ಸುದ್ದಿಮೂಲ ವಾರ್ತೆ ಬೆಂಗಳೂರು , ನ.09:
ಪರಪ್ಪನ ಅಗ್ರಹಾರ ಜೈಲಿನ ಕೈದಿಗಳು ಮೊಬೈಲ್ ೆನ್ ಬಳಸುತ್ತಿಿದ್ದವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗೊಂಡ ಬಳಿಕ ಹೆಚ್ಚುವರಿ ಕಾರಾಗೃಹಗಳ ಮಹಾನಿರೀಕ್ಷಕ ಪಿ.ವಿ.ಆನಂದ್ ರೆಡ್ಡಿಿ ಜೈಲಿಗೆ ತೆರಳಿ ಪರಿಶೀಲನೆ ನಡೆಸಿದರು.
ಜಾಲತಾಣದಲ್ಲಿ ಪ್ರಕಟವಾಗಿರುವ ದೃಶ್ಯಗಳು ಅಸಲಿಯೆಂದು ಮೇಲ್ನೋೋಟಕ್ಕೆೆ ಸಾಬೀತಾಗಿವೆ. ಆದರೆ ಇವುಗಳಲ್ಲಿ ಕೆಲವು 2023ರಲ್ಲಿ ಕೆಲವು ವಿಡಿಯೋಗಳನ್ನ ಚಿತ್ರೀೀಕರಿಸಲಾಗಿದೆ. ಇನ್ನೂ ಕೆಲವು ವಿಡಿಯೋಗಳನ್ನು 2025ರಲ್ಲಿ ಚಿತ್ರೀೀಕರಿಸಿರುವುದು ಮೇಲ್ನೋೋಟಕ್ಕೆೆ ಖಚಿತವಾಗಿದೆ. ಕಾರಾಗೃಹದೊಳಗೆ ಮೊಬೈಲ್ ೆನ್ಗಳನ್ನ ತಂದವರು ಯಾರು. ಕೈದಿಗಳಿಗೆ ನೀಡಿದವರು ಯಾರು. ಕೈದಿಗಳು ಮೊಬೈಲ್ ಬಳಸುತ್ತಿಿರುವ ವಿಡಿಯೋಗಳನ್ನ ಚಿತ್ರೀೀಕರಿಸಿ ಹರಿಬಿಟ್ಟವರು ಯಾರು. ಎಂಬುದನ್ನ ಪತ್ತೆೆ ಹಚ್ಚಿಿ ಕಾನೂನು ಕ್ರಮ ಕೈಗೊಳ್ಳಲು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನ ದಾಖಲಿಸಿ ತನಿಖೆ ನಡೆಸಲು ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಜಾಲತಾಣದಲ್ಲಿ ಬಹಿರಂಗವಾಗಿರುವ ವಿಡಿಯೋಗಳನ್ನು ಪ್ರಾಾಥಮಿಕ ಇಲಾಖಾ ತನಿಖೆ ಕೈಗೊಂಡು ವರದಿ ನೀಡುವಂತೆ ದಕ್ಷಿಣ ವಲಯದ ಉಪ ಮಹಾನಿರೀಕ್ಷಕರಿಗೆ ಸೂಚಿಸಲಾಗಿದೆ. ಆ ವರದಿಯ ಆಧಾರದ ಮೇಲೆ ತಪ್ಪಿಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
2009ರಿಂದಲೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸೈಕೋ ಹಂತಕ ಉಮೇಶ್ ರೆಡ್ಡಿಿ, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ಸೆಲ್ನಲ್ಲಿ ಮೊಬೈಲ್ ೆನ್ಗಳು, ಟಿವಿ ವ್ಯವಸ್ಥೆೆ ಸೇರಿದಂತೆ ವಿಶೇಷ ಸೌಲಭ್ಯಗಳು ಲಭ್ಯವಾಗುತ್ತಿಿರುವ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು.
ಬ್ಯಾಾರಕ್ ಪರಿಶೀಲನೆಗೆ ಎಡಿಜಿಪಿ ಸೂಚನೆ: ಈ ದೃಶ್ಯಗಳು ಬಹಿರಂಗವಾಗುತ್ತಿಿದ್ದಂತೆ ಸಂಬಂಧಪಟ್ಟ ಕೈದಿಗಳ ಬ್ಯಾಾರಕ್ಗಳನ್ನು ಪರಿಶೀಲನೆ ನಡೆಸುವಂತೆ ಜೈಲಾಧಿಕಾರಿಗಳಿಗೆ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚಿಸಿದರು.
ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿಿರುವ ಬಗ್ಗೆೆ ಬೆಂಗಳೂರಿನಲ್ಲಿ ಪ್ರತಿಕ್ರಿಿಯೆ ನೀಡಿರುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು, ಅದರ ಬಗ್ಗೆೆ ನನಗೆ ಗೊತ್ತಿಿಲ್ಲ, ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
2024ರ ಆಗಸ್ಟ್ ನಲ್ಲಿ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ, ಕೊಲೆ ಆರೋಪ ಎದುರಿಸುತ್ತಿಿರುವ ನಟ ದರ್ಶನ್, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ಸಿಗರೇಟ್ ಸೇದುತ್ತಿಿರುವ ೆಟೋ ವೈರಲ್ ಆಗಿತ್ತು.

