ಸುದ್ದಿಮೂಲ ವಾರ್ತೆ ಕೊಪ್ಪಳ, ನ.12:
ಪ್ರೇೇರಣಾ ಸಂಸ್ಥೆೆಯ ಏಕಗವಾಕ್ಷಿ ನಡೆ ವಿರೋಧಿಸಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಾಯಿಸಿ ಗುತ್ತಿಿಗೆದಾರರು, ಟ್ರಕ್ ಮಾಲಿಕರು, ಕಟ್ಟಡ ಕಾರ್ಮಿಕರು ಸೇರಿ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಅಶೋಕ ವೃತ್ತದ ಮೂಲಕ ಟ್ರಕ್, ಜೆಸಿಬಿ ಸೇರಿದಂತೆ ವಿವಿಧ ವಾಹನಳ ಮೂಲಕ ನೂರಾರು ಗುತ್ತಿಿಗೆದಾರರು ಡಿಸಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಪ್ರೇೇರಣಾ ಸಂಸ್ಥೆೆಯನ್ನು ಸ್ಥಾಾಪಿಸಿದ ಸಂಸದ ರಾಜಶೇಖರ ಹಿಟ್ನಾಾಳ ಅವರು ಗುತ್ತಿಿಗೆದಾರರ ಮರಣ ಶಾಸನ ಬರೆಯಲು ಮುಂದಾಗಿದ್ದಾಾರೆ. ಇದರಿಂದ ಅನೇಕರ ಬದುಕು ಬೀದಿಗೆ ಬರುವಂತೆ ಆಗಿದೆ. ಗುತ್ತಿಿಗೆದಾರರಿಗೂ ತೀವ್ರ ಸಮಸ್ಯೆೆಯಾಗಿದ್ದು, ಕಾನೂನು ಬಾಹಿರವಾಗಿ ಇರುವ ಈ ಸಂಸ್ಥೆೆಯನ್ನು ರದ್ಧು ಮಾಡುವಂತೆ ಆಗ್ರಹಿಸಿದ್ದಾಾರೆ.
ಕ್ರಷರ್ ಮಾಲಿಕರು ನಾವು ಮೊದಲಿನಿಂದಲೂ ಸಹೋದರರಂತೆ ಇದ್ದೇವೆ. ಆದರೆ, ಈಗ ಪ್ರೇೇರಣಾ ಸಂಸ್ಥೆೆಯ ಸ್ಥಾಾಪನೆಯಿಂದ ನಮ್ಮಿಿಬ್ಬರ ನಡುವೆ ಬಿರುಕು ಮೂಡಿದೆ. ಕ್ರಷರ್ ಮಾಲಿಕರು ನಿಯಮ ಬಾಹಿರವಾಗಿ ಪ್ರೇೇರಣಾ ಸಂಸ್ಥೆೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾಾರೆ ಎಂದು ಆರೋಪಿಸಿದರು.
ಕೂಡಲೇ ಪ್ರೇೇರಣಾ ಸಂಸ್ಥೆೆ ರದ್ಧಾಾಗಬೇಕು. ಈ ಹಿಂದಿನಂತೆ ಇದ್ದ ವ್ಯವಸ್ಥೆೆ ಸರಿಯಾಗಬೇಕು. ಪ್ಯಾಾಕೇಜ್ ಟೆಂಡರ್ ರದ್ಧಾಾಗಬೇಕು. ಏಜೆನ್ಸಿಿ ಮೂಲಕ ಕಾಮಗಾರಿ ನೀಡುವುದನ್ನು ಕೈಬಿಡಬೇಕು, ಗುತ್ತಿಿಗೆದಾರರ ಬಾಕಿಯನ್ನ ತಕ್ಷಣ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಎಸ್ಸಿಿ ಎಸ್ಟಿಿ ಸಿವಿಲ್ ಗುತ್ತಿಿಗೆದಾರರ ಸಂಘದ ಜಿಲ್ಲಾಾಧ್ಯಕ್ಷ ಹನುಮೇಶ ಮಾತನಾಡಿ, ಸಂಸದ ರಾಜಶೇಖರ ಹಿಟ್ನಾಾಳ ಕಾಳಜಿ ಇದ್ದರೇ ನಮ್ಮ ಬಾಕಿಯನ್ನು ಕೊಡಿಸುವುದಕ್ಕೆೆ ಆಸಕ್ತಿಿಯನ್ನು ತೋರಿಸಲಿ, ಅದನ್ನು ಬಿಟ್ಟು, ಪ್ರೇೇರಣಾ ಸಂಸ್ಥೆೆಯನ್ನು ಮಾಡಿ, ಗುತ್ತಿಿಗೆದಾರರಿಗೆ ಮಾರಕವಾಗುವುದನ್ನು ನಾವು ಸಹಿಸುವುದಿಲ್ಲ ಎಂದರು.
ತಾಲೂಕ ಗುತ್ತಿಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾಾ ಇಟ್ಟಂಗಿ ಮಾತನಾಡಿ, ಪ್ರೇೇರಣಾ ಸಂಸ್ಥೆೆಯನ್ನು ಮಾಡುವುದನ್ನು ಬೇಡ ಎಂದು ನಾವು ಮೊದಲೇ ಹೇಳಿದ್ದೇವೆ. ಆದರೂ ಕೇಳದೇ ಮಾಡಿದ್ದಾಾರೆ. ಹೀಗಾಗಿ, ಗುತ್ತಿಿಗೆದಾರರ ಉಳಿವಿಗಾಗಿ ಹೋರಾಟ ಅನಿವಾರ್ಯ ಎಂದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಗುತ್ತಿಿಗೆದಾರರ ಸಂಘದ ಜಿಲ್ಲಾಾಧ್ಯಕ್ಷ ಸುರೇಶ ಭೂಮರಡ್ಡಿಿ, ಕಾರ್ಯದರ್ಶಿ ದೇವಪ್ಪ ಅರಕೇರಿ, ಎಲ್. ಎಂ. ಮಲ್ಲಯ್ಯ, ಎಸ್. ಎಸ್ಟಿಿ, ಗುತ್ತಿಿಗೆದಾರರ ಸಂಘದ ಅಧ್ಯಕ್ಷ ಹನುಮೇಶ ಕಡೇಮನಿ, ಕೊಪ್ಪಳ ತಾಲೂಕು ಗುತ್ತಿಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾಾ ಇಟ್ಟಂಗಿ ಹಾಗೂ ಕುಷ್ಟಗಿ, ಗಂಗಾವತಿ, ಯಲಬುರ್ಗಾ, ಕಾರಟಗಿ ಹಾಗೂ ಕುಕನೂರು ತಾಲೂಕಿನ ಗುತ್ತಿಿಗದಾರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಾಕ್ಸ್ಘಿ:
ಬಾಕಿ ಇದ್ದರೇ ಘೋಷಣೆ ಮಾಡಲಿ : ಭೂಮರಡ್ಡಿಿ
ಗುತ್ತಿಿಗೆದಾರರು ಉದ್ರಿಿ ಕೇಳುತ್ತಾಾರೆ, ನೂರು ಕೋಟಿ ಬಾಕಿ ಇದೆ ಎಂದು ಸಂಸದ ರಾಜಶೇಖರ ಹಿಟ್ನಾಾಳ ಅವರು ಮಾತನಾಡಿದ್ದಾಾರೆ. ಬಾಕಿ ಇದ್ದರೇ ಬಹಿರಂಗ ಮಾಡುವಂತೆ ಗುತ್ತಿಿಗೆದಾರರ ಸಂಘದ ಜಿಲ್ಲಾಾಧ್ಯಕ್ಷ ಸುರೇಶ ಭೂಮರಡ್ಡಿಿ ಸವಾಲು ಹಾಕಿದ್ದಾಾರೆ. ಪ್ರತಿಭಟನೆಯಲ್ಲಿ ಮಾತನಾಡಿ, ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆೆಯೇ ಇಲ್ಲ. ನಾವು ಉದ್ರಿಿಯನ್ನು ಕೇಳುತ್ತಿಿಲ್ಲ. ಕಾನೂನು ಬಾಹಿರವಾಗಿ ಮಾಡಿರುವ ಪ್ರೇೇರಣಾ ಸಂಸ್ಥೆೆಯನ್ನು ರದ್ಧು ಮಾಡಬೇಕು ಮತ್ತು ಗುತ್ತಿಿಗೆದಾರರು ಬೇಡಿಕೆ ಈಡೇರಿಸಬೇಕು ಎನ್ನುವುದು ನಮ್ಮ ನ್ಯಾಾಯಯುತ ಬೇಡಿಕೆಯಾಗಿದೆ. ಇದನ್ನು ಮುಂದಿಟ್ಟುಕೊಂಡು ಸಾಂಕೇತಿಕ ಹೋರಾಟ ಮಾಡಿದ್ದು, ಜಿಲ್ಲಾಾಡಳಿತದ ಪ್ರತಿಕ್ರಿಿಯೇಯನ್ನಾಾಧರಿಸಿ ಮುಂದಿನ ಹೋರಾಟ ರೂಪಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣ ಎಮ್ ಇಟ್ಟಂಗಿ. ದೇವಪ್ಪ ಅರಕೇರಿ. ರಾಜಶೇಖರ್ ಗಂಗಾವತಿ, ಯಮನೂರಪ್ಪ ನಡುಮನಿ , ಸುಖರಾಜ್ ತಾಳಕೇರಿ. ಪ್ರಸಾದ ಗಂಗಾವತಿ ಶರಣೇಶ ಹೂಗಾರ್ ಇದ್ದರು.
ಪ್ರೇರಣಾ ಸಂಸ್ಥೆೆ ವಿರುದ್ಧ ಗುಡುಗಿದ ಗುತ್ತಿಿಗೆದಾರರು

