ಸುದ್ದಿಮೂಲ ವಾರ್ತೆ ಗಂಗಾವತಿ, ನ.09:
ಚಿರತೆಗಳ ಹಾವಳಿಯಿಂದ ಬೇಸತ್ತ ಜನರ ಪರವಾಗಿ ಗ್ರಾಾಮ ಪಂಚಾಯತಿ ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಇಟ್ಟಿಿದ್ದ ಬೋನಿಗೆ ಮೂರು ದಿನಗಳ ಬಳಿಕ ಮರಿ ಚಿರತೆಯೊಂದು ಬಲೆಗೆ ಬಿದ್ದಿದೆ.
ತಾಲ್ಲೂಕಿನ ಅನೆಗೊಂದಿ ಗ್ರಾಾಮದ ಹೊರವಲಯದಲ್ಲಿ ಇರುವ ತಳವಾರಘಟ್ಟದ ಸಮೀಪದ ಗುಂಪು ಮನೆಗಳಿರುವ ಆಶ್ರಯ ಕಾಲೋನಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿಿ ಚಿರತೆ ಬಲೆಗೆ ಬಿದ್ದಿದೆ. ಬಹಿರ್ದೆಸೆಗೆ ಹೋಗಿದ್ದ ಯುವಕರು ಚಿರತೆ ಬೋನಿಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಮಾಹಿತಿ ತಿಳಿಯುತ್ತಿಿದ್ದಂತೆಯೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆೆ ಆಗಮಿಸಿ ಚಿರತೆಯನ್ನು ಸ್ಥಳಾಂತರಿಸಿದರು.
ವಡ್ಡರಹಟ್ಟಿಿಯ ನರ್ಸರಿಗೆ ಮೂರು ದಿನಗಳ ಹಿಂದಷ್ಟೆೆ ಪತ್ರ:
ಆನೆಗೊಂದಿಯ ಗುಂಪು ಮನೆಗಳ ಪ್ರದೇಶ ಹಾಗೂ ಜನವಸತಿ ಸನೀಹದಲ್ಲಿ ಎರಡರಿಂದ ಮೂರು ಚಿರತೆಗಳು ಓಡಾಡುತ್ತಿಿರುವ ಬಗ್ಗೆೆ ಸ್ಥಳೀಯರು ಪಂಚಾಯತಿ ಗಮನಕ್ಕೆೆ ತಂದಿದ್ದರು.
ಕೂಡಲೇ ಎಚ್ಚೆೆತ್ತ ಗ್ರಾಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಚಿರತೆಗಳ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು.
ಪಂಚಾಯತಿ ಪತ್ರಕ್ಕೆೆ ಸ್ಪಂದಿಸಿದ ಅರಣ್ಯ ಇಲಾಖೆ, ನ.6ರಂದು ಬೋನು ಇರಿಸಿ ಚಿರತೆಗಳ ಸೆರೆಗೆ ಬಲೆ ಬೀಸಿತ್ತು.ಶನಿವಾರ ರಾತ್ರಿಿ ಒಂದು ಚಿರತೆ ಬಲೆಗೆ ಬಿದ್ದಿದೆ.
ಇನ್ನೆೆರಡು ಮೂರು ಚಿರತೆ:
ಈ ಬಗ್ಗೆೆ ಮಾತನಾಡಿದ ಅರಣ್ಯ ಇಲಾಖೆಯ ಪ್ರಾಾದೇಶಿಕ ಅರಣ್ಯಾಾಧಿಕಾರಿ ಚೈತ್ರಾಾ ಮೆಣಸಿನಕಾಯಿ, ಇನ್ನೆೆರಡು ಚಿರತೆ ಇರುವ ಬಗ್ಗೆೆ ಸ್ಥಳೀಯರು ಗಮನಕ್ಕೆೆ ತಂದಿದ್ದಾರೆ. ಅವುಗಳ ಬಲೆಗೆ ಯತ್ನಿಿಸಲಾಗುವುದು. ಚಿರತೆಗಳು ಓಡಾಡುತ್ತಿಿರುವ ಕಾರಣ ಒಂಟಿಯಾಗಿ ಓಡಾಡಬಾರದು. ಒಂಟಿಯಾಗಿ ಜಾನುವಾರ ಮೇಯಲು ಬಿಡಬಾರದು. ಬೆಟ್ಟದ ಸಮೀಪ ಹೋಗಬಾರದು ಎಂದು ಸಲಹೆ ನೀಡಿದ್ದಾಾರೆ.

