ಸುದ್ದಿಮೂಲ ವಾರ್ತೆ ರಾಯಚೂರು, ನ.11:
ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ಸೌಲಭ್ಯಘಿ, ಹಳೆಯ ಪಿಂಚಣಿ ಜಾರಿಯ ಜೊತೆಗೆ ಪ್ರತಿ ಜಿಲ್ಲಾಾ ಕೇಂದ್ರದಲ್ಲಿ ನೌಕರರಿಗಾಗಿಯೆ ಕ್ಯಾಾಂಟೀನ್ ಆರಂಭಿಸಲು ಸೇರಿ ನೌಕರರ ಹಿತ ಕಾಪಾಡುವ ಜೊತೆಗೆ ಆತ್ಮವಂಚನೆ ಮಾಡದೆ ಬದ್ದತೆಯಿಂದ ಕೆಲಸ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಪ್ರತಿಪಾದಿಸಿದರು.
ನಗರದ ಕೃಷಿ ವಿಶ್ವ ವಿದ್ಯಾಾಲಯದ ಜಗಜ್ಯೋೋತಿ ಬಸವೇಶ್ವರ ಸಭಾಂಗಣದಲ್ಲಿ ಜಿಲ್ಲಾಾ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಿಕೊಂಡಿದ್ದ ಅಭಿನಂದನಾ ಸಮಾರಂಭ, ಆರೋಗ್ಯ ಸಂಜೀವಿನಿ, ಎಚ್ಆರ್ಎಂಎಸ್ ಯೋಜನೆ ಕಾರ್ಯಾಗಾರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಕಳೆದ ಆರು ವರ್ಷಗಳಲ್ಲಿ ತಮ್ಮ ತಂಡ ಇಡೀ ರಾಜ್ಯದ 5 ಲ 20 ಸಾವಿರ ನೌಕರರ ಹಿತ ಬಯಸಿ ಸರ್ಕಾರದಿಂದ 25 ಆದೇಶಗಳ ಮಾಡಿಸಿದ್ದೇವೆ.ನಗದು ರಹಿತ ಆರೋಗ್ಯ ಸಂಜೀವಿನಿ ಜಾರಿ,ಎನ್ಪಿಎಸ್ ರದ್ದು ಪಡಿಸಿ ಹಳೆಯ ಪಿಂಚಣಿ ಜಾರಿಗೆ ಪ್ರಯತ್ನಿಿಸುತ್ತಿಿದ್ದೇವೆ, ಮಹಿಳೆಯರಿಗೆ ಓರಿಸ್ಸಾಾ ಮಾದರಿಯಲ್ಲಿ ಋತುಚಕ್ರ ರಜೆ ಘೋಷಿಸಲು ಸರ್ಕಾರದಲ್ಲಿ ಯಶಸ್ವಿಿಯಾಗಿದ್ದೇವೆ, ಮುಂದಿನ ವೇತನ ಆಯೋಗದಲ್ಲಿ ಕೇಂದ್ರ ನೌಕರರಿಗೆ ಸಮಾನಾಂತರ ವೇತನ ಸೌಲಭ್ಯಕ್ಕೆೆ ಒತ್ತಡ ಹಾಕಿದ್ದೇವೆ, ನೌಕರರ ಮಕ್ಕಳಿಗೆ 3 ಕೋಟಿ ವೆಚ್ಚ ಮಾಡಿ ಪ್ರತಿಭಾ ಪುರಸ್ಕಾಾರ ಮಾಡುತ್ತಿಿದ್ದೇವೆ, 1 ಕೋಟಿ ಅಪಘಾತ ವಿಮೆ ಮಾಡಿಸಿದ್ದೇವೆ,ಕೋವಿಡ್ ವೇಳೆ ಶೇ.40ರಷ್ಟು ವೇತನ ಕಡಿತಗೊಳಿಸದಂತೆ ಮಾಡಿದ್ದೇವೆ, ಬೆಂಗಳೂರಿನಲ್ಲಿ ನೌಕರರ ಅನುಕೂಲಕ್ಕೆೆ ಸುಸಜ್ಜಿಿತವಾದ ಕಟ್ಟಡ ಕಟ್ಟಿಿಸಿದ್ದೇವೆ, ಹಬ್ಬದ ಮುಂಗಡ ಹಣ 50 ಸಾವಿರಕ್ಕೆೆ ಹೆಚ್ಚಿಿಸಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ ಇಷ್ಟೆೆಲ್ಲ ಸೌಲಭ್ಯಕ್ಕಾಾಗಿ ಜವಾಬ್ದಾಾರಿಯಿಂದ ಕೆಲಸ ಮಾಡುತ್ತಿಿರುವ ನನ್ನಂತವರ ವಿರುದ್ಧ ಇಲ್ಲ ಸಲ್ಲದ ಆಪಾದನೆಗಳು ಮಾಡುವವರಿಗೆ ನೌಕರರು ವೌನವಾಗಿರುವುದು ಎಷ್ಟರ ಮಟ್ಟಿಿಗೆ ಸರಿ ? ಇಷ್ಟೆೆಲ್ಲ ಕೆಲಸ ಮಾಡಿದವರಿಗೆ ಅವಿರೋಧವಾಗಿ ಆಯ್ಕೆೆ ಮಾಡದೆ ಚುನಾವಣೆ ಮೂಲಕ ನಾವು ಆಯ್ಕೆೆ ಆಗುವುದೆಂದರೆ ಘಾಸಿಯೇ ಸರಿ ಅಲ್ಲವೆ? ಪ್ರಾಾಮಾಣಿಕವಾಗಿ ಕೆಲಸ ಮಾಡುವವರಿಗೆ ಅಧಿಕಾರ ಕೊಡಿ ಎಂಬ ಧೋರಣೆ ನಮ್ಮಲ್ಲಿ ಯಾಕಿಲ್ಲ ಎಂದು ಪ್ರಶ್ನಿಿಸಿ ಬೇಸರ ವ್ಯಕ್ತಪಡಿಸಿದರು. ಸಂಘದಲ್ಲಿ ಕೋಟಿಗಟ್ಟಲೆ ನೌಕರರ ಹಣ ಇದೆ ಹಣ ಖರ್ಚು ಮಾಡಿ ಗೆದ್ದು ಅದರಿಂದ ಸಂಘದ ಹಣ ಬಳಸಿ ಪರಿಷತ್ತಿಿಗೆ ಆಯ್ಕೆೆಯಾಗಬೇಕು, ರಾಜಕಾರಣಿಯಾಗಬೇಕು ಎಂಬ ಧೋರಣೆ ಇರುವ ವ್ಯಕ್ತಿಿ ಅಂತಹ ಮನಸ್ಥಿಿತಿ ತಮ್ಮದಲ್ಲ ಎಂದು ಪರೋಕ್ಷವಾಗಿ ಹಿಂದಿನ ಕೆಲ ಅಧ್ಯಕ್ಷರುಗಳ ಧೋರಣೆಗೆ ತಿರುಗೇಟು ನೀಡಿದರು.
ಜಿಲ್ಲಾಾ ನೌಕರರ ಸಂಘದ ಅಧ್ಯಕ್ಷರು ರಾಜ್ಯಾಧ್ಯಕ್ಷರ ಆಯ್ಕೆೆ ಮಾಡುತ್ತಿಿದ್ದು ಇದನ್ನು ಸಾರ್ವತ್ರಿಿಕರಣಗೊಳಿಸುವ ಉದ್ದೇಶವಿದ್ದು ಮುಂಬರುವ ನೌಕರರ ಸಂಘದ ಚುನಾವಣೆಯಲ್ಲಿ ರಾಜ್ಯದ 5 ಲಕ್ಷ ನೌಕರರೇ ನೇರವಾಗಿ ಚುನಾಯಿಸುವ ಹಕ್ಕು ನೀಡುವ ಬದ್ದತೆ ಹೊಂದಿದ್ದೇವೆ ಎಂದರು.
ಒಂದು ಕಾಲಕ್ಕೆೆ ರಾಯಚೂರು ಜಿಲ್ಲಾಾ ಸರ್ಕಾರಿ ನೌಕರರ ಸಂಘ ಕೆಲವರ ಕಪಿಮುಷ್ಟಿಿಯಲ್ಲಿದ್ದುಕೊಂಡು ಏನೇ ಮಾಡಿದರೂ ಅದನ್ನು ವಿವಾದಗೊಳಿಸುವ ಜೊತೆಗೆ ಅಸಹಕಾರ, ನೌಕರರ ವಿಭಜಿಸುವ ಸಂಗತಿಗಳು ಬೇಸರ ತಂದಿದ್ದವು ಹಾಗಾಗಿ, ಬರಲು ಹಿಂದೇಟು ಹಾಕುತ್ತಿಿದ್ದು ಆದರೆ, ಅದನ್ನು ಈ ಬಾರಿಯ ಅಧ್ಯಕ್ಷರಾಗಿರುವ ಕೃಷ್ಣಾಾ ಶಾವಂತಗೇರಿ ಮತ್ತವರ ತಂಡ ದೂರ ಮಾಡಿದೆ ಎಂಬುದಕ್ಕೆೆ ಇಂದು ಸೇರಿದ ನೌಕರರ ಸಂಖ್ಯೆೆ ಸಾಕ್ಷಿಿಯಾಗಿದೆ. ಜಿಲ್ಲೆೆಯಲ್ಲಿನ ಸರ್ಕಾರಿ ನೌಕರರ ಭವನದ ನಿರ್ಮಾಣಕ್ಕೆೆ ಈಗಾಗಲೇ ಸರ್ಕಾರ ಮಟ್ಟದಲ್ಲಿ 50 ಲಕ್ಷ ರೂಪಾಯಿಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ ಅನುಮೋದನೆ ಸಿಗುವ ವಿಶ್ವಾಾಸ ವ್ಯಕ್ತಪಡಿಸಿದರು. ನಿಮ್ಮ ಜಿಲ್ಲೆೆಯಲ್ಲೂ ನಿವೇಶನ ಕೊಟ್ಟರೆ ಪೊಲೀಸ್, ಸೈನಿಕರ ಕ್ಯಾಾಂಟೀನ್ ಮಾದರಿ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನೌಕರರ ಕ್ಯಾಾಂಟೀನ್ ಆರಂಭಿಸುವ ಕೆಲಸವೂ ಸರ್ಕಾರದಿಂದಲೆ ನಡೆಯಲಿದೆ ಎಂದು ಹೇಳಿದರು.
ಎನ್ಪಿಎಸ್ ನೌಕರರು ವಿಚಲಿತರಾಗಿ ಯಾರದೊ ಮಾತು ಕೇಳಿ ಅವರಿವರ ಬೆನ್ನು ಬಿದ್ದು ಹೋಗದೆ ತಮ್ಮ ಮೇಲೆ ನಂಬಿಕೆ ಇರಿಸಿದರೆ ಕೆಲಸ ಸುಲಭವಾಗಲಿದೆ ಈಗಾಗಲೇ ಎನ್ಪಿಎಸ್ ಬದಲಿಗೆ ಒಪಿಎಸ್ ಜಾರಿಗೆ ರಾಜ್ಯ ಸರ್ಕಾರ ವರದಿ ಪಡೆಯಲಿದೆ. ಸಂಘದ ನಿರ್ಧಾರಗಳಿಗೆ ತಮ್ಮೆೆಲ್ಲರ ಸಹಕಾರವಿರಲಿ ಸಮಸ್ಯೆೆಗಳಿಲ್ಲ ಎನ್ನಲಾಗದು ಅವುಗಳಿಗೆ ಸ್ಪಂದಿಸುವ ಕೆಲಸ ನಡೆಯಲಿದೆ ಎಂದು ಭರವಸೆ ನೀಡಿದರು.
ಸಮಾರಂಭ ಉದ್ಘಾಾಟಿಸಿದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಸರ್ಕಾರಿ ನೌಕರರ ಸ್ಥಿಿತಿ, ಕೆಲಸದ ಒತ್ತಡ ಹೆಚ್ಚಿಿದೆ ಅವರ ಸಮಸ್ಯೆೆಗಳ ಪರಿಹಾರಕ್ಕೆೆ ತಾವು ಸದಾ ಸಿದ್ದರಿದ್ದೇವೆ ಎಂದರು.
ಮಾಹಿತಿ ಹಕ್ಕು ಕಾಯಿದೆಯಿಂದ ಕೆಲವರಿಗೆ ಕಿರಿಕಿರಿ ಇದ್ದರೂ ಹೆಚ್ಚು ಪಾರದರ್ಶಕ ಕೆಲಸ ಮಾಡುವವರಿಗೆ ತೊಂದರೆಯಾಗದು ಶಿಕ್ಷಕರಿಗೆ ಪಾಠ ಬೋಧನೆ ಬಿಟ್ಟು ಮತ್ತಾಾವ ಕೆಲಸವೂ ನೀಡಬಾರದು ಎಂದು ಸರ್ಕಾರದ ಮೇಲೆ ಸಂಘ ಒತ್ತಡ ಹಾಕಬೇಕು ಅದಕ್ಕೆೆ ತಮ್ಮ ಬೆಂಬಲವಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾಾಧ್ಯಕ್ಷ ಕೃಷ್ಣಾಾ ಶಾವಂತಗೇರಾ ಸ್ವಾಾಗತಿಸಿ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಕ್ರಿಿಯಾಶೀಲ ರಾಜ್ಯಾಧ್ಯಕ್ಷರ ತಂಡ ನೌಕರರ ಹಿತ ಕಾಪಾಡಲು ಸರ್ಕಾರದ ಮಟ್ಟದಲ್ಲಿ ಅನೇಕ ಕೆಲಸ ಮಾಡುತ್ತಿಿದೆ. ನೌಕರರು ತಾಳ್ಮೆೆಯಿಂದ ಆತ್ಮಾಾವಲೋಕನದೊಂದಿಗೆ ಪರಿಶೀಲಿಸಿ ಅವರ ಕೈ ಬಲಪಡಿಸಬೇಕಿದೆ. ತೊಂದರೆಯಾದಾಗ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕೆಲಸ ಮಾಡಿಸಿಕೊಡುವ ಮೂಲಕ ಮೊದಲು ಚರ್ಚೆ, ಸಂಧಾನ ನಂತರವೇ ಹೋರಾಟ ಎಂಬ ಧೋರಣೆ ನಮ್ಮೆೆಲ್ಲರ ಹಿತಕ್ಕಾಾಗಿ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಗಿರಿಗೌಡ, ಗೌರವಾಧ್ಯಕ್ಷ ಎಸ್.ಬಸವರಾಜು, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ ಬಳ್ಳಾಾರಿ ಮಾತನಾಡಿದರು.
ಇದೇ ವೇಳೆ ವಿವಿಧ ಇಲಾಖೆ ನೌಕರರ ಸಮಸ್ಯೆೆಗಳ ಕುರಿತು ಉಪಾಧ್ಯಕ್ಷ ಪ್ರಾಾಣೇಶ ಕುಲಕರ್ಣಿ ರಾಜ್ಯಾಧ್ಯಕ್ಷರ ಗಮನಕ್ಕೆೆ ತಂದು ಮನವಿ ಸಲ್ಲಿಸಿದರು.
ವಿವಿಧ ಇಲಾಖೆಯಲ್ಲಿ ಪ್ರಾಾಮಾಣಿಕವಾಗಿ ಸೇವೆ ಸಲ್ಲಿಸುತ್ತಿಿರುವ ನೌಕರರಿಗೆ ಸೇವಾ ರತ್ನ ಪ್ರಶಸ್ತಿಿ ಪ್ರದಾನ ಮಾಡಲಾಯಿತು. ನಿವೃತ್ತ ನೌಕರರಿಗೆ ಸನ್ಮಾಾನಿಸಲಾಯಿತು.
ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆೆಯ ಮೂಲಕ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.
ವೇದಿಕೆಯಲ್ಲಿ ಖಜಾನೆ ಇಲಾಖೆಯ ಸಿದ್ದರಾಮೇಶ್ವರ ವಿ.ಟಿ.,ರಾಯಚೂರು ವಿವಿ ಸಿಂಡಿಕೇಟ್ ಸದಸ್ಯ ಚನ್ನಬಸವ ನಾಯಕ, ರಾಜ್ಯ ಕಾರ್ಯದರ್ಶಿ ಡಾ.ಶಂಕರಗೌಡ ಎಸ್.ಪಾಟೀಲ, ವಿಭಾಗೀಯ ಉಪಾಧ್ಯಕ್ಷ ಚಂದ್ರಶೇಖರ ಹಿರೇಮಠ, ಹಾಜಿಬಾಬು ಲಿಂಗಸೂಗೂರು, ಗೌರವಾಧ್ಯಕ್ಷ ಭೀಮರಾಜ ಹವಾಲ್ದಾಾರ್, ವಿವಿಧ ತಾಲೂಕಾಧ್ಯಕ್ಷರಾದ ಹನುಮಂತ್ರಾಾಯ ಶಾಖೆ, ಪಂಪಾಪತಿ ಹೂಗಾರ, ಸುರೇಶ ಕುರ್ಡಿ, ಆರ್ೀ ಮಿಯಾ ಸೇರಿದಂತೆ ಅನೇಕ ನೌಕರರಿದ್ದರು.

