ಸುದ್ದಿಮೂಲ ವಾರ್ತೆ ಸಿಂಧನೂರು, ನ.11:
ಅಣ್ಣನ ಹೆಂಡತಿ ಜೊತೆಗೆ ತಮ್ಮ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ತಮ್ಮನನ್ನು ಅಣ್ಣ ಕೊಡಲಿಯಿಂದ ಕೊಚ್ಚಿಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ವೆಂಕಟೇಶ್ವರ ಕ್ಯಾಾಂಪಿನಲ್ಲಿ ಇತ್ತೀಚೆಗೆ ನಡೆದಿದೆ.
ರಾಜು ಅಲಿಯಾಸ್ ಎಮ್ಮಿಿರಾಜು (32) ಕೊಲೆಯಾದ ವ್ಯಕ್ತಿಿ. ಸುರೇಶ್ ಅಲಿಯಾಸ್ ಸೂರಿಬಾಬು ಹತ್ಯಗೈದ ಆರೋಪಿ. ಸೂರಿಬಾಬು ಹೈದ್ರಾಾಬಾದ್ನಲ್ಲಿ ಪತ್ನಿಿಯನ್ನು ಬಿಟ್ಟು ಊರಿಗೆ ಬಂದಿದ್ದ. ತಮ್ಮ ರಾಜು ಊರಿನಲ್ಲಿ ಟ್ಯಾಾಕ್ಟರ್ ಓಡಿಸಿಕೊಂಡು ಇದ್ದನು. ಸೂರಿಬಾಬು ಇಸೀ ಅಂಗಡಿ ಇಟ್ಟುಕೊಂಡು ವೆಂಕಟೇಶ್ವರ ಕ್ಯಾಾಂಪಿನಲ್ಲಿ ಜೀವನ ನಡೆಸುತ್ತಿಿದ್ದನು. ಭಾನುವಾರ ರಾತ್ರಿಿ ಎಣ್ಣೆೆ ಪಾರ್ಟಿ ವೇಳೆ ಪತ್ನಿಿಯ ವಿಚಾರವಾಗಿ ಅಣ್ಣ ಮತ್ತು ತಮ್ಮ ಇಬ್ಬರ ನಡುವೆ ಹೊಡೆದಾಟ ನಡೆದಿದೆ. ಈ ವೇಳೆ ಕೊಡಲಿ ತೆಗೆದುಕೊಂಡು ತಮ್ಮ ರಾಜು ತಲೆಗೆ ಹೊಡೆದು ಅಣ್ಣ ಸೂರಿಬಾಬು ಕೊಲೆ ಮಾಡಿದ್ದಾಾನೆ. ಆರೋಪಿ ಸೂರಿ ಬಾಬುನನ್ನು ಪೊಲೀಸರು ವಶಕ್ಕೆೆ ಪಡೆದು ಗ್ರಾಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾಾರೆ.

