ಸುದ್ದಿಮೂಲ ವಾರ್ತೆ ಬೆಂಗಳೂರು, ನ.09:
ವಿಶ್ವದೆಲ್ಲೆಡೆ ಸಂಘರ್ಷದ ಸನ್ನಿಿವೇಶಗಳು ಉಂಟಾಗಿದ್ದು, ಮನುಕುಲವೇ ಅಪಾಯಕ್ಕೆೆ ಸಿಲುಕಿದೆ. ಇಂತಹ ಸನ್ನಿಿವೇಶದಲ್ಲಿ ವಿಶ್ವ ಶಾಂತಿ ಸ್ಥಾಾಪಿಸಲು, ಜೈನ ಮುನಿಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಶ್ರವಣಬೆಳಗೊಳದ 4ನೇ ಬೆಟ್ಟಕ್ಕೆೆ ಶಾಂತಿ ಸಾಗರ ಬೆಟ್ಟ ಎಂದು ನಾಮಕರಣ ಮಾಡಿರುವ ಶಿಲಾಲಕವನ್ನು ಅನಾವರಣಗೊಳಿಸಿ ಮಾತನಾಡಿದರು.
ಜೈನ ಧರ್ಮ, ಇಡೀ ವಿಶ್ವಕ್ಕೆೆ ಸತ್ಯ, ಅಹಿಂಸೆಯ ಭೋದನೆಯನ್ನು ಮಾಡುತ್ತಿಿದೆ. ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿಯು, ಜೈನ ಧರ್ಮದ ಹಾಗೂ ಪರಂಪರೆಯ ಪ್ರತೀಕ ಮಾತ್ರವಲ್ಲದೆ, ವಿಶ್ವ ಶಾಂತಿಯ ಸಂದೇಶವನ್ನು ಸಾರುವ ಸಂಕೇತವೂ ಆಗಿದೆ ಎಂದು ಹೇಳಿದರು.
ಶ್ರವಣಬೆಳಗೊಳ ಹಾಗೂ ಇಡೀ ಕರ್ನಾಟಕ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ದೇಶದ ಕಲೆ, ಸಂಸ್ಕೃತಿಯನ್ನು ಸಂರಕ್ಷಿಸಿ, ಬೆಳಸುವಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ, ’ಜ್ಞಾನ ಭಾರತಂ’ ಮಿಷನ್ ಅಡಿಯಲ್ಲಿ, ಪ್ರಾಾಚೀನ ಭಾಷೆಗಳ ಪುನರುಜ್ಜೀವನಕ್ಕೆೆ ಹೆಚ್ಚಿಿನ ಒತ್ತು ನೀಡುತ್ತಿಿದೆ. ಪ್ರಾಾಕೃತ ಮತ್ತು ಕನ್ನಡಕ್ಕೆೆ ಶಾಸೀಯ ಭಾಷೆಯ ಸ್ಥಾಾನಮಾನ ನೀಡಲಾಗಿದ್ದು, ಸಂಶೋಧನೆ ಹಾಗೂ ಭಾಷೆಯ ಬೆಳವಣಿಗೆಗೆ ಹೆಚ್ಚಿಿನ ಮಹತ್ವ ನೀಡಲಾಗಿದೆ. ಜೈನ ಧರ್ಮದ ಪ್ರಾಾಚೀನ ಸಾಹಿತ್ಯ, ಹಸ್ತ ಪ್ರತಿಗಳ ಸಂಶೋಧನೆಗೆ ಸರ್ಕಾರ ಮುಂದಾಗಿದೆ ಎಂದರು.
ಉಪರಾಷ್ಟ್ರಪತಿ ಅವರು, ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಆಚಾರ್ಯ 108 ಶಾಂತಿ ಸಾಗರ್ ಮಹಾರಾಜ್ ಅವರ ಭೇಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದರು.
ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಾಮಿ ದರ್ಶನ:
ಹಾಸನಿಂದ ಸೇನಾ ಹೆಲಿಕಾಪ್ಟರ್ನಲ್ಲಿ ಮೇಲುಕೋಟೆಗೆ ತೆರಳಿದ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅಲ್ಲಿ ಶ್ರೀ ಚೆಲುವನಾರಾಯಣಸ್ವಾಾಮಿಯ ದೇವಾಲಯಕ್ಕೆೆ ಭೇಟಿ ನೀಡಿ , ವಿಶೇಷ ಪೂಜೆ ಸಲ್ಲಿ ದರ್ಶನ ಪಡೆದದರು.
ಈ ವೇಳೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋೋಟ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಾಮಿ, ಶಾಸಕ ದರ್ಶನ್ ಪುಟಣ್ಣಯ್ಯ, ಜಿಲ್ಲಾಧಿಕಾರಿ, ಎಸ್ಪಿಿ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

