ಸುದ್ದಿಮೂಲ ವಾರ್ತೆ ಕಲಬುರಗಿ, ನ.13:
ಚಿತ್ತಾಾಪುರದಲ್ಲಿ ನ.16ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಪಥಸಂಚಲನಕ್ಕೆೆ ಕರ್ನಾಟಕ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿದೆ.
ಕಳೆದ ಅಕ್ಟೋೋಬರ್ 19ರಂದು ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆೆ ಚಿತ್ತಾಾಪುರ ತಹಶೀಲ್ದಾಾರ್ ಅವರು ಕಾನೂನು ಸುವ್ಯವಸ್ಥೆೆ ಕಾರಣ ನೀಡಿ ಅನುಮತಿ ನಿರಾಕರಿಸಿದ್ದರು. ಈ ಆದೇಶ ಕುರಿತು ಆರ್ಎಸ್ಎಸ್ ಪರ ಅರ್ಜಿದಾರ ಅಶೋಕ್ ಪಾಟೀಲ್ ಕಲಬುರಗಿ ಹೈಕೋರ್ಟ್ ಪೀಠದ ಮೆಟ್ಟಿಿಲೇರಿದ್ದರು.
ನ್ಯಾಾ.ಎಂ.ಜಿ.ಎಸ್ ಕಮಲ್ ಅವರಿದ್ದ ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠವು ಗುರುವಾರ ಸದರಿ ಪ್ರಕರಣದ ವಿಚಾರಣೆಯನ್ನು ನಡೆಸಿ, ಆರ್ಎಸ್ಎಸ್ ಪಥ ಸಂಚಲನಕ್ಕೆೆ ಷರತ್ತು ಬದ್ಧವಾಗಿ ಅನುಮತಿ ನೀಡಿ ಆದೇಶ ಹೊರಡಿಸಿದ್ದು, 300 ಜನ ಗಣವೇಷಧಾರಿ ಸ್ವಯಂಸೇವಕರು ಹಾಗೂ 50 ಜನ ಘೋಷ ವಾದಕರು ಪಥಸಂಚಲನದಲ್ಲಿ ಭಾಗಿಯಾಗುವಂತೆ ಅವಕಾಶ ನೀಡಿ ಆದೇಶಿಸಿದೆ.
ಪಥಸಂಚಲನ ಕುರಿತು ನ್ಯಾಾಯಾಲಯಕ್ಕೆೆ ಮಾಹಿತಿ ನೀಡಿದ ಜಿಲ್ಲಾಡಳಿತ, 350 ಜನರ ಮಿತಿಯೊಂದಿಗೆ ನ.16ರ ಮಧ್ಯಾಾಹ್ನ 3.30 ರಿಂದ ಸಂಜೆ 5.30ರವರೆಗೆ (ಸೂರ್ಯಾಸ್ತದವರೆಗೆ) ಪಥಸಂಚಲನಕ್ಕೆೆ ಅವಕಾಶ ನೀಡಲಾಗಿದೆ. ಮಧ್ಯಾಾಹ್ನ 3:30ರಿಂದ ಸಂಜೆ 5:45ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಕಲಬುರಗಿ ಹೈಕೋರ್ಟ್ ಪೀಠ ತಿಳಿಸಿದೆ.
ಪಥಸಂಚಲನದ ಅನುಮತಿ ಕುರಿತು ಈ ಹಿಂದೆ ಕಲಬುರಗಿಯಲ್ಲಿ ನಡೆದಿದ್ದ ಶಾಂತಿ ಸಭೆ ಯಾವುದೇ ಒಮ್ಮತವಿಲ್ಲದೆ ಅಂತ್ಯಗೊಂಡಿತ್ತು. ನಂತರ, ಹೈಕೋರ್ಟ್ ಸೂಚನೆಯಂತೆ ಅಡ್ವೊೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಿ ಅವರ ಬೆಂಗಳೂರಿನ ಕಚೇರಿಯಲ್ಲಿ 2ನೇ ಸುತ್ತಿಿನ ಸಭೆ ನಡೆದಿತ್ತು. ಈ ಸಭೆಯು ಲಪ್ರದವಾಗಿದೆ ಎಂದು ಕಳೆದ ವಿಚಾರಣೆಯಲ್ಲಿ ನ್ಯಾಾಯಾಲಯಕ್ಕೆೆ ತಿಳಿಸಲಾಗಿತ್ತು.ಬೆಂಗಳೂರಿನ ಸಭೆಯಲ್ಲಿ ಆರ್ಎಸ್ಎಸ್ಮುಖಂಡರು ನವೆಂಬರ್ 13 ಅಥವಾ 16ರಂದು ಅವಕಾಶ ನೀಡುವಂತೆ ಪ್ರಸ್ತಾಾವನೆ ಸಲ್ಲಿಸಿದ್ದರು. ಇದರ ಹಿನ್ನೆೆಲೆಯಲ್ಲಿ ನ.16ಕ್ಕೆೆ ಅನುಮತಿ ನೀಡಿ ಹೈಕೋರ್ಟ್ ಅಂತಿಮ ಆದೇಶ ಪ್ರಕಟಿಸಿದೆ.
ಇನ್ನೂ, ಜಿಲ್ಲಾಡಳಿತದ ಆದೇಶದಂತೆ ಶಾಂತಿಯುತವಾಗಿ, ಸೌಹಾರ್ದಯುತವಾಗಿ ನಾವು ಪಥಸಂಚಲನ ನಡೆಸುತ್ತೇವೆ. ಪಥಸಂಚಲನದಲ್ಲಿ 300 ಜನ ಗಣವೇಷಧಾರಿ ಸ್ವಯಂಸೇವಕರು, 50 ಜನರ ಘೋಷವಾದ್ಯದ ತಂಡ ಭಾಗಿಯಾಗಲಿದೆ. ಪಥಸಂಚಲಕ್ಕೆೆ ಅನುವು ಮಾಡಿದ ಎಜೆ ಶಶಿಕಿರಣ ಶೆಟ್ಟಿಿ, ಜಿಲ್ಲಾಡಳಿತಕ್ಕೆೆ, ಪೋಲಿಸ್ ವರಿಷ್ಠಾಾಧಿಕಾರಿಗೆ, ತಹಶೀಲ್ದಾಾರರಿಗೆ ಹಾಗೂ ವಿಶೇಷವಾಗಿ ನ್ಯಾಾಯಾಲಯಕ್ಕೆೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಆರ್ಎಸ್ಎಸ್ ಪರ ವಕೀಲ ಅರುಣ ಶ್ಯಾಾಂ ತಿಳಿಸಿದರು.

