ಸುದ್ದಿಮೂಲ ವಾರ್ತೆ ಲಿಂಗಸೂಗೂರು, ನ.13:
ತಾಲೂಕಿನ ಆನಾಹೊಸೂರು ಗ್ರಾಾ.ಪಂ, ವ್ಯಾಾಪ್ತಿಿಯ ಜಾಗೀರನಂದಿಹಾಳ ಗ್ರಾಾಮಕ್ಕೆೆ ತೆರಳುವ ಮುಖ್ಯ ರಸ್ತೆೆಯ ಸೇತುವೆ ಮೇಲೆ ನಿರಂತರವಾಗಿ ನೀರು ಹರಿಯುತ್ತಿಿದ್ದು ಜನತೆ ಸಂಚರಿಸಲು ತೊಂದರೆ ಅನುಭವಿಸುತ್ತಿಿರುವ ದೂರು ಆಧರಿಸಿ ಲಿಂಗಸಗೂರು ತಹಸೀಲ್ದಾಾರ ಕು.ಸತ್ಯಮ್ಮ ಬುಧವಾರ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರಾಂಪೂರ ಜಡಿಶಂಕರಲಿಂಗ ಏತನೀರಾವರಿ ಯೋಜನೆಯಡಿ ಈ ಭಾಗದಲ್ಲಿ ನೀರಾವರಿ ಕಲ್ಪಿಿಸಲಾಗಿದ್ದು ರಾಂಪೂರ ಗ್ರಾಾಮದ ಏತ ನೀರಾವರಿ ಪಂಪ್ಗಳು ಚಾಲನೆಯಾದಾಗ ಆನಾಹೊಸೂರ ಬಳಿ ಪಂಪ ಚಾಲನೆಯಾಗದಿದ್ದರೆ ಜಾಕ್ವೆಲ್ ಹಿಂಭಾಗದಲ್ಲಿ ಹೆಚ್ಚುವರಿ ಸಂಗ್ರಹವಾಗುವ ಕಾಲುವೆ ನೀರು ಜಾಗಿರನಂದಿಹಾಳ ಗ್ರಾಾಮಕ್ಕೆೆ ಸಂಚರಿಸುವ ರಸ್ತೆೆಯಲ್ಲಿನ ಕೆಳಮಟ್ಟದ ಸೇತುವೆ ಮೇಲ್ಬಾಾಗದಲ್ಲಿ ಹರಿದು ಸಂಚಾರಕ್ಕೆೆ ಕಂಟಕ ಸೃಷ್ಠಿಿಯಾಗುತ್ತಿಿದ್ದು ಕೆಲ ಸಮಯ ಮಳೆಗಾಲದಲ್ಲಿ ಹೆಚ್ಚುವರಿ ನೀರು ಸೇತುವೆ ಮೇಲ್ಬಾಾಗ ಹರಿದಾಗಲೂ ಈ ರಸ್ತೆೆಯಲ್ಲಿ ಸಾಗುವವರ ದ್ವಿಿಚಕ್ರ ಹಾಗೂ ವಾಹನ ಸವಾರರ ಸಂಕಷ್ಟ ತಪ್ಪಿಿದ್ದಲ್ಲ. ಕೆಲ ಸಮಯ ಸಂಚಾರ ಕಡಿತವಾಗುವಂತಾಗಿದೆ.
ವರ್ಷದ ಹತ್ತು ತಿಂಗಳು ನೀರು ಹರಿಯುವುದರಿಂದ ಗ್ರಾಾಮದ ರಸ್ತೆೆ ಸಂಪರ್ಕ ಪದೇಪದೆ ಬಂದ್ ಆಗುವುದರಿಂದ ಆನೆಹೊಸೂರು ಹಾಗೂ ಲಿಂಗಸೂಗೂರು ಪಟ್ಟಣಗಳ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾಾರ್ಥಿಗಳ ಸದಾ ತೊಂದರೆಗೀಡಾಗಿ ಪಾಠ ಪ್ರವಚನಗಳಿಂದ ವಂಚಿತರಾಗುವಂತಾಗಿದೆ.
ಈಗ್ರಾಾಮದ ರಸ್ತೆೆ ಮೂಲಕ ಸಂಚರಿಸುವ ರೋಗಿಗಳು, ವೃದ್ದರು, ಮಹಿಳೆಯರು, ಮಕ್ಕಳು, ಬಾಣಂತಿಯರ ಸಾರ್ವಜನಿಕರ ಸಂಕಷ್ಟ ಹೇಳತೀರದು. ಇಷ್ಟಾಾದರೂ ಸಹ ಸಂಬಂಧಿಸಿದ ಕೃಷ್ಣಾಾ ಭಾಗ್ಯ ಜಲ ನಿಗಮ ಅಧಿಕಾರಿಗಳು ಜನರ ಸಮಸ್ಯೆೆಗೆ ಸ್ಪಂದಿಸದ ಕಾರಣ ಜನತೆ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಗ್ರಾಾಮಸ್ಥರು ರೋಸಿ ಹೋಗಿದ್ದು ಪರ್ಯಾಯ ವ್ಯವಸ್ಥೆೆಗೆ ಕಾಯುತ್ತಿಿದ್ದಾಾರೆ.
2022-23ರಲ್ಲಿ ಸೇತುವೆ ನಿರ್ಮಿಸಲು ಕೆ.ಬಿ.ಜೆ.ಎನ್.ಎಲ್ನಿಂದ 2ಕೋಟಿ50ಲಕ್ಷ ನೀಲನಕ್ಷೆ ತಯ್ಯಾಾರಿಸಿದ ಮಾಜಿಶಾಸಕ ಡಿ.ಎಸ್. ಹೂಲಗೇರಿ ಮನವಿಗೆ ಸ್ಪಂದಿಸಿ ಅನುದಾನ ನೀಡಲು ಒಪ್ಪಿಿಗೆ ನೀಡಲಾಗಿತ್ತು ಅಧಿಕಾರಿಗಳು ಟೆಂಡರ್ ಪ್ರಕ್ರಿಿಯೆ ನಿರ್ಲಕ್ಷ್ಯದಿಂದ ಟೆಂಡರ್ ಸ್ಥಗಿತಗೊಂಡಿದೆ ಎಂದು ಆಕ್ರೋೋಶ ವ್ಯಕ್ತಪಡಿಸುವ ಗ್ರಾಾಮಸ್ಥರು ಜಾಗೀರನಂದಿಹಾಳ ಗ್ರಾಾಮದ ಸುಣಕಲ್ ಹಳ್ಳಕ್ಕೆೆ ಸೇತುವೆ ನಿರ್ಮಾಣಕ್ಕೆೆ ಪುನ: ಅನುದಾನ ಮಂಜೂರು ಮಾಡಿ ಕಾಮಗಾರಿ ಪ್ರಾಾರಂಭಿಸಬೇಕೆಂದು ಆಗ್ರಹಿಸಿದ್ದಾಾರೆ.
ಸಂಕಷ್ಟದ ಜನರಿಂದ ಮಾಹಿತಿ ಪಡೆದ ತಹಸೀಲ್ದಾಾರ ಕು. ಸತ್ಯಮ್ಮ ಇತ್ತೀಚೆಗೆ ಕೆಲ ದಿನಗಳ ಹಿಂದೆ ಕಾಲುವೆ ನೀರು ಜಾಸ್ತಿಿ ಹರಿಯುತ್ತಿಿದ್ದ ವೇಳೆ ರೈತ ನೀರಿನಲ್ಲಿ ಕೊಚ್ಚಿಿ ಹೋಗಿ ಪ್ರಾಾಣಾಪಾಯದಿಂದ ಪಾರಾದ ವರದಿಯ ಹಿನ್ನೆೆಲೆಯಲ್ಲಿ ತೊಂದರೆ ಸರಿಪಡಿಸಿ ಸೇತುವೆ ನಿರ್ಮಾಣ ಮಾಡುವಂತೆ ಕೆಬಿಜೆಎನ್ಎಲ್ ಎಇಇ ಚಂದ್ರಶೇಖರ ಸ್ವಾಾಮಿ ಅವರಿಗೆ ಸೂಚಿಸಿದರು. ಕಂದಾಯ ನಿರೀಕ್ಷಕ ರಾಮಕೃಷ್ಣ, ಗ್ರಾಾಮ ಲೆಕ್ಕಾಾಧಿಕಾರಿ ಧರಂಸಿಂಗ್ , ಗ್ರಾಾಮದ ರೈತ ಮುಖಂಡರಾದ ಶಿವಪುತ್ರಗೌಡ, ಶಿವರಾಮಪ್ಪ, ಮಹಾದೇವಪ್ಪ ಸಾಹುಕಾರ, ಹುಲ್ಲನಗೌಡ ಪೊ.ಪಾಟೀಲ್, ಗದ್ದೆೆಪ್ಪ ಅಮರಾವತಿ, ಕಾಸಿಂಸಾಬ್ ಇದ್ದರು.‘‘ಅನುದಾನ ಕೊರತೆಯಿಂದ ರಸ್ತೆೆ ಸೇತುವೆ ನಿರ್ಮಾಕ್ಕೆೆ ಹಿನ್ನಡೆಯಾಗಿದ್ದು ರಾಂಪೂರು ಏತ ನೀರಾವರಿ ಮೋಟರ್ಗಳು ಬಂದ್ವೇಳೆ ಕಾಲುವೆ ಹೆಚ್ಚುವರಿ ನೀರು ರಸ್ತೆೆ ಮೇಲೆ ಹರಿಯುತ್ತಿಿದೆ. ಲಭ್ಯವಿರುವ ಅನುದಾನದಲ್ಲಿ ಜಂಗಲ್ ಕಟ್ಟಿಿಂಗ್, ಹುಳು ಹಾಗೂ ಪೈಪಲೈನ್ ಸ್ವಚ್ಛತೆ ಮಾಡಿ ಕಾಲುವೆ ನೀರು ಹಳ್ಳಕ್ಕೆೆ ಹೋಗುವಂತೆ ತಾತ್ಕಾಾಲಿಕ ವ್ಯವಸ್ಥೆೆ ಮಾಡಲಾಗುವುದು
– ಚಂದ್ರಕಾಂತಸ್ವಾಾಮಿ ,ಕೆಬಿಜೆಎನ್ಎಲ್ ಎಇಇ
ತಹಸೀಲ್ದಾಾರ ಕು.ಸತ್ಯಮ್ಮ ಭೇಟಿ ವೀಕ್ಷಣೆ ಕೆಬಿಜೆಎನ್ಎಲ್ ನಿರ್ಲಕ್ಷ : ಜಾಗೀರನಂದಿಹಾಳ ಸೇತುವೆಯ ರಸ್ತೆೆ ಮೇಲೆ ನಿರಂತರ ಹರಿವ ನೀರು, ಸಂಚಾರಕ್ಕೆೆ ಸಂಚಕಾರ

