ಸುದ್ದಿಮೂಲ ವಾರ್ತೆ ಹರಪನಹಳ್ಳಿಿ, ನ.09:
ದೇಶದಲ್ಲಿ ಆರ್ಎಸ್ಎಸ್ ನೋಂದಣಿ ಮಾಡಿಸಿಕೊಳ್ಳಬೇಕೆಂದು ನಾನು ಎಂದು ಎಲ್ಲಿಯೂ ಹೇಳಿಲ್ಲ? ಬದಲಾಗಿ ಎಲ್ಲಾ ಸಂಘಟನೆಗಳು ( ಆರ್ಗನೈಜೇಷನ್ )ಎಂದಿದ್ದೇನೆ.ಅದನ್ನು ಬಿಜೆಪಿ ಪಕ್ಷದವರು ಹಾಗೂ ಸಂಘ ಪರಿವಾರದವರು ಆರ್ಎಸ್ಎಸ್ ಎಂದು ತಪ್ಪುು ಭಾವಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು.
ಪಟ್ಟಣದಲ್ಲಿ ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಅವರ ಪುತ್ರನ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಬ್ರಿಿಟಿಷ್ ಕಾಲದಲ್ಲಿಯೇ ಆರ್ಎಸ್ಎಸ್ ಇದೆ ಆರ್ಎಸ್ಎಸ್ ಹುಟ್ಟಿಿ ನೂರು ವರ್ಷಗಳು ಕಳೆದಿವೆ. ಪ್ರಸ್ತುತ ರಾಜಕೀಯ ವಿಚಾರವಾಗಿ ಆರ್ಎಸ್ಎಸ್ ನೋಂದಣಿ ವಿಚಾರವನ್ನು ಎಳೆದು ತರುವುದು ಎಷ್ಟು ಸರಿ ಎಂಬ ಪ್ರಶ್ನೆೆಗೆ ಉತ್ತರಿಸಿದ ಅವರು ನಾನೆಂದೂ ಆರ್ಎಸ್ಎಸ್ ನೊಂದಣಿ ಬಗ್ಗೆೆ ಚಕಾರೆತ್ತಿಿಲ್ಲ ಅವರು ತಪ್ಪಾಾಗಿ ತಿಳಿದಿದ್ದಾರೆ ನಾನೇನೂ ಮಾಡಲಾಗುವುದಿಲ್ಲ ಎಂದರು.
ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾಾದಕರಿಗೆ ಹಾಗೂ ಉಮೇಶ್ ರೆಡ್ಡಿಿಗೆ ರಾಜಾತಿಥ್ಯ ನೀಡುತ್ತಿಿರುವ ವಿಡಿಯೋ ವೈರಲ್ ಆಗುತ್ತಿಿವೆ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆೆಗೆ ಉತ್ತರಿಸಿದ ಅವರು ತಪ್ಪುು ಮಾಡಿದವರ ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ವರದಿ ಕೇಳಿದ್ದೇವೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸ್ಥಳೀಯ ರೈತರು ಮೆಕ್ಕೆೆಜೋಳ ಬೆಂಬಲ ಬೆಲೆ ನೀಡಬೇಕು ಪ್ರಶ್ನೆೆಗೆ ಮೆಕ್ಕೆೆಜೋಳಕ್ಕೆೆ ಬೆಂಬಲ ಬೆಲೆ ಸೂಚಿಸ ಬೇಕಾಗಿರುವುದು ಕೇಂದ್ರ ಸರ್ಕಾರ.ರಾಜ್ಯ ಸರ್ಕಾರವಲ್ಲ ನಾವು ಶಿಾರಸ್ಸು ಮಾಡಬಹುದೆಷ್ಟೇ ಎಂದರು.
ಕಬ್ಬು ಬೆಳೆ ರೈತರೊಂದಿಗೆೆ ಮಾತನಾಡಿ ಎಲ್ಲವೂ ಸರಿಪಡಿಸಲಾಗಿದೆ ಈಗ ಅವರಿಗೆ ಹಣ ನೀಡುವ ವಿಚಾರದಲ್ಲಿ ಯಾರಾದರೂ ಒಪ್ಪದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಕಾರ್ಖಾನೆ ಮಾಲೀಕರು ಹಾಗೂ ಬಸವನಗೌಡ ಯತ್ನಾಾಳ್ ರವರು ನಮ್ಮ ಕಾರ್ಖಾನೆಗೆ ಲಾಸ್ ಆಗುತ್ತೆೆ ಎಂದಿದ್ದಾರೆ ಎಂಬ ಪ್ರಶ್ನೆೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ಇದೇ ವೇಳೆ ರೈತರು ಅಹವಾಲುಗಳನ್ನು ನೀಡಿದರು ಮೆಕ್ಕೆೆಜೋಳ ಖರೀದಿ ಕೇಂದ್ರ ಹೋಬಳಿ ಮಟ್ಟದಲ್ಲಿ ಸ್ಥಾಾಪನೆ ಮಾಡುವಂತೆ ರೈತ ಮುಖಂಡರು ಆಗ್ರಹಿಸಿದರು.

