ಸುದ್ದಿಮೂಲ ವಾರ್ತೆ ಮೈಸೂರು, ನ.11:
ಕೋರ್ ಕಮಿಟಿ ಅಧ್ಯಕ್ಷ ಸ್ಥಾಾನದಿಂದ ನನ್ನನ್ನು ಕೈ ಬಿಟ್ಟಿಿದ್ದಕ್ಕೆೆ ನನಗೆ ಯಾವುದೇ ಬೇಸರ ಇಲ್ಲ. ನಾನು ಜೆಡಿಎಸ್ನಲ್ಲೇ ಇದ್ದೀನಿ, ಇರುತ್ತೇನೆ ಎಂದು ಮಾಜಿ ಸಚಿವರಾದ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಾಮಿ ಆರೋಗ್ಯ ಸರಿ ಮಾಡಿಕೊಂಡು ಜೆಡಿಎಸ್ ಕಟ್ಟಲು ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ನನ್ನನ್ನು ಮಾಡದೇ ಹೋದಾಗ ನನಗೆ ಬೇಸರವಾಯ್ತು. ಅಂದು ಮನಸ್ಸಿಿಗೆ ನೋವಾಗಿ ಪಕ್ಷದ ಯಾವುದೇ ಸಭೆಗಳಲ್ಲಿ ಭಾಗವಹಿಸಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾಾ ಹೇಳಿದರು.
ಕೋರ್ ಕಮಿಟಿ ಅಧ್ಯಕ್ಷ ಮಾಡಿದ್ದಾಗ ಇಡೀ ರಾಜ್ಯ ಸುತ್ತಿಿ ಸಭೆ ಮಾಡಿದ್ದೇನೆ. ಸಿದ್ದರಾಮಯ್ಯ ಕಾಂಗ್ರೆೆಸ್ಗೆ ಹೋದ ಮೇಲೂ ದೇವೇಗೌಡರ ಜೊತೆ ಪಕ್ಷ ಕಟ್ಟಿಿದ್ದೆ. ಆರ್ಥಿಕವಾಗಿ ಜಿ ಟಿ ದೇವೇಗೌಡ ಬಲಹೀನವಾಗಿರುವುದು ಕುಮಾರಸ್ವಾಾಮಿಗೆ ಗೊತ್ತಾಾಗಿದೆ ಎಂದರು.
ಈಗ ಕುಮಾರಸ್ವಾಾಮಿ ಕೇಂದ್ರ ಸಚಿವರು, ಶಕ್ತಿಿವಂತರಾಗಿದ್ದಾರೆ. ಯಾರು ಇರದೇ ಇದ್ದರೂ ಪಕ್ಷ ಕಟ್ಟುತ್ತೇನೆ ಎಂಬ ವಿಶ್ವಾಾಸ ಬಂದಿದೆ. ಸಿಎಂ ಆಗುವ ಕನಸಿನೊಂದಿಗೆ ಪಕ್ಷ ಕಟ್ಟಲು ಹೊರಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಸಿದ್ದರಾಮಯ್ಯ ಕಾಂಗ್ರೆೆಸ್ಗೆ ಹೋದಾಗ ಜಿ ಟಿ ದೇವೇಗೌಡನ ಸಂಘಟನೆ ಶಕ್ತಿಿ ಬೇಕಾಗಿತ್ತು. ನಾನು ದ್ವೇಷ ರಾಜಕಾರಣ ಮಾಡಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ಬಗ್ಗೆೆ ಬೇಸರ ವ್ಯಕ್ತಪಡಿಸಿದರು.

