ಸುದ್ದಿಮೂಲ ವಾರ್ತೆ ನವದೆಹಲಿ, ನ.11:
ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ನಡೆದ ಸ್ಫೋೋಟಕ್ಕೆೆ ಸಾವನ್ನಪ್ಪಿಿದವರ ಸಂಖ್ಯೆೆ 13ಕ್ಕೆೆ ಏರಿಕೆಯಾಗಿದೆ. ಕೇಂದ್ರ ಗೃಹ ಇಲಾಖೆಯು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಆಯೋಗಕ್ಕೆೆ (ಎನ್ಐಎ) ವಹಿಸಿದೆ.
ಮತ್ತೊೊಂದೆಡೆ ಪ್ರಕರಣ ಕುರಿತು ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದು, ದೆಹಲಿ ಸ್ಫೋೋಟದ ಹಿಂದೆ ಆತ್ಮಾಾಹುತಿ ದಾಳಿಯಾಗಿರುವ ಶಂಕೆಯನ್ನು ತನಿಖಾ ಸಂಸ್ಥೆೆಗಳು ವ್ಯಕ್ತಪಡಿಸಿವೆ.
ಜೈಶ್ ಸಂಘಟನೆಯ ತನ್ನ ಸಹಚರರನ್ನು ಇತ್ತೀಚೆಗೆ ಕಾಶ್ಮೀರದಲ್ಲಿ ಬಂಧಿಸಿದ್ದನ್ನು ತಿಳಿದ ನಂತರ ಉಮರ್ ರಿದಾಬಾದ್ನಿಂದ ಪರಾರಿಯಾಗಿದ್ದ. ಸ್ಫೋೋಟಗೊಂಡ ಕಾರನ್ನು ಕಾಶ್ಮೀರದ ವೈದ್ಯ ಉಮರ್ ಮೊಹಮ್ಮದ್ ಚಲಾಯಿಸುತ್ತಿಿದ್ದ. ಆತ ಆತ್ಮಾಾಹುತಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ತನಿಖಾ ಸಂಸ್ಥೆೆಗಳು ಶಂಕೆ ವ್ಯಕ್ತಪಡಿಸಿವೆ.
ಸ್ಫೋೋಟಗೊಂಡ ಕಾರಿನಲ್ಲಿದ್ದ ವ್ಯಕ್ತಿಿಯ ಡಿಎನ್ಎ ಮಾದರಿಯನ್ನು ಉಮರ್ ಅವರ ಕುಟುಂಬ ಸದಸ್ಯರ ಮಾದರಿಯ ಜೊತೆ ಹೋಲಿಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಉಮರ್ನನ್ನು ಪಾಕಿಸ್ತಾಾನ ಮೂಲದ ಜೈಶ್-ಇ-ಮೊಹಮ್ಮದ್ (ಜೆಇಎಂ) ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ ಬಗ್ಗೆೆ ಗುಪ್ತಚರ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ ಬಳಿಕ ಆತ ಭಯಭೀತನಾಗಿ ಆತ್ಮಾಾಹುತಿ ದಾಳಿ ನಡೆಸಿರಬಹುದು. ಅದರಲ್ಲೂ ಸಂಘಟನೆಗೆ ಸೇರಿದ ಇತರ ಉಗ್ರರನ್ನು ರಿದಾಬಾದ್, ಉತ್ತರ ಪ್ರದೇಶ ಮತ್ತು ಕಾಶ್ಮೀರದಲ್ಲಿ ಬಂಧಿಸಿದ ಬಳಿಕ ಉಮರ್ ಈ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅಂದಾಜಿಲಾಗಿದೆ.
ಪಾಕಿಸ್ತಾಾನದ ಭಯೋತ್ಪಾಾದಕ ಸಂಘಟನೆಗಳು ಕಳೆದ ಕೆಲವು ತಿಂಗಳಿಂದ ಭಾರತದಲ್ಲಿ ಭಯೋತ್ಪಾಾದಕ ದಾಳಿಗಳನ್ನು ನಡೆಸಲು ಯೋಜಿಸುತ್ತಿಿದ್ದವು. ಗುಪ್ತಚರ ಮಾಹಿತಿ ಹಿನ್ನೆೆಲೆ 30 ದಿನಗಳಲ್ಲಿ ದೇಶಾದ್ಯಂತ ಹಲವಾರು ಉಗ್ರರನ್ನು ಬಂಧಿಸಲಾಗಿದೆ. ಜೊತೆಗೆ, ರಿದಾಬಾದ್ನಲ್ಲಿ ಉಗ್ರರನ್ನು ಬಂಧಿಸಿದ ಬಳಿಕ ಈ ಯೋಜನೆ ವಿಲವಾಗಿದೆ ಎಂದು ತಿಳಿದುಬಂದಿದೆ.
ಭಯೋತ್ಪಾಾದನಾ ಕೃತ್ಯ, ರಿದಾಬಾದ್ ಉಗ್ರರ ಬಂಧನದ ಹಿನ್ನಲೆ, ಸರಣಿ ಮತ್ತು ದೊಡ್ಡ ಸ್ಫೋೋಟಗಳಿಗೆ ಪಿತೂರಿ, ರಿದಾಬಾದ್ ಉಗ್ರರ ಬಂಧನಕ್ಕೆೆ ಪ್ರತಿಯಾಗಿ ಸ್ಫೋೋಟ, ಜಮ್ಮು ಕಾಶ್ಮೀರದ ಶಂಕಿತ ವೈದ್ಯ ಉರ್ಮ ಮೊಹಮ್ಮದ್ ಕಾರಿನಲ್ಲಿದ್ದ ಬಗ್ಗೆೆ ತನಿಖೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಪ್ರಾಾಥಮಿಕ ಪುರಾವೆಗಳ ಪ್ರಕಾರ ಇದು ಭಯೋತ್ಪಾಾದಕ ದಾಳಿಯಂತೆ ತೋರುತ್ತದೆ. ವಿಧಿವಿಜ್ಞಾನ ಪರೀಕ್ಷೆ ಮುಗಿದ ನಂತರ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
—————
ಬಾಕ್ಸ್..
ಮೃತರಿಗೆ ತಲಾ 10 ಲಕ್ಷ ಪರಿಹಾರ ಘೋಷಣೆ
ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋೋಟದಿಂದ ಮೃತಪಟ್ಟವರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ದೆಹಲಿ ಮುಖ್ಯಮಂತ್ರಿಿ ರೇಖಾ ಗುಪ್ತ ಪ್ರಕಟಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡು ಅಂಗವಿಕಲರಾದವರಿಗೆ ತಲಾ 5 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

