ಸುದ್ದಿಮೂಲ ವಾರ್ತೆ ರಾಯಚೂರು, ನ.10:
ಖಾತಾ ಬದಲಾವಣೆ, ಇ-ಖಾತಾ ಪಡೆಯುವಿಕೆ ಸೇರಿದಂತೆ ಕಂದಾಯ ಆಡಳಿತಕ್ಕೆೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರು ಮತ್ತು ಮಹಾನಗರ ಪಾಲಿಕೆಯ ಆಡಳಿತ ವೈಲ್ಯ ಕುರಿತಂತೆ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳು, ಶಾಸಕರು, ಸಚಿವರು, ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಎಚ್ಚೆೆತ್ತುಕೊಂಡಿರುವ ಮಹಾನಗರ ಪಾಲಿಕೆಯ ಆಯುಕ್ತರು ಮನೆಬಾಗಿಲಿಗೆ ಕಂದಾಯ ಅದಾಲತ್ ತೆಗೆದುಕೊಂಡು ಹೋಗುವ ಮೂಲಕ ಕಂದಾಯ ದೂರುಗಳಿಗೆ ಅಂತ್ಯಗೊಳಿಸಲು ಮುಂದಾಗಿದ್ದಾಾರೆ.
ಈ ಕುರಿತಂತೆ ಇಂದು ಪ್ರಕಟಣೆ ಹೊರಡಿಸಿರುವ ಆಯುಕ್ತ ಜುಬೀನ್ ಮೊಹೋಪಾತ್ರಾಾ ಪರವಾಗಿ ಉಪಾಯುಕ್ತ ಕಂದಾಯ ವಿಭಾಗ ಇವರು ಈ ಕಾರ್ಯಕ್ರಮದಲ್ಲಿ ಖಾತಾ ಬದಲಾವಣೆ, ಇ-ಖಾತಾ (ಎ ಮತ್ತು ಬಿ), ಇ-ಖಾತಾ ದಾಖಲೆಯಲ್ಲಿ ತಿದ್ದುಪಡಿ, ಆಸ್ತಿಿ ತೆರಿಗೆ ಸಂಬಂಧಿಸಿದ ಅಹ್ವಾಾಲುಗಳು, ಕಂದಾಯ ಶಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ತಕರಾರು ನಿವಾರಣೆ ಕುರಿತು ಮನೆ ಬಾಗಿಲಿಗೆ ತೆರಳಿ ದಾಖಲೆ ಪರಿಶೀಲಿಸಿ ಸ್ಥಳದಲ್ಲೇ ಪರಿಹರಿಸಲು ಮುಂದಾಗಿದ್ದಾಾರೆ.
ಇದಕ್ಕಾಾಗಿ ಕಂದಾಯ ಅದಾಲತ್ನ್ನು ಬೆಳಿಗ್ಗೆೆ 10.30ರಿಂದ ಸಂಜೆ 5.30ರ ವರೆಗೆ ಆಯಾ ವಾರ್ಡ್ ವ್ಯಾಾಪ್ತಿಿಯಲ್ಲಿ ನಿಗದಿಗೊಳಿಸಿದ ಸ್ಥಳದಲ್ಲಿ ನವೆಂಬರ್ 14ರಿಂದ ಡಿಸೆಂಬರ್ 17ರ ವರೆಗೆ ಈ ಕಂದಾಯ ಅದಾಲತ್ ನಡೆಸಲಾಗುವುದೆಂದು ತಿಳಿಸಿದ್ದಾಾರೆ.
ಇದಕ್ಕಾಾಗಿ ವಲಯ 1, ವಲಯ 2 ಎಂದು ವಿಭಾಗ ಮಾಡಿ ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಡಾಟಾ ಎಂಟ್ರಿಿ ಆಪರೇಟರ್ಗಳಿಗೆ ಜವಾಬ್ದಾಾರಿ ವಹಿಸಲಾಗಿದೆ.
ಈ ಕಾರ್ಯಕ್ರಮದಡಿ ಸಾರ್ವಜನಿಕರು ತಮ್ಮ ಆಸ್ತಿಿಗಳ ಕುರಿತಂತೆ ಖಾತಾ ಬದಲಾವಣೆ, ಇ-ಖಾತಾ (ಎ ಮತ್ತು ಬಿ) ಇ-ಖಾತಾ ದಾಖಲೆ ತಿದ್ದುಪಡಿ, ಆಸ್ತಿಿ ತೆರಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಗಳಿದ್ದರೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಆಯಾ ವಾರ್ಡ್ವಾರು ಕಂದಾಯ ಅದಾಲತ್ ನಡೆಯುವ ದಿನಾಂಕ ಮತ್ತು ಸ್ಥಳ ಹಾಗೂ ಸಂಬಂಧಿಸಿದ ಕರವಸೂಲಿಗಾರ, ಕಂಪ್ಯೂೂಟರ್ ಆಪರೇಟರ್ ಪಟ್ಟಿಿಯನ್ನು ನೋಟಿಸ್ ಬೋರ್ಡಿಗೆ ಪ್ರಕಟಿಸಿದೆ ಎಂದು ಪತ್ರಿಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.

