ಸುದ್ದಿಮೂಲ ವಾರ್ತೆ ಮುದಗಲ್, ನ.12:
ಸಮೀಪದ ಮಟ್ಟೂರು ತಾಂಡಾದಲ್ಲಿ ಆರೋಪಿಗಳನ್ನು ಕರೆ ತರವಾಗ ಮುದಗಲ್ ಠಾಣೆ ಪಿಎಸ್ಐ ವೆಂಕಟೇಶ ಮಾಡಗಿರಿ, ಎಎಸ್ಐ ವೆಂಕಟಪ್ಪ ನಾಯಕ್ ಮೇಲೆ ಹಲ್ಲೆಗೆ ಮುಂದಾದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಮುದಗಲ್ ಠಾಣೆಯಲ್ಲಿ ಇತ್ತೀಚಿಗೆ ದಾಖಲಾದ ಪ್ರಕರಣವೊಂದಕ್ಕೆೆ ವಿಚಾರಣೆಗಾಗಿ ರಾಮಪ್ಪ (35), ಸಕ್ಕುಬಾಯಿ ರಾಮಪ್ಪ (30) ಅವರನ್ನು ಕರೆತರಲು ಹೋದ ಎಎಸ್ಐ ವೆಂಕಟಪ್ಪ ನಾಯಕ ಅವರಿಗೆ ಏಕಾಏಕಿ ಹಲ್ಲೆ ಮಾಡಿ, ಸಮವಸ ಹರಿದು, ಮೊಬೈಲ್ ನಾಶ ಮಾಡಿದ್ದಾರೆ.
ಹಲ್ಲೆ ಮಾಡಿದ ವಿಷಯ ತಿಳಿದ ಪಿಎಸ್ಐ ವೆಂಕಟೇಶ ಮಾಡಗಿರಿ ಸ್ಥಳಕ್ಕೆೆ ದೌಡಾಯಿಸಿದಾಗ ಅವರ ಮೇಲೆ ಕೂಡಾ ಹಲ್ಲೆ ಮಾಡಿ, ಅವರ ಗುಪ್ತಾಾಂಗಗಳಿಗೆ ಕೈ ಹಾಕಿದ ಘಟನೆ ಸಂಭವಿಸಿದೆ.
ಘಟನೆ ಹಿನ್ನೆೆಲೆ : ನ.9 ರಂದು ರಾಮಪ್ಪ ಹಾಗೂ ಅವನ ಹೆಂಡತಿ ಸಕ್ಕುಬಾಯಿ ವಿರುದ್ಧ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆೆ ಸಂಬಂಧಿಸಿದ ಎಎಸ್ಐ ವೆಂಕಟಪ್ಪ ನಾಯಕ ಹೆಡ್ ಕಾನ್ ಸ್ಟೇಬಲ್ ರಾಮಪ್ಪ ಅವರು ತಾಂಡಾಕ್ಕೆೆ ತೆರಳಿದರು. ರಾಮಪ್ಪ ಆತನ ಹೆಂಡತಿ ಸಕ್ಕುಬಾಯಿ ಕಲ್ಲು ಮತ್ತು ದೊಣ್ಣೆೆಯಿಂದ ಹಲ್ಲೆ ಮಾಡಿದರು ಎನ್ನಲಾಗಿದೆ. ಸಮವಸ ಹಿಡಿದು ಹರಿದು ಪಿಎಸ್ಐ ಹಾಗೂ ಎಎಸ್ಐ ಅವರಿಗೆ ಗಾಯಗೊಳಿಸಿದ್ದಾರೆ. ಗಾಯಗೊಂಡ ಪಿಎಸ್ಐ ವೆಂಕಟೇಶ ಮಾಡಗೇರಿ ಹಾಗೂ ಎಎಸ್ಐ ವೆಂಕಟಪ್ಪ ನಾಯಕ ಅವರನ್ನು ಚಿಕಿತ್ಸೆೆಗೆ ಲಿಂಗಸುಗೂರು ಸರ್ಕಾರಿ ಆಸ್ಪತ್ರೆೆಗೆ ದಾಖಲಿಸಲಾಗಿದೆ.
ಕೋಟ್ :
ಮುದಗಲ್ ಠಾಣೆ ಪಿಎಸ್ಐ ವೆಂಕಟೇಶ ಮಾಡಗಿರಿ ಹಾಗೂ ಎಎಸ್ಐ ವೆಂಕಟಪ್ಪ ನಾಯಕ ಕರ್ತವ್ಯಕ್ಕೆೆ ತೆರಳಿದ್ದ ಸಂದರ್ಭದಲ್ಲಿ ಮಟ್ಟೂರು ತಾಂಡಾದಲ್ಲಿ ಹಲ್ಲೆ ನಡೆಸಿರುವ ಬಗ್ಗೆೆ ಮಾಹಿತಿ ಪಡೆಯಲಾಗಿದ್ದು, ಕರ್ತವ್ಯನಿರತ ಪೊಲೀಸರ ಮೇಲೆ ದರ್ಪ ತೋರಿರುವರ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಪುಟ್ಟಮಾದಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿಗಳು ರಾಯಚೂರು.

