ಸುದ್ದಿಮೂಲ ವಾರ್ತೆ ಬೆಂಗಳೂರು, ನ.12:
ಕೆಕೆಆರ್ಡಿಬಿ ನೆರವಿನಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಿ ಇಲಾಖೆಯು ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ಅವರು ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿಯ ಅಧ್ಯಕ್ಷರಾದ ಡಾ.ಅಜಯ್ ಧರ್ಮಸಿಂಗ್ ಅವರೊಂದಿಗೆ ಜಂಟಿಯಾಗಿ ನಡೆಸಿದರು.
ವಿಕಾಸಸೌಧದದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎನ್. ಎಸ್. ಭೋಸರಾಜು ಅವರು, ಈಗಾಗಲೇ ಕೈಗೆತ್ತಿಿಕೊಂಡಿರುವ ಕಾಮಗಾರಿಗಳ ಬಗ್ಗೆೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ನಿಗದಿತ ಅವಧಿಯಲ್ಲಿ, ಅವುಗಳನ್ನು ಗುಣಮಟ್ಟದೊಂದಿಗೆ ಪೂರೈಸಿ ಕಲ್ಯಾಾಣ ಕರ್ನಾಟಕದ ಅಭಿವೃದ್ಧಿಿಗೆ ಹಾಗೂ ಜನರಿಗೆ ನೆರವಾಗುವಂತೆ ಸೂಚಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕಲ್ಯಾಾಣ ಕರ್ನಾಟಕ ಭಾಗದ ಕರ್ನಾಟಕ ಪಬ್ಲಿಿಕ್ ಶಾಲೆಗಳಲ್ಲಿ ಕೆಕೆಆರ್ಡಿಬಿ ಅನುದಾನವನ್ನು ಬಳಸಿಕೊಂಡು ಸ್ಟ್ರೀಮ್ ಲ್ಯಾಾಬ್ಗಳನ್ನು ಸ್ಥಾಾಪಿಸುವ ಹಾಗೂ ರಾಯಚೂರಿನಲ್ಲಿ 3ಡಿ ತಾರಾಲಯ ನಿರ್ಮಾಣ ಮಾಡುವ ಪ್ರಸ್ತಾಾವನೆಗಳ ಬಗ್ಗೆೆ ಕೆಕೆಆರ್ಡಿಬಿ ಅಧ್ಯಕ್ಷರ ಗಮನ ಸೆಳೆದು, ಅವುಗಳ ಸಾಧಕ ಬಾಧಕಗಳ ಬಗ್ಗೆೆ ಸುದೀರ್ಘವಾಗಿ ಚರ್ಚಿಸಿದರು. ಈ ಎರಡೂ ಯೋಜನೆಗಳು ಜಾರಿಗೊಂಡರೆ ಕಲ್ಯಾಾಣ ಕರ್ನಾಟಕ ಭಾಗದ ವಿದ್ಯಾಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆೆ ಒಲವು ಹೆಚ್ಚಾಾಗಲಿದೆ. ಅಲ್ಲದೇ, ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸರ್ವರಿಗೂ ವಿಜ್ಞಾನ, ಸುಲಭ ವಿಜ್ಞಾನ’ ಎಂಬ ನಮ್ಮ ಸರ್ಕಾರದ ಆಶಯ ಕೂಡ ಈಡೇರಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿಿ ಇಲಾಖೆಯ ಹಾಗೂ ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿಯ ಕಾರ್ಯದರ್ಶಿ ನಳಿನ್ ಅತುಲ್, ಮಲ್ಲಿಕಾರ್ಜುನ ರೆಡ್ಡಿಿ ಉಪಸ್ಥಿಿತರಿದ್ದರು.
ಕೆಕೆಆರ್ಡಿಬಿ ಅಡಿಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಿ ಇಲಾಖೆ ಕಾಮಗಾರಿ ಪ್ರಗತಿ ಪರಿಶೀಲನೆ ನಿಗದಿತ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿ : ಎನ್. ಎಸ್. ಭೋಸರಾಜು

