ಸುದ್ದಿಮೂಲ ವಾರ್ತೆ ಬೆಂಗಳೂರು, ನ.11:
ಟೆಲಿೆನ್ ಕದ್ದಾಲಿಕೆ ಆರೋಪ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಇಲಾಖಾವಾರು ತನಿಖೆ ರದ್ದುಗೊಳಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಾಯಮಂಡಳಿ (ಸಿಎಟಿ)ಯ ಆದೇಶಕ್ಕೆೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆ ರದ್ದುಪಡಿಸಿದ್ದ ಸಿಎಟಿ ಆದೇಶವನ್ನು ಪ್ರಶ್ನಿಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಾಯಮೂರ್ತಿ ಬಿ.ಎಂ.ಶ್ಯಾಾಮ್ ಪ್ರಸಾದ್ ಮತ್ತು ಟಿ.ಎಂ.ನದ್ಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸಿಎಟಿ ಆದೇಶಕ್ಕೆೆ ಮಧ್ಯಂತರ ತಡೆ ನೀಡಲು ನಿರಾಕರಿಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅಂತಿಮ ವಿಚಾರಣೆಯನ್ನು ಡಿ.4ಕ್ಕೆೆ ಮುಂದೂಡಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಿ, ಅಲೋಕ್ ಕುಮಾರ್ ವಿರುದ್ಧ ಟೆಲಿೆನ್ ಕದ್ದಾಲಿಕೆ ಆರೋಪವಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಸಿಬಿಐ, ಕ್ರಿಿಮಿನಲ್ ಆರೋಪವಿಲ್ಲ ಎಂದು ತಿಳಿಸಿ ಪ್ರಕರಣವನ್ನು ಮುಕ್ತಾಾಯಗೊಳಿಸಿರುವುದಾಗಿ ವಿಶೇಷ ನ್ಯಾಾಯಾಲಯಕ್ಕೆೆ ವರದಿಯನ್ನು ಸಲ್ಲಿಸಿತ್ತು. ಅಲ್ಲದೆ, ಪ್ರಕರಣ ಸಂಬಂಧ ಇಲಾಖಾವಾರು ತನಿಖೆ ನಡೆಸಲು ಸರ್ಕಾರಕ್ಕೆೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಿಸಿ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಎಟಿ, ಇಲಾಖಾವಾರು ತನಿಖೆ ರದ್ದುಪಡಿಸಿ ಆದೇಶಿಸಿದೆ. ಆ ಆದೇಶವನ್ನು ಪ್ರಶ್ನಿಿಸಿ ಸರ್ಕಾರವು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ವಾದ ಆಲಿಸಿದ ನ್ಯಾಾಯಪೀಠ, ತಡೆ ನೀಡಲು ನಿರಾಕರಿಸಿ, ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.
ಈ ನಡುವೆ ಅಲೋಕ್ ಕುಮಾರ್ ಸೇವಾ ಹಿರಿತನದಲ್ಲಿ ತನಗಿಂತ ಕಡಿಮೆಯಿರುವವರಿಗೆ ಬಡ್ತಿಿ ನೀಡಿದ್ದು, ತನಗೆ ಬಡ್ತಿಿ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಆದ್ದರಿಂದ ಸಿಎಟಿ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.
2019ರಲ್ಲಿ ಟೆಲಿೆನ್ ಕದ್ದಾಲಿಕೆ ಆರೋಪ ಪ್ರಕರಣ ಬೆಳಕಿಗೆ ಬಂದಿತ್ತು. ಈ ಆರೋಪ ಸಂಬಂಧ ತನಿಖೆ ನಡೆಸಿದ್ದ ಸಿಬಿಐ ಅಲೋಕ್ ಕುಮಾರ್ ವಿರುದ್ಧ ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಅಲ್ಲದೆ, ಹೆಚ್ಚುವರಿ ಅಂತಿಮ ಪಟ್ಟಿಿ ಸಲ್ಲಿಸಿದ್ದು, ಇಲಾಖೆಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು. ಈ ವರದಿ ಅನ್ವಯ ರಾಜ್ಯ ಸರ್ಕಾರ ಇಲಾಖಾವಾರು ತನಿಖೆಗೆ ಆದೇಶಿಸಿತ್ತು. ಅಲ್ಲದೆ, ಅರ್ಜಿದಾರರಿಗೆ ಸಿಗಬೇಕಾದ ಬಡ್ತಿಿ ಸೇರಿದಂತೆ ಇತರೆ ಸೌಲಭ್ಯಗಳಿಗೆ ತಡೆ ನೀಡಿತ್ತು.
ಇದನ್ನು ಸಿಎಟಿಯಲ್ಲಿ ಪ್ರಶ್ನಿಿಸಿದ್ದ ಅರ್ಜಿದಾರ ಅಲೋಕ್ ಕುಮಾರ್, ತಮ್ಮ ವಿರುದ್ಧ ಇಲಾಖಾವಾರು ತನಿಖೆ ಕೈಗೊಳ್ಳುವಂತೆ ಸಿಬಿಐ ಸಲ್ಲಿಸಿರುವ ವರದಿ ಮತ್ತು ತಮ್ಮ ವಿರುದ್ಧದ ಇಲಾಖಾವಾರು ತನಿಖೆಗೆ ಆದೇಶಿಸಿರುವ ಸರ್ಕಾರದ ಕ್ರಮ ರದ್ದುಪಡಿಸಬೇಕೆಂದು ಕೋರಿದ್ದರು.
ಅರ್ಜಿಯ ಕುರಿತಂತೆ ವಿಚಾರಣೆ ನಡೆಸಿದ್ದ ನ್ಯಾಾಯಮೂರ್ತಿ ಬಿ.ಕೆ.ಶ್ರಿೈವಾತ್ಸವ್ ಮತ್ತು ಸಂತೋಷ್ ಮೆಹ್ರಾಾ ಅವರಿದ್ದ ನ್ಯಾಾಯಪೀಠ, ವಿಭಿನ್ನ ತೀರ್ಪು ಬಂದಿತ್ತು. ಬಳಿಕ ಪ್ರಕರಣವನ್ನು ಮೂರನೇ ನ್ಯಾಾಯಾಧಿೈಶರಿಗೆ ವರ್ಗಾವಣೆ ಮಾಡಲಾಗಿತ್ತು. ಸಿಎಟಿ ಅಧ್ಯಕ್ಷ ನ್ಯಾಾಯಮೂರ್ತಿ ರಂಜಿತ್ ವಸಂತರಾವ್ ಮೊರೆ ಅವರಿದ್ದ ನ್ಯಾಾಯಪೀಠ, ಇಲಾಖಾವಾರು ತನಿಖೆ ಆದೇಶ ರದ್ದುಗೊಳಿಸಿತ್ತು. ಅಲ್ಲದೆ, ಅರ್ಜಿದಾರ ಅಲೋಕ್ ಕುಮಾರ್ಗೆ ಸಲ್ಲಬೇಕಾದ ಎಲ್ಲಾಾ ರೀತಿಯ ಸವಲತ್ತುಗಳು ಲಭ್ಯವಾಗುವಂತೆ ಮಾಡಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.

