ಷರನ್ನಾಾಗಿ ನೇಮಿಸಿ ತನಗಾದ ನಷ್ಟವನ್ನು ತುಂಬಿಕೊಡಬೇಕು ಎಂದು ಪಕ್ಷದ ಹೈಕಮಾಂಡ್ ಬಳಿ ಪಟ್ಟುಹಿಡಿದಿದ್ದರು. ಆ ಹಿನ್ನೆೆಲೆಯಲ್ಲೇ ವಿಧಾನಸಭಾ ಚುನಾವಣೆಯಲ್ಲಿ ಸೋತ ಮೇಲೆ ನನಗೆ ರಾಜ್ಯಾಾಧ್ಯಕ್ಷ ಸ್ಥಾಾನ ನಿರಾಕರಿಸಿದರೆ ಬೆಂಬಲಿಗರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ತಿಳಿಸುವೆ ಮತ್ತು ನನಗೆ 100 ದಿನ ಬಿಜೆಪಿ ರಾಜ್ಯಾಾಧ್ಯಕ್ಷ ಪಟ್ಟ ಕೊಡಿ, ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆೆ ತರುವೆ’ ಎಂದು ಹೇಳಿದ್ದರು.
ಬಿಜೆಪಿ ರಾಜ್ಯಾಾಧ್ಯಕ್ಷ ಸ್ಥಾಾನದ ಪ್ರಬಲ ಆಕ್ಷಾಂಕ್ಷಿ ತಾವು ಎಂಬುದು ಅವರ ಈ ಎಲ್ಲ ಹೇಳಿಕೆಗಳ ಕೇಂದ್ರಬಿಂದು ಆಗಿದ್ದವು. ಆದರೂ ಅವರ ನಿರೀಕ್ಷೆ ನೆರವೇರುವುದಿಲ್ಲ. ಬಿಜೆಪಿ ರಾಜ್ಯಾಾಧ್ಯಕ್ಷ ಸ್ಥಾಾನ ಯಡಿಯೂರಪ್ಪನವರ ಮಗ ಬಿ ವೈ ವಿಜಯೇಂದ್ರ ಪಾಲಾಗುತ್ತದೆ. ಬಳಿಕ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಂತೆ ಮಾತು ಆರಂಭಿಸಿದ ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಿಟ್ಟರು. ಕೊನೆಗೆ ಸಿದ್ದಗಂಗಾ ಮಠದ ಆಶೀರ್ವಾದದೊಂದಿಗೆ ಟಿಕೆಟ್ ಪಡೆದು ಗೆದ್ದು ದೆಹಲಿಯ ಕಣ್ಣು ಕಿವಿ’ಗಳಿಗೆ ಹೆಚ್ಚು ಸಮೀಪವಾದರು.
ವಿಜಯೇಂದ್ರ ಅವರಿಗೆ ಈಗಾಗಲೇ ಒಂದು ಅವಕಾಶ ನೀಡಲಾಗಿದೆ. ಅವರು ಆ ಸ್ಥಾಾನದಲ್ಲಿ ಅತ್ಯಂತ ಯಶಸ್ವಿಿ ನಾಯಕರಾಗಿ ಹೊರಹೊಮ್ಮಿಿಲ್ಲ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿವೆ. ಪಕ್ಷದ ಒಂದು ಗುಂಪಿನ ಬಲವಾದ ವಿರೋಧದ ಹಿನ್ನೆೆಲೆಯಲ್ಲಿ ಸತತ ಎರಡನೇ ಬಾರಿಗೆ ಅವರ ಆಯ್ಕೆೆ ಕಷ್ಟ ಸಾಧ್ಯ ಎನ್ನಲಾಗುತ್ತಿಿದೆ.
ವಿಜಯೇಂದ್ರ ನೇಮಕಕ್ಕೆೆ ಯತ್ನಾಾಳ್ ಆರಂಭದಲ್ಲೇ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದರು. ಹಲವು ಮುಖಂಡರು ಬಹಿರಂಗವಾಗಿ ಅಲ್ಲದಿದ್ದರೂ, ವಿಜಯೇಂದ್ರ ನೇಮಕವನ್ನು ಆಂತರಿಕವಾಗಿ ವಿರೋಧಿಸುತ್ತಲೇ ಇದ್ದಾರೆ. ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರುದ್ದ ಯತ್ನಾಾಳ್ ಸಾಕಷ್ಟು ಟೀಕೆಗಳನ್ನು ಮಾಡಿ ಕೊನೆಗೆ ಪಕ್ಷದಿಂದಲೇ ಹೊರಹಾಕಿಸಿಕೊಂಡರು. ಬೆಳಗಾವಿಯ ಪ್ರಭಾವಿ ಕುಳ ರಮೇಶ್ ಜಾರಕಿಹೊಳಿ ಕೂಡ ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿದ್ದಾರೆ. ಚಿಕ್ಕಬಳ್ಳಾಾಪುರ ಸಂಸದ ಡಿ ಸುಧಾಕರ್, ವಿಜಯೇಂದ್ರ ಹಸ್ತಕ್ಷೇಪ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಆಂತರಿಕ-ಬಾಹ್ಯ ವಿರೋಧವನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿಿದೆ. ಲಿಂಗಾಯತ ಸಮುದಾಯವನ್ನು ದೂರ ಮಾಡಿಕೊಂಡರೆ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿಿತ್ವವೇ ಇರುವುದಿಲ್ಲ ಎಂಬುದನ್ನು ಮನಗಂಡಿದೆ. ರಾಜ್ಯಾಾಧ್ಯಕ್ಷ ಹುದ್ದೆಯನ್ನು ಮತ್ತೊೊಮ್ಮೆೆ ಲಿಂಗಾಯತ ಸಮುದಾಯದ ಕೈಗೇ ಒಪ್ಪಿಿಸುವ ಆಲೋಚನೆಯಲ್ಲಿದ್ದಾರೆ. ಪಕ್ಷವನ್ನು ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಬಿಡಿಸಿಕೊಳ್ಳಲು ವಿ ಸೋಮಣ್ಣ ಪರ್ಯಾಯ ದಾರಿಯಾಗಿ ದೆಹಲಿ ವರಿಷ್ಠರಿಗೆ ಕಂಡಿರುವ ಸಾಧ್ಯತೆ ಹೆಚ್ಚಿಿದೆ.

