ಸುದ್ದಿಮೂಲ ವಾರ್ತೆ ಕೋಲಾರ, ನ.11:
ಮಾಲೂರು ವಿಧಾನ ಸಭಾ ಕ್ಷೇತ್ರದ ಮರು ಮತ ಎಣಿಕೆ ಲಿತಾಂಶವನ್ನು ಜಿಲ್ಲಾಧಿಕಾರಿ ಮುಚ್ಚಿಿದ ಲಕೋಟೆಯಲ್ಲಿ ಸುಪ್ರೀೀಂ ಕೋರ್ಟ್ಗೆ ಶೀಘ್ರದಲ್ಲೇ ಸಲ್ಲಿಸಲಿದ್ದಾರೆ.
ಸುಪ್ರೀೀಂಕೋರ್ಟ್ ಸೂಚನೆಯಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಲಾಯಿತು. ಕೋಲಾರ ಹೊರ ವಲಯದಲ್ಲಿರುವ ತೋಟಗಾರಿಕೆ ವಿವಿ ಆವರಣದಲ್ಲಿ ಭಾರೀ ಭದ್ರತೆಯಲ್ಲಿ ಮತ ಎಣಿಕೆ ನಡೆಯಿತು.
ಇಡೀ ದೇಶದಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಎಲ್ಲ ಮತಗಳನ್ನು ಮರು ಎಣಿಕೆ ಮಾಡಿದ ಪ್ರಥಮ ಪ್ರಕರಣವಾಗಿದ್ದು ಎಲ್ಲರ ಗಮನ ಸೆಳೆದಿತ್ತು. ಮಂಗಳವಾರ ಬೆಳಗ್ಗೆೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾಾರಂಭವಾಗಿದ್ದು, 18 ಸುತ್ತುಗಳು ಮತ ಎಣಿಕೆ ನಡೆಯಿತು. ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಯಿತು.
ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ೆನ್ ಹಾಗೂ ಎಲೆಕ್ಟ್ರಾಾನಿಕ್ ಉಪಕರಣಗಳ ಬಳಕೆ ನಿಷೇಧ ಮಾಡಲಾಗಿತ್ತು. ಮಾಧ್ಯಮದವರಿಗೂ ಚುನಾವಣಾಧಿಕಾರಿಗಳು ನಿಷೇಧ ಹೇರಿದ್ದರು. ಮತ ಎಣಿಕೆ ಕೇಂದ್ರ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆೆ ಕೂಡ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರದ ಸುತ್ತ ಸಿಸಿಟಿವಿ ಕಣ್ಗಾಾವಲು ಹಾಕಲಾಗಿತ್ತು. ಅಲ್ಲದೇ ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಮತಕೇಂದ್ರದ ಒಳಗೆ ಅಭ್ಯರ್ಥಿ ಹಾಗೂ ಅವರ ಏಜೆಂಟ್ಗಳನ್ನು ಹೊರತು ಪಡಿಸಿ ಮತ್ಯಾಾರಿಗೂ ಪ್ರವೇಶ ನೀಡಿರಲಿಲ್ಲ.
ಸುಪ್ರೀೀಂ ಕೋರ್ಟ್ ಮೆಟ್ಟಿಿಲೇರಿದ್ದ ಶಾಸಕರು: ಮಾಲೂರು ಕ್ಷೇತ್ರದ ಕಾಂಗ್ರೆೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಆಯ್ಕೆೆ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆೆ ಸುಪ್ರೀೀಂ ಕೋರ್ಟ್ ಅಕ್ಟೋೋಬರ್ 14 ರಂದು ತಡೆ ನೀಡಿತ್ತು. ತಮ್ಮ ಶಾಸಕ ಸ್ಥಾಾನವನ್ನು ರದ್ದು ಮಾಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಿಸಿ ನಂಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿಿ ಅವರಿದ್ದ ಪೀಠ, ಆದೇಶಕ್ಕೆೆ ತಾತ್ಕಾಾಲಿಕ ತಡೆ ನೀಡಿತ್ತು. ಶಾಸಕ ಸ್ಥಾಾನ ರದ್ದತಿಗೆ ತಡೆ ನೀಡಿದ್ದರೂ, ಮರು ಮತ ಎಣಿಕೆ ನಡೆಸುವಂತೆ ನ್ಯಾಾಯಪೀಠ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ 2023ರ ಲಿತಾಂಶವನ್ನು ಮರು ಎಣಿಕೆ ಮಾಡಬೇಕು. ಅದನ್ನು ಮುಚ್ಚಿಿದ ಲಕೋಟೆಯಲ್ಲಿ ಪೀಠಕ್ಕೆೆ ಸಲ್ಲಿಸಬೇಕು. ಕೋರ್ಟ್ ಅನುಮತಿಯ ಹೊರತಾಗಿ ಲಿತಾಂಶವನ್ನು ಪ್ರಕಟಿಸುವಂತಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಆದೇಶದಲ್ಲಿ ತಿಳಿಸಿತ್ತು.
ಮರು ಮತ ಎಣಿಕೆ ನಡೆಸಿ, ಅದರ ಲಿತಾಂಶ ಪ್ರಕಟವಾಗುವವರೆಗೆ ಕಾಂಗ್ರೆೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಸ್ಥಾಾನ ಅಬಾಧಿತವಾಗಿರಲಿದೆ ಎಂದು ಸಹ ಹೇಳಿತ್ತು.

