ಸುದ್ದಿಮೂಲ ವಾರ್ತೆ ಬೆಂಗಳೂರು, ನ.10:
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ನೋಂದಣಿಯಾಗಿಲ್ಲ. ಆದರೆ ಅದಕ್ಕೆೆ ಕೇಂದ್ರ ಕಚೇರಿ ಇದೆ. ಸದಸ್ಯರು, ಪದಾಧಿಕಾರಿಗಳಿದ್ದಾರೆ. ಬಿಜೆಪಿ ನಾಯಕರು ಸದಸ್ಯರಾಗಿದ್ದೇವೆ ಎಂದು ಹೇಳುತ್ತಾಾರೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಸ್ಥೆೆ ನೋಂದಣಿಯಾಗದೇ ಇದ್ದರೆ ಇದೆಲ್ಲಾ ಸಾಧ್ಯವೆ. ನಮಗಂತೂ ಅರ್ಥವಾಗುತ್ತಿಿಲ್ಲ. ಸಣ್ಣ, ಪುಟ್ಟ ಸಂಸ್ಥೆೆಗಳೂ ನೋಂದಣಿಯಾಗಿರುತ್ತವೆ. ಆರ್ಎಸ್ಎಸ್ಗೆ ಆಸ್ತಿಿ ಇದೆ, ಸಾರ್ವಜನಿಕರು, ಸದಸ್ಯರು ದೇಣಿಗೆ ನೀಡುತ್ತಾಾರೆ. ಸರಿ. ಯಾರು ಎಷ್ಟು ಕೊಟ್ಟರು, ಏನು ಕೊಟ್ಟರು ಲೆಕ್ಕ ಬೇಕಲ್ಲ. ಶಾಲೆಗಳು, ವಿವಿಗಳನ್ನು ಮಾಡಿದ್ದೇವೆ ಎನ್ನುತ್ತಾಾರೆ. ಅಷ್ಟೊೊಂದು ದೇಣಿಗೆ ಕೊಟ್ಟವರಾರು. ನೋಂದಣಿಯೇ ಆಗದ ಸಂಸ್ಥೆೆಗೆ ಇಷ್ಟೊೊಂದು ದೇಣಿಗೆ ಬರುತ್ತದಯೇ?. ಬರಲಿ ನಮಗೆ ಅಸೂಯೆ ಇಲ್ಲ. ಆದರೆ ಅದಕ್ಕೊೊಂದು ಲೆಕ್ಕ ಬೇಕಲ್ಲ. ಅದನ್ನು ಕೇಳಿದರೆ ದೇಶದ್ರೋಹಿಗಳು ಎಂದು ಹೇಳುತ್ತಾಾರೆ ಎಂದರು.
ಆರ್ಎಸ್ಎಸ್ಗೂ ಹಿಂದುಗಳಿಗೂ ಏನು ಸಂಬಂಧ. ನಾನು ಆರ್ಎಸ್ಎಸ್ ಅಲ್ಲ. ನಾನು ಹಿಂದೂ.ಆರ್ಎಸ್ಎಸ್ ನವರು ಮಾತ್ರ ಹಿಂದುಗಳು, ದೇಶಪ್ರೇೇಮಿಗಳು ಎಂಬಂತೆ ಬಿಂಬಿಸುತ್ತಿಿದ್ದಾರೆ. ಆರ್ಎಸ್ಎಸ್ ನಲ್ಲಿದ್ರೆೆ ಮಾತ್ರ ಹಿಂದೂಗಳಾ? ಇದ್ಯಾಾವ ನೀತಿ.
ಭಾಗವತ್ ಅವರು ಗೋಲ್ವಾಾಕರ್ ಬಗ್ಗೆೆ ಮಾತನಾಡಬೇಕಿತ್ತು. ಅವರ ಬಗ್ಗೆೆ ಮಾತನಾಡದೆ ರವಿಂದ್ರನಾಥ್ ಟ್ಯಾಾಗೋರ್, ನೇತಾಜಿ, ಸರ್ದಾರ್ಪಟೇಲ್ ಅವರುಗಳ ಬಗ್ಗೆೆ ಮಾತನಾಡಿದ್ದಾರೆ. ಅವರಿಗೂ ಆರ್ಎಸ್ಎಸ್ಗೂ ಸಂಬಂಧ ಇದೆಯಾ ಎಂದು ಪ್ರಶ್ನಿಿಸಿದರು.
ಆರ್ಎಸ್ಎಸ್ನಲ್ಲಿ ಕಪಟನತವಿದೆ. ದೇಶಕಟ್ಟೋೋಕೆ ಬಂದಿದ್ದೇವೆ ಅಂತಾ ಹೇಳ್ತಾಾರೆ. ದೇಶಕ್ಕಾಾಗಿ ಏನು ತ್ಯಾಾಗ ಮಾಡಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ ಅಷ್ಟೇ. ದೇಶದ ಜನರ ನಡುವೆಯೇ ಇವರು ಜಗಳ ತಂದಿಡುತ್ತಿಿದ್ದಾರೆ. ಮಹಾತ್ಮ ಗಾಂಧಿ ಕೊಂದವರು ಯಾರು?. ಯಾವ ಹಿನ್ನೆೆಲೆಯಿಂದ ಬಂದವರು, ನೆನಪು ಮಾಡಿಕೊಳ್ಳಲಿ ಎಂದರು.
ವಿಧಾನಸೌಧದಲ್ಲೇ ಭಯೋತ್ಪಾಾದಕರು ಇದ್ದಾರೆ ಎಂಬ ಕುಮಾರ ಸ್ವಾಾಮಿ ಹೇಳಿಕೆಗೆ ಅವರು ಕೇಂದ್ರದಲ್ಲಿ ದೊಡ್ಡ ಸಚಿವರು, ಅವರಿಗೆ ಮಾಹಿತಿ ಇರಬಹುದು. ಕೇಂದ್ರದ ಸಂಸ್ಥೆೆಗಳಿಂದ ತನಿಖೆ ಮಾಡಿಸಲಿ. ಇವರೆಲ್ಲ ಹೀಗೆ ಸುಮ್ಮನೆ ಮಾತಾಡುತ್ತಾಾರೆ ಅಷ್ಟೇ. ರಾಜ್ಯಕ್ಕೆೆ ಕುಮಾರ ಸ್ವಾಾಮಿ ಕೊಡುಗೆ ಶೂನ್ಯ ಎಂದರು.
ಆರ್ಎಸ್ಎಸ್ ಸಂವಿಧಾನ ವಿರೋಧಿ:
ದೇಶಕ್ಕೆೆ ಆರ್ಎಸ್ಎಸ್ ಕೊಡುಗೆ ನಿರ್ಲಜ್ಜ ದ್ರೋಹದ ನಿದರ್ಶನಗಳಿಂದ ಕೂಡಿದೆ. ಇಡೀ ಬಿಜೆಪಿ ಪರಿಸರ ವ್ಯವಸ್ಥೆೆ ಎಷ್ಟೇ ಪ್ರಯತ್ನಿಿಸಿದರೂ, ಆರ್ಎಸ್ಎಸ್ ಸಂವಿಧಾನ ವಿರೋಧಿ ಎಂಬ ಇತಿಹಾಸವನ್ನು ಎಂದಿಗೂ ಕಳಚಿಕೊಳ್ಳಲು ಸಾಧ್ಯವಿಲ್ಲ ಎಂದು ಗ್ರಾಾಮೀಣಾಭಿವೃದ್ಧಿಿ ಸಚಿವ ಪ್ರಿಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆರ್ಎಸ್ಎಸ್ ವಿರುದ್ಧ ವಾಗ್ದಾಾಳಿ ಮುಂದುವರೆಸಿರುವ ಅವರು, ಭಾರತ ಸರ್ಕಾರದ ಗೃಹ ಸಚಿವಾಲಯವು ಪಂಜಾಬ್ ಮುಖ್ಯ ಕಾರ್ಯದರ್ಶಿಗೆ 1948ರ ೆಬ್ರವರಿ 24 ರಂದು ಬರೆದ ಪತ್ರ ಹಂಚಿಕೊಂಡಿರುವ ಅವರು, ಇದರಲ್ಲಿ ಆರ್ಎಸ್ಎಸ್ ರಾಷ್ಟ್ರಧ್ವಜವನ್ನು ಹೇಗೆ ಅವಮಾನಿಸಿದೆ ಎಂಬುದನ್ನು ದಾಖಲಿಸಲಾಗಿದೆ ಎಂದಿದ್ದಾರೆ.
ಬಿಜೆಪಿ ನಾಯಕರು ಮತ್ತು ಸ್ವಯಂಸೇವಕರು ಆರ್ಎಸ್ಎಸ್ನ ನೈಜ ಇತಿಹಾಸವನ್ನು ತಿಳಿದುಕೊಳ್ಳುವ ಸುಸಮಯ ಇದಾಗಿದೆ. ನಮ್ಮ ರಾಷ್ಟ್ರಧ್ವಜಕ್ಕೆೆ ಅಗೌರವ ತೋರಿಸಿ 100 ವರ್ಷಗಳು ತುಂಬಿವೆ. ಸ್ವಾಾತಂತ್ರ್ಯ ಚಳವಳಿಗೆ ದ್ರೋಹ ಬಗೆದು 100 ವರ್ಷಗಳಾಗಿವೆ. ಭಾರತದ ಸಂವಿಧಾನವನ್ನು ವಿರೋಧಿಸಿ 100 ವರ್ಷಗಳು ಪೂರ್ಣಗೊಂಡಿದೆ ಮತ್ತು ಆರ್ಎಸ್ಎಸ್ ರಾಷ್ಟ್ರವಿರೋಧಿಯಾಗಿ 100 ವರ್ಷಗಳು ತುಂಬಿವೆ ಎಂದು ಹೇಳಿದ್ದಾರೆ.

