ಸುದ್ದಿಮೂಲ ವಾರ್ತೆ ಬೆಂಗಳೂರು, ನ.10:
ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆಗೆ ಗುರಿಯಾಗಿರುವ ಹಾಗೂ ವಿಚಾರಣಾಧೀನ ಕೈದಿಗಳಿಗೆ ಮೊಬೈಲ್ ೆನ್ ಮತ್ತಿಿತರ ಸೌಲಭ್ಯಗಳನ್ನು ನೀಡುವ ಮೂಲಕ ರಾಜಾತಿಥ್ಯ ಕಲ್ಪಿಿಸಿರುವುದಕ್ಕೆೆ ಕರ್ನಾಟಕ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಾಮಿ ಇಂದಿಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆಗಳನ್ನು ಗಮನಿಸಿದರೆ ಕಾರಾಗೃಹದಲ್ಲಷ್ಟೇ ಭಯೋತ್ಪಾಾದಕರಿಲ್ಲ, ಅದಕ್ಕಿಿಂತಲೂ ಅಪಾಯಕಾರಿ ಭಯೋತ್ಪಾಾದಕರು ವಿಧಾನಸೌಧದಲ್ಲಿಯೇ ಇದ್ದಾರೆ ಎಂಬ ಸಂಶಯ ಮೂಡುತ್ತದೆ ಎಂದರು.
ಕೇಂದ್ರ ಕಾರಾಗೃಹದಲ್ಲಿ ಕುಖ್ಯಾಾತ ಪಾತಕಿಗಳಿಗೆ ಜೈಲು ಸಿಬ್ಬಂದಿ ರಾಜಾತಿಥ್ಯ ನೀಡುತ್ತಿಿರುವುದು ನಾಚಿಕೆಗೇಡು, ರಾಜ್ಯದ ಜನ ಹಾದಿ ಬೀದಿಯಲ್ಲಿ ಈ ಬಗ್ಗೆೆ ಮಾತನಾಡುವಂತಾಗಿದೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಕೊಡಲಾಗುತ್ತಿಿದೆ ಎನ್ನುವುದು ಹೊಸ ವಿಚಾರವಲ್ಲ, ಹಿಂದೆ ಇದೇ ವಿಷಯದ ಬಗ್ಗೆೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಕಿತ್ತಾಾಡಿಕೊಂಡಿದ್ದನ್ನು ಕಂಡಿದ್ದೇವೆ ಎಂದು ಹೇಳಿದರು.
ಇನ್ನೊೊಂದು ಪ್ರಕರಣದಲ್ಲಿ ಸ್ವತಃ ನ್ಯಾಾಯಾಲಯಗಳೇ ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಲು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿತ್ತು, ಆದರೂ, ಮತ್ತೆೆ ಅಂತಹವೇ ಪ್ರಕರಣಗಳು ಕಾರಾಗೃಹದಲ್ಲಿ ಮರುಕಳಿಸುತ್ತಿಿವೆ.
ವಿಧಾನಸೌಧದಲ್ಲಿ ಉಗ್ರರನ್ನು ಇಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿನ ಉಗ್ರರ ಬಗ್ಗೆೆ ಏನು ಚರ್ಚೆ ಮಾಡೋದು, ನೀವು ಯಾರ ಬಗ್ಗೆೆ ತನಿಖೆ ಮಾಡುತ್ತೀರಿ, ಇವೆಲ್ಲಾ ಕಾಲಹರಣ ಮಾಡುವುದಕ್ಕಷ್ಟೇ ಎಂದು ಕಟುವಾಗಿ ಟೀಕಿಸಿದರು.
ಜೈಲು ನಿರ್ವಹಣೆಯಲ್ಲಿ ಪದೇ ಪದೆ ವೈಲ್ಯಗಳ ಬಗ್ಗೆೆ ಮುಖ್ಯಮಂತ್ರಿಿ, ಗೃಹ ಸಚಿವರನ್ನು ಜನತೆ ಪ್ರಶ್ನಿಿಸುವಂತಾಗಿದೆ, ಸರ್ಕಾರದ ಆಡಳಿತದಲ್ಲಿ ಪ್ರತಿ ದಿನ ವೈಲ್ಯ ಎದ್ದು ಕಾಣಿಸುತ್ತಿಿದೆ. ಅವಕಾಶ ಸಿಕ್ಕಾಾಗಲೆಲ್ಲಾ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂಬುದಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಟೀಕೆ ಮಾಡುತ್ತಾಾರೆ, ಪರಪ್ಪನ ಅಗ್ರಹಾರ ಪ್ರಕರಣ ಗಮನಿಸಿದರೆ ಇವರಿಗೇನಿದೆ ಎಂದು ಪ್ರಶ್ನಿಿಸಬೇಕಿದೆ ಎಂದರು.
ಆಡಳಿತದ ದೀರ್ಘ ಅನುಭವ ಹೊಂದಿರುವ ಸಿದ್ದರಾಮಯ್ಯ, ಈ ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳಬಾರದು, ಅವರ ಅಧೀನದಲ್ಲಿ ಗುಪ್ತದಳ ಇಲ್ಲವೇ, ಇವರೇ ಕೆಟ್ಟ ಶಕ್ತಿಿಗಳಿಗೆ ಬೆಂಬಲ ಕೊಟ್ಟರೆ ಹೇಗೆ ಎಂದರು.
ಗೃಹ ಸಚಿವರ ರಾಜಿನಾಮೆಗೆ ಒತ್ತಾಾಯ ಮಾಡಿದಾಕ್ಷಣ ರಾಜಿನಾಮೆ ಕೊಡುವಷ್ಟು ನೈತಿಕತೆ ಯಾವ ರಾಜಕಾರಣಿಗಿದೆ. ವಿಮಾನ ನಿಲ್ದಾಾಣದಲ್ಲಿ ನಮಾಜ್ ಮಾಡಿದ ವಿಚಾರಕ್ಕೆೆ ಸಂಬಂಧಿಸಿದಂತೆ ಪ್ರತಿಕ್ರಿಿಯಿಸಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆೆ ಬೆಳೆದಿದೆ, ಅನೇಕ ಜನ ಇಲ್ಲಿಗೆ ಬರುತ್ತಾಾರೆ, ಬೇರೆ ಬೇರೆ ಧರ್ಮದವರು ಪ್ರಾಾರ್ಥನೆ ಮಾಡುವುದಕ್ಕೆೆ ಪ್ರತ್ಯೇಕ ವ್ಯವಸ್ಥೆೆ ಮಾಡಲಾಗಿರುತ್ತದೆ, ನಾವು ಸಣ್ಣತನ ತೋರುವ ಅಗತ್ಯ ಇಲ್ಲ, ಅವರಿಗೊಂದು ಪ್ರತ್ಯೇಕ ಕೊಠಡಿ ಮಾಡಿಕೊಡಬೇಕು, ಆಗ ಬಹಿರಂಗವಾಗಿ ಇಂಥ ದೃಶ್ಯಗಳನ್ನು ನೋಡುವುದು ತಪ್ಪುುತ್ತದೆ ಎಂದು ಅಭಿಪ್ರಾಾಯಪಟ್ಟರು.

