ಸುದ್ದಿಮೂಲ ವಾರ್ತೆ ಕಾರಟಗಿ, ನ.09:
2ನೇ ಬೆಳೆಗೆ ನೀರು ಹರಿಸಲೇಬೇಕು ಎಂದು ಆಗ್ರಹಿಸಿ, ವಿವಿಧ ಸಂಘ-ಸಂಸ್ಥೆೆಗಳ ವತಿಯಿಂದ ಕಾರಟಗಿ ಪಟ್ಟಣದಲ್ಲಿ ನವೆಂಬರ್ 12ರಿಂದ ಆಹೋರಾತ್ರಿಿ ಧರಣಿ ಹೋರಾಟಕ್ಕೆೆ ಚಾಲನೆ ನೀಡಲಾಗುವುದು ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ಹೇಳಿದರು.
ಪಟ್ಟಣದ ಸಿದ್ದೇಶ್ವರ ರಂಗಮಂದಿರದಲ್ಲಿ ಭಾನುವಾರದಂದು ತಾಲೂಕಿನ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆೆಗಳ ಮುಖಂಡರ, ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗೇಟ್ ಅಳವಡಿಕೆ ನೆಪದಲ್ಲಿ 2ನೇ ಬೆಳೆಯಿಂದ ರೈತರಿಗೆ ನೀರು ವಂಚಿಸುವುದಕ್ಕೆೆ ಅವಕಾಶ ನೀಡುವುದಿಲ್ಲ. ಈ ನಿಟ್ಟಿಿನಲ್ಲಿ ಐಸಿಸಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಾ ಉಸ್ತುವಾರಿ ಸಚಿವರೂ ಆಗಿರುವ ಶಿವರಾಜ ತಂಗಡಗಿಯವರು 2ನೇ ಬೆಳೆಗೆ ನೀರಿಲ್ಲ ಎನ್ನುವ ತಮ್ಮ ಗೊಂದಲಕಾರಿ ಹೇಳಿಕೆಯನ್ನು ಹಿಂಪಡೆದು ಕೂಡಲೇ ಮುನಿರಾಬಾದಿನಲ್ಲಿ ಐಸಿಸಿ ಸಭೆ ಕರೆದು 2ನೇ ಬೆಳೆಗೆ ನೀರನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಆಗ್ರಹಿಸುತ್ತಿಿದ್ದೇವೆ. ಈ ನಿಟ್ಟಿಿನಲ್ಲಿ ಇಂದು ಪಕ್ಷಾತೀತವಾಗಿ ಸೇರಿದ್ದ ಸಭೆಯಲ್ಲಿ ಇದೇ ನವೆಂಬರ್ 12ರ ಬುಧವಾರದಂದು ಕಾರಟಗಿ ಪಟ್ಟಣದಲ್ಲಿ ಅನಿರ್ಧಿಷ್ಠ ಆಹೋರಾತ್ರಿಿ ಧರಣಿ ಹೋರಾಟಕ್ಕೆೆ ವಿವಿಧ ಸಂಘ-ಸಂಸ್ಥೆೆಗಳ ಸಮ್ಮುಖದಲ್ಲಿ ಈ ನಿರ್ಧಾರಕ್ಕೆೆ ಬರಲಾಯಿತು. ಈ ಹೋರಾಟ 2ನೇ ಬೆಳೆಗೆ ನೀರು ಘೋಷಣೆಯಾಗುವವರೆಗೆ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರುಗಳಾದ ಶರಣಪ್ಪ ಕೊತ್ವಾಾಲ್, ಶರಣೇಗೌಡ ಕೆಸರಟ್ಟಿಿ ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ್, ಹನುಮಂತಪ್ಪ ನಾಯಕ ಉಳೇನೂರು, ಬಸವರಾಜ ಬಿಲ್ಗಾಾರ್, ಸುರೇಶ ಚಳ್ಳೂರು, ಜಾಗೃತ ಯುವಕ ಸಂಘದ ಪ್ರಹ್ಲಾಾದ ಜೋಷಿ, ಚಂದ್ರಶೇಖರ ಮುಸಾಲಿ, ಸತ್ಯನಾರಾಯಣ ದೇಶಪಾಂಡೆ, ಜಿ. ತಿಮ್ಮನಗೌಡ, ರಾಜಶೇಖರ ಗುಂಡೂರು, ಬಸವರಾಜ ಚಳ್ಳೂರು, ಬಸವರಾಜಪ್ಪ ದೇಸಾಯಿ, ಸಣ್ಣಕನಕಪ್ಪ, ಮುತ್ತು ಪಾಟೀಲ್, ಮಲ್ಲಿಕಾರ್ಜುನರೆಡ್ಡಿಿ ಹಾಗೂ ಬಸವರಾಜ ಎತ್ತಿಿನಮನಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ದುರ್ಗಾರಾವ್, ಬಿ. ಕಾಶಿವಿಶ್ವನಾಥ್, ಶಿವಶರಣಪ್ಪ ಶಿವಪೂಜಿ, ಮಂಜುನಾಥ್ ಮಸ್ಕಿಿ, ಉಮೇಶ ಭಂಗಿ, ವಿಕ್ರಂ ಮೇಟಿ, ಶ್ರೀಶೈಲಗೌಡ ಚಳ್ಳೂರು, ಬಸವರಾಜ ಶೆಟ್ಟರ್, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಆನಂದ ಮ್ಯಾಾಗಡಮನಿ, ಹನುಮಂತಪ್ಪ ಬೇವಿನಾಳ, ಧನಂಜಯ್ ಎಲಿಗಾರ್, ರೈತ ಸಂಘಟನೆಗಳ ರಮೇಶ ಭಂಗಿ, ಭಾಷಾಸಾಬ್ ಬಂಡೆ, ಅಯ್ಯಪ್ಪ ಸುದ್ದಿ, ಸಣ್ಣ ರಾಮಣ್ಣ ಹರಿಜನ, ಸಿದ್ದರಾಮ ರ್ಯಾಾವಳದ, ಮಹೇಶ ಮೇಟಿ ಇನ್ನಿಿತರರು ಇದ್ದರು.

