ಸುದ್ದಿಮೂಲ ವಾರ್ತೆ ಬೆಂಗಳೂರು, ನ.13:
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಾಪ್ತಿಿಯಲ್ಲಿ ಸಂಗ್ರಹವಾಗುವ ಹಸಿ ತ್ಯಾಾಜ್ಯ ಸಂಸ್ಕರಿಸಿ ಅನಿಲ ಉತ್ಪತ್ತಿಿ ಮಾಡಲು ಗೇಲ್ ಸಂಸ್ಥೆೆಗೆ ತುರುಮುರಿ ತ್ಯಾಾಜ್ಯ ಪ್ರದೇಶದಲ್ಲಿ 10 ಎಕರೆ ಜಾಗವನ್ನು 25 ವರ್ಷಗಳ ಅವಧಿಗೆ ಗುತ್ತಿಿಗೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಿಯಲ್ಲಿ ಮಾಹಿತಿ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಾಪ್ತಿಿಯಲ್ಲಿ ಪ್ರತಿ ದಿನ 150 ಟನ್ ಹಸಿ ತ್ಯಾಾಜ್ಯ ಸಂಗ್ರಹವಾಗುತ್ತಿಿದ್ದು ಇದನ್ನು ಸಂಸ್ಕರಿಸಿ ಬಯೋ ಗ್ಯಾಾಸ್ ಉತ್ಪತ್ತಿಿ ಮಾಡಲು ಬೆಳಗಾವಿ ನಗರದ ಬಳಿ ಇರುವ ತುರುಮುರಿ ತ್ಯಾಾಜ್ಯ ಘಟಕ ಪ್ರದೇಶದಲ್ಲಿ 10 ಎಕರೆ ಜಾಗವನ್ನು ಮಂಜೂರು ಮಾಡಲು ಸಂಪುಟ ಸಭೆ ಒಪ್ಪಿಿಗೆ ನೀಡಿದೆ.
ಘಟಕ ನಿರ್ವಹಣೆಗೆ ಬೆಳಗಾವಿ ಮಹಾನಗರ ಪಾಲಿಕೆ ಯಾವುದೇ ರೀತಿಯ ಹಣ ಬಿಡುಗಡೆ ಮಾಡುತ್ತಿಿಲ್ಲ. ಬದಲಿಗೆ ಗೇಲ್ ಸಂಸ್ಥೆೆಯೇ ಸಂಪೂರ್ಣ ಹಣವನ್ನು ಭರಿಸುತ್ತಿಿದೆ . ಹೀಗಾಗಿ ಪಾಲಿಕೆಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಬೆಳಗಾವಿ ಪಾಲಿಕೆ ಪ್ರತಿ ದಿನ ತ್ಯಾಾಜ್ಯ ಸಂಸ್ಕರಣ ಘಟಕಕ್ಕೆೆ 150 ಟನ್ ಹಸಿ ತ್ಯಾಾಜ್ಯವನ್ನು ಸಂಗ್ರಹಿಸಿ ನೀಡಬೇಕು. ಈ ಜವಾಬ್ದಾಾರಿ ಪಾಲಿಕೆ ಮೇಲಿದೆ. ಉತ್ಪತ್ತಿಿಯಾದ ಅನಿಲವನ್ನು ಬೆಳಗಾವಿ ನಗರದಲ್ಲೇ ಸಂಸ್ಥೆೆ ಗ್ರಾಾಹಕರಿಗೆ ವಿತರಣೆ ಮಾಡಲಿದೆ ಎಂದರು.
ಪ್ರಧಾನಮಂತ್ರಿಿ ಮತ್ಸ್ಯ ಸಂಪದ ಯೋಜನೆ ಅಡಿ ಮಾನಿಟರಿಂಗ್, ನಿಯಂತ್ರಣ ಹಾಗೂ ಮೇಲ್ವಿಿಚಾರಣೆಗಾಗಿ 12003 ಮೀನುಗಾರಿಕಾ ದೋಣಿಗಳಿಗೆ 43.69 ಕೋಟಿ ರೂ. ವೆಚ್ಚದಲ್ಲಿ ದ್ವಿಿಮುಖ ಸಂಪರ್ಕ ಸಾಧನ ಅಳವಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದರಲ್ಲಿ ಕೇಂದ್ರ ಸರ್ಕಾರ 26.21 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 17.48 ಕೋಟಿ ರೂ. ನೀಡಲಿದೆ. ಇಸ್ರೋೋ ವಾಣಿಜ್ಯ ಸಂಸ್ಥೆೆಯಾದ ಎನ್ಎಸ್ಐಎಲ್ ಮೂಲಕ ಅನುಷ್ಠಾಾನಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.
ಮೀನುಗಾರರ ಹಾಗೂ ಅವರು ಬಳಸುವ ದೋಣಿಗಳ ಸುರಕ್ಷತೆಗಾಗಿ ಜಿಪಿಎಸ್ ಸಂವಹನ ವ್ಯವಸ್ಥೆೆಯನ್ನು ಎಲ್ಲ ಯಾಂತ್ರೀೀಕೃತ ಮೀನುಗಾರಿಕೆ ದೋಣಿಗಳಲ್ಲಿ ಅಳವಡಿಸಲಾಗುವುದು. ಇದರಿಂದ ದೂರ ಹಾಗೂ ಆಳವಾದ ಸಮುದ್ರದಲ್ಲಿ ಸಂಕಷ್ಟಕ್ಕೆೆ ಸಿಲುಕಿದ ದೋಣಿಗಳನ್ನು ಪತ್ತೆೆ ಹಚ್ಚಲು ಅನೂಕುಲವಾಗಲಿದೆ ಎಂದರು.
ಮೈಸೂರು ನಗರದ ಸರ್ಕಾರಿ ಅತಿಥಿ ಗೃಹದ ನೌಕರರ ವಸತಿ ಗೃಹಗಳ ಆವರಣದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಶಾಸಕರ ಹಾಗೂ ಸಂಸದರ ಭವನ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.
ಸಾರ್ವತ್ರಿಿಕ ರಜಾ ಪಟ್ಟಿಿ ಅನುಮೋದನೆ
2026ನೇ ಸಾಲಿನ ಸಾರ್ವತ್ರಿಿಕ ರಜೆಗಳ ಮತ್ತು ಪರಿಮಿತಿ ರಜೆಗಳ ಪಟ್ಟಿಿಯನ್ನು ಅಧಿಸೂಚಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆೆಯ ಆವರಣದಲ್ಲಿ 250 ಹಾಸಿಗೆ ಸಾಮರ್ಥ್ಯದ ಸೂರ್ಪ ಸ್ಪೆೆಷಾಲಿಟಿ ಆಸ್ಪತ್ರೆೆ ಆರಂಭಕ್ಕೆೆ ಅಗತ್ಯ ಇರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳನ್ನು ರೂ. 2792 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ಸಭೆ ನೀಡಿದೆ.
ಅಲ್ಲದೆ ಆಸ್ಪತ್ರೆೆಗೆ ಅಗತ್ಯ ಇರುವ ಇತರ ಸೇವೆ ಒದಗಿಸಲು ಕಾಮಗಾರಿ ಕೈಗೊಳ್ಳಲು 21 ಕೋಟಿ ರೂ. ಹಣ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

