ಸುರೇಶ ಹೀರಾ ಸಿರವಾರ, ನ.12:
ರಾಜ್ಯ ಸರ್ಕಾರ ಗ್ರಾಾಮ ಪಂಚಾಯತಿಗೆ ಒಂದು ಗ್ರಂಥಾಲಯ ಮಂಜೂರು ಮಾಡಿ ಸಾವಿರಾರು ರೂಪಾಯಿ ಬೆಲೆ ಬಾಳುವ ಪುಸ್ತಕಗಳನ್ನು ಖರೀದಿಸಿ ಗ್ರಾಾಮೀಣ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಓದಲು ಗ್ರಂಥಾಲಯಗಳನ್ನು ನಿರ್ಮಿಸಿದೆ.ಆದರೆ ಇದರ ಉಪಯೋಗ ಓದುಗರಿಗೆ ಆಗುತ್ತಿಿಲ್ಲಘಿ.ತಾಲೂಕಿನ ಗಣದಿನ್ನಿಿ, ಮಾಡಗಿರಿ, ಕೊಲ್ಲೂರು ಗ್ರಾಾಮಗಳಲ್ಲಿ ಗ್ರಂಥಪಾಲಕರು ಇಲ್ಲದೆ ಎರಡು ವರ್ಷಗಳು ಕಳೆದಿವೆ, ಗ್ರಂಥಾಲಯಕ್ಕೆೆ ಬೀಗ ಹಾಕಿದ್ದು, ಪುಸ್ತಕಗಳು ಧೂಳು ಹಿಡಿದು, ಮಳೆ ಬಂದು, ಕಟ್ಟಡ ಸೋರಿಕೆಯಿಂದ ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕಗಳು ಹಾಳಾಗಿವೆ.
ಕಟ್ಟಡದ ಮೇಲೆ ಛಾವಣಿ ಸಂಪೂರ್ಣವಾಗಿ ಹಾಳಾಗಿದ್ದು, ಕಬ್ಬಿಿಣದ ಕಂಬಿಗಳು ಕಾಣುತ್ತಿಿವೆ, ಗ್ರಂಥಾಲಯದ ಒಳಗೆ ಕಾಲಿಟ್ಟರೆ, ಎಲ್ಲಿ ಮೇಲೆ ಬೀಳುತ್ತದೆ ಎಂಬ ಭಯ ಆವರಿಸುತ್ತದೆ. ಒಳಗೆ ಒಂದು ನಿಮಿಷ ಕಣ್ಣು ಹಾಯಿಸಿದಾಗ ಪುಸ್ತಕಗಳನ್ನು ಜೋಡಿಸಿ ಇದ್ದು, ಒಳ್ಳೆೆಯ, ಒಳ್ಳೆೆಯ ಪುಸ್ತಕಗಳು, ಮನ ಸೆಳೆದವು,
ಈ ಗ್ರಾಾಮ ಪಂಚಾಯತಿ ಗ್ರಂಥಾಲಯಗಳ ನಿರ್ವಹಣೆ ಜಿಲ್ಲಾ ಪಂಚಾಯತ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಾಮ ಪಂಚಾಯತಿ ಆಡಳಿತ ಜವಾಬ್ದಾಾರಿ. ಗ್ರಂಥಾಲಯ ಕಡೆಗೆ ಗಮನ ಹರಿಸಲು ಸಾಧ್ಯವಾಗದೆ, ಗ್ರಾಾ.ಪಂ ಗ್ರಂಥಾಲಯಗಳು ಇದ್ದೂ ಇಲ್ಲದಂತೆ ಆಗಿವೆ, ಗ್ರಾಾಮೀಣ ಭಾಗದ ವಿದ್ಯಾಾರ್ಥಿಗಳಿಗೆ ಇದರ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾ ಪಂಚಾಯತ ಅಧಿಕಾರಿಗಳು ಗಮನಹರಿಸಿ ಖಾಲಿ ಇರುವ ಗ್ರಂಥಪಾಲಕರ ನೇಮಕಾತಿ ಮಾಡಿ ಪುಸ್ತಕ ಹಾಗೂ ದಿನ ಪತ್ರಿಿಕೆಗಳು ಸುಲಭವಾಗಿ ಓದಲು ಅನುಕೂಲ ಮಾಡಿ ಕೊಡಬೇಕು ಎಂದು ಗ್ರಾಾಮಸ್ಥರ ಒತ್ತಾಾಯಿಸಿದರು.
ಕೋಟ್ :
ಗ್ರಾಾ.ಪಂ. ಗ್ರಂಥಪಾಲಕರು ಖಾಲಿ ಹುದ್ದೆಗಳ ಬಗ್ಗೆೆ ಜಿ.ಪಂ.ಗೆ ಪತ್ರ ಬರೆದಿದ್ದು, ಇನ್ನೂ ಕೆಲವು ದಿನಗಳಲ್ಲಿ ನೇಮಕ ಮಾಡುತ್ತಾಾರೆ, ಅವುಗಳ ನಿರ್ವಹಣೆ ಗ್ರಾಾ.ಪಂ. ಆಡಳಿತ ಮಂಡಳಿಯ ಜವಾಬ್ದಾಾರಿ .
– ರಾಮ್ ಖಲಾಲ್.ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕರು ರಾಯಚೂರು.
ಗ್ರಂಥಪಾಲಕರಿಲ್ಲದೆ ಅನಾಥವಾದ ಗ್ರಂಥಾಲಯಗಳು…!

