ಸುದ್ದಿಮೂಲ ವಾರ್ತೆ ಮಾನ್ವಿಿ, ನ.11:
ಜೆಡಿಎಸ್ ಕೋರ್ ಕಮಿಟಿ ಸದಸ್ಯರನ್ನಾಾಗಿ ಮಾನ್ವಿಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಇವರನ್ನು ನೇಮಕ ಮಾಡಲಾಗಿದೆ.
ಸೋಮವಾರ ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗಾಗಿ ಜೆಡಿಎಸ್ ಕೋರ್ಕಮಿಟಿಯನ್ನು ಪುನರ್ ರಚನೆ ಮಾಡಿದ್ದು, ಮಾಜಿ ಉಪ ಸಭಾಧ್ಯಕ್ಷ ಎಂ. ಕೃಷ್ಣಾಾರೆಡ್ಡಿಿ ಅವರನ್ನು ಅಧ್ಯಕ್ಷರನ್ನಾಾಗಿ ನೇಮಕ ಮಾಡಲಾಗಿದೆ.
ಕೋರ್ ಕಮಿಟಿ ಸದಸ್ಯರಾಗಿ ನೇಮಕವಾದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪತ್ರಿಿಕೆಯೊಂದಿಗೆ ಮಾತನಾಡಿ ಪಕ್ಷಕ್ಕಾಾಗಿ ಸಲ್ಲಿಸಿದ ಸೇವೆ, ಸಂಘಟನೆ ಬಲವರ್ಧನೆಗೆ ಮಾಡಿದ ಶ್ರಮ ಮತ್ತು ತಳಮಟ್ಟದ ಹೋರಾಟ ಪರಿಗಣಿಸಿ ಪಕ್ಷದ ಹಿರಿಯರು ನನ್ನನ್ನು ಕೋರ್ ಕಮಿಟಿ ಸದಸ್ಯರನ್ನಾಾಗಿ ನೇಮಕ ಮಾಡಿದ್ದಾರೆ. ನನ್ನ ಮೇಲೆ ಇಟ್ಟಿಿರುವ ವಿಶ್ವಾಾಸಕ್ಕೆೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗಾಗಿ ಶ್ರದ್ಧೆೆ, ನಿಷ್ಠೆೆ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡುವುದಾಗಿ ಹೇಳಿದರು.

