ಸುದ್ದಿಮೂಲ ವಾರ್ತೆ ಮೈಸೂರು, ನ.11:
ದೇಶದ ರಾಜಧಾನಿ ದೆಹಲಿ ಸ್ಫೋೋಟ ಬಿಹಾರ ಚುನಾವಣೆ ಮೇಲೆ ಮಾತ್ರವೇ ಅಲ್ಲ ಬಿಜೆಪಿ ವಿರುದ್ಧವಾಗಿ ಕೂಡ ಪರಿಣಾಮ ಬೀರಬಹುದು. ಅದು ಕಾಂಗ್ರೆೆಸ್ ಪರವಾಗಿ ಆಗಬಹುದು ಎಂದು ಸಿಎಂ ಸಿದ್ದರಾಮಯ್ಯ ವಿಶ್ಲೇಷಣೆ ಮಾಡಿದ್ದಾರೆ.
ಮಂಗಳವಾರ ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಆಗಿರುವ ಭದ್ರತಾ ವೈಲ್ಯ ಆಗಿದ್ದು, ಇದಕ್ಕೆೆ ಕೇಂದ್ರವೇ ತನಿಖೆ ನಡೆಸಿ ಉತ್ತರಿಸಲಿ. ಬಾಂಬ್ ಸ್ಫೋೋಟಗಳು ಆಗಬಾರದು. ಇದರಿಂದಾಗುವ ಅಮಾಯಕರ ಜೀವಹಾನಿ ಆಗುವುದು ತುಂಬಾ ಬೇಸರದ ಸಂಗತಿ ಎಂದು ಹೇಳಿದರು.
ಚುನಾವಣೆ ವೇಳೆಯ ಬಾಂಬ್ ಬ್ಲಾಾಸ್ಟ್ ಗಳ ಬಗ್ಗೆೆ ಕೇಂದ್ರ ಸರ್ಕಾರವೇ ಹೇಳಬೇಕು. ಸಾವು ಸಾವೇ. ಘಟನೆ ನಡೆಯಬಾರದು. ದೆಹಲಿಯ ಕೆಂಪುಕೋಟೆ ಬಳಿಯೇ ದುರಂತ ನಡೆದಿದೆ. ಚುನಾವಣೆ ವೇಳೆಯೇ ಘಟನೆ ನಡೆಯುವುದು ನನಗೆ ಗೊತ್ತಿಿಲ್ಲ ಎಂದರು.
ಭಾರತ ಹಿಂದೂ ರಾಷ್ಟ್ರ ಮಾಡಬೇಕು ಅಂತಾರೆ. ಇದು ಸಾಧ್ಯವೇ ಇಲ್ಲ. ನಮ್ಮದು ಬಹುತ್ವ ದೇಶ. ನಮ್ಮಲ್ಲಿ ಎಲ್ಲ ಜಾತಿ, ಜನಾಂಗ, ಭಾಷೆ,ಧರ್ಮ ಎಲ್ಲವೂ ಇದೆ. ಎಲ್ಲರನ್ನೂ ಒಳಗೊಳ್ಳುವ ದೇಶ ನಮ್ಮ ಭಾರತ. ನಮ್ಮದು ಭಾರತ ದೇಶ. ಭಾರತ ಸಂವಿಧಾನಬದ್ಧ ಬಹುತ್ವದ ದೇಶ ಎಂದು ಪ್ರತಿಪಾದನೆ ಮಾಡಿದರು.
ಮೈಸೂರಲ್ಲಿ ಸತತ 10 ಗಂಟೆಗಳು ಕೆಡಿಪಿ ಸಭೆ
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ಸತತ 10 ಗಂಟೆಗಳ ಕಾಲ ನಡೆದ ಕೆಡಿಪಿ ಸಭೆಯ ಪ್ರಮುಖ ವಿಚಾರಗಳ ಬಗ್ಗೆೆ ವಿವರಿಸಿ, ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಿಲ್ಲದೆ ಸಂಘಟಿತ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಅಪರಾಧ ಪ್ರಮಾಣಗಳು ಹೆಚ್ಚಾಾದರೆ ಪೊಲೀಸ್ ಅಧಿಕಾರಿಗಳೇ ಹೊಣೆ ಆಗ್ತಾಾರೆ. ಮೈಸೂರು ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಕೋಮುಗಲಭೆ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿದ ತಕ್ಷಣ ಇಡೀ ಜಿಲ್ಲೆಯಲ್ಲಿ ಈಗ ಅನಾಗರಿಕ ಘಟನೆಗಳು ಬಂದ್ ಆಗಿವೆ. ಅಲ್ಲಿ ಇಬ್ಬರು ಅಧಿಕಾರಿಗಳಿಂದ ಇಷ್ಟೆೆಲ್ಲಾ ಸಾಧ್ಯ ಆಗುತ್ತೆೆ ಎನ್ನುವುದಾದರೆ ಉಳಿದ ಕಡೆಗಳಲ್ಲೂ ಸಾಧ್ಯವಿದೆ. ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿ, ವೃತ್ತಿಿಪರವಾಗಿ ನಡೆದುಕೊಂಡರೆ ಸಾಕು ಎನ್ನುವ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ಡಿಸಿ, ಎಸಿ ತಹಶಿಲ್ದಾಾರ್ ನ್ಯಾಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಲು ಸೂಚನೆ ನೀಡಿದ್ದು, ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡೂ ವರ್ಷಗಳಲ್ಲಿ ಇದ್ದ 8 ಸಾವಿರ ಪ್ರಕರಣಗಳಲ್ಲಿ ಈಗಾಗಲೇ 7,540ರಷ್ಟು ಪ್ರಕಣಗಳು ಇತ್ಯರ್ಥ ಆಗಿವೆ. ಉಳಿದವೂ ಬೇಗ ಇತ್ಯರ್ಥ ಆಗಬೇಕು. ಹಾಗೂ ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿಗಳು ಹಾಸ್ಟೆೆಲ್ಗಳಿಗೆ ದಿರ್ಢೀ ಭೇಟಿ ನೀಡಿ ಊಟ ಮತ್ತು ಹಾಸ್ಟೆೆಲ್ ಗುಣಮಟ್ಟ ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದರು.
ನಾನು ಮೈಸೂರು ಜಿಲ್ಲೆಯವನೇ ಆಗಿರುವುದರಿಂದ ನಾನೇ ಕೆಡಿಪಿ ಸಭೆ ನಡೆಸುತ್ತೇನೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಪರಾಧಿಗಳು, ರಿಯಲ್ ಎಸ್ಟೇಟ್, ರೌಡಿಗಳನ್ನು ಹೊರತುಪಡಿಸಿ ಪೊಲೀಸರು ಸಾರ್ವಜನಿಕರ ಜೊತೆ ಉತ್ತಮವಾಗಿ ವರ್ತಿಸುವಂತೆ ಹೇಳಲಾಗಿದೆ ಎಂದು ಹೇಳಿದರು.
ಗ್ರೇೇಟರ್ ಮೈಸೂರು ಸಂಪುಟ ಸಭೆಯಲ್ಲಿ
ಗ್ರೇೇಟರ್ ಮೈಸೂರು ಬಗ್ಗೆೆ ಪ್ರಾಾಥಮಿಕ ಚರ್ಚೆ ಆಗಿದೆ. ಇನ್ನಷ್ಟು ಸಮಗ್ರ ಚರ್ಚೆ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಅಲ್ಲೂ ಚರ್ಚಿಸಲಾಗುವುದು. ಅಲ್ಲಿನ ತೀರ್ಮಾನದಂತೆ ನಿರ್ಧಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಶಾಸಕರಾದ ಕಡತೂರು ಶಿವಕುಮಾರ್, ಡಿ. ರವಿಶಂಕರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಇದ್ದರು.
ರಾಹುಲ್ ಗಾಂಧಿ ಟೈಮ್ ಕೊಟ್ಟರೆ ಸಂಪುಟ ವಿಸ್ತರಣೆ ಚರ್ಚೆ
ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಾಂತಿ ಆಗುತ್ತದೆ ಎಂದು ಹೇಳುತ್ತಿಿರುವ ಬೆನ್ನಲ್ಲೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ಮಾಡಿದ್ದು, ಅವರಿಗೆ ಇನ್ನೂ ಹೈಕಮಾಂಡ್ ಕಾಲಾವಕಾಶ ನೀಡಿಲ್ಲ.
ದೆಹಲಿ ಪ್ರವಾಸ ಒಂದೇ ದಿನಕ್ಕೆೆ ಮೊಟಕುಗೊಳಿಸಿದ್ದು, ಮಂಗಳವಾರ ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಿ ನಡೆಸಿ ಮಾತನಾಡುತ್ತಾಾ ಸಿದ್ದರಾಮಯ್ಯ ಅವರು ದೆಹಲಿ ಭೇಟಿ ಬಗ್ಗೆೆ ಈ ಬಗ್ಗೆೆ ಖುದ್ದು ವಿವರಣೆ ನೀಡಿದರು.
ನ.15 ಕ್ಕೆೆ ದೆಹಲಿಗೆ ಹೋಗುತ್ತೇನೆ. ಕಪಿಲ್ ಸಿಬಲ್ ಅವರ ಕಾರ್ಯಕ್ರಮ ಇದೆ. ಅದಕ್ಕಾಾಗಿ ದೆಹಲಿಗೆ ಹೋಗುತ್ತೇನೆ. ಅವತ್ತೆೆ ಹೋಗಿ ಅವತ್ತೆೆ ವಾಪಸ್ ಬರುವ ಯೋಚನೆ ಇದೆ. ರಾಹುಲ್ ಗಾಂಧಿ ಅವರ ಸಮಯ ಕೇಳಿದ್ದೇನೆ. ಸಮಯ ಕೊಟ್ಟರೆ ಅಲ್ಲೇ ಉಳಿದುಕೊಂಡು ಬರುತ್ತೇನೆ. ರಾಹುಲ್ ಗಾಂಧಿ ಸಮಯ ಕೊಟ್ಟರೆ ಸಂಪುಟ ಪುನಾರಚನೆ ಬಗ್ಗೆೆ ಚರ್ಚೆ ಮಾಡುತ್ತೇನೆ, ಇಲ್ಲದಿದ್ದರೆ ಇಲ್ಲ ಎಂದು ಹೇಳಿದರು.
ನಾನು ಯಾರನ್ನೂ ಪಕ್ಷಕ್ಕೆೆ ಬನ್ನಿಿ ಎಂದು ಕರೆಯಲ್ಲ
ಶಾಸಕ ಜಿ. ಟಿ. ದೇವೇಗೌಡರನ್ನು ಜೆಡಿಎಸ್ ಕೋರ್ ಕಮಿಟಿಯಿಂದ ತೆಗೆದುಹಾಕಿರುವ ಬಗ್ಗೆೆ ಪ್ರತಿಕ್ರಿಿಯಿಸಿದ ಸಿಎಂ, ಅದು ಅವರ ಪಕ್ಷಕ್ಕೆೆ ಸೇರಿದ್ದು. ನಾನು ಯಾರನ್ನೂ ನಮ್ಮ ಪಕ್ಷಕ್ಕೆೆ ಬನ್ನಿಿ ಎಂದು ಕರೆಯುವುದಿಲ್ಲ. ಬಂದರೆ ಯಾಕೆ ಬಂದ್ರೀೀ ಎಂದು ಕೇಳುವುದಿಲ್ಲ. ಅದು ಅವರವರಿಗೆ ಬಿಟ್ಟಿಿದ್ದು. ನಾನು ಜಿ ಟಿ ದೇವೇಗೌಡ ಒಂದೇ ಕ್ಷೇತ್ರದವರು. ಹೀಗಾಗಿ ಸ್ನೇಹ ಇದೇ ಅಷ್ಟೇ ಎಂದು ಹೇಳಿದರು.

