ಸುದ್ದಿಮೂಲ ವಾರ್ತೆ ದೇವದುರ್ಗ, ನ.14:
ಜಿಲ್ಲೆೆಯಲ್ಲಿ ದೇವದುರ್ಗ ವಿಧಾನ ಸಭಾ ಕ್ಷೇತ್ರದ ಒಬ್ಬ ಮಹಿಳಾ ಶಾಸಕಿ ಇರುವ ಕಾರಣ ಅಧಿಕಾರಿಗಳಿಂದ ಪದೇ ಪದೇ ಶಿಷ್ಟಾಾಚಾರ ಉಲ್ಲಂಘನೆಯಾಗುತ್ತಿಿದ್ದು, ಅದರಂತೆ ತಾಲೂಕಿನ ಜನತೆಯ ಬಹುದಿನಗಳ ಕನಸು ನಸಾಗಲು ಶ್ರಮಿಸಿದ ನನಗೆ ಕೋರ್ಟ್ ನೂತನ ಕಟ್ಟಡ ಉದ್ಘಾಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಾಚಾರ ಉಲ್ಲಂಘಿಸಿದ್ದಾಾರೆಂದು ಶಾಸಕಿ ಕರೆಮ್ಮ ಜಿ. ನಾಯಕ ನೆರ ಆರೋಪ ಮಾಡಿದ್ದಾಾರೆ.
ಅವರು ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವದುರ್ಗ ತಾಲೂಕಿನ ಕೋರ್ಟ್ ಕಟ್ಟಡ ಉದ್ಘಾಾಟನೆಗಾಗಿ ಮುಖ್ಯ ನ್ಯಾಾಯಾಧೀಶರು ಮತ್ತು ತಾಲೂಕಿನ ಹೆಮ್ಮೆೆಯ ಪುತ್ರರು ನಿವೃತ್ತ ನ್ಯಾಾಯಮೂರ್ತಿಗಳಾದ ಶಿವರಾಜ ಪಾಟೀಲ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಬರುತ್ತಿಿರುವದು ತುಂಬಾ ಸಂತೋಷದ ವಿಷಯವಾಗಿದೆ.
ದೇವದುರ್ಗ ಪಟ್ಟಣದ ಹೊರವಲಯದಲ್ಲಿ ನೂತನವಾಗಿ ಕೋರ್ಟ್ ಕಟ್ಟಡ ನಿರ್ಮಾಣವಾಗಿದ್ದು, ಇದರ ಉದ್ಘಾಾಟನೆಗಾಗಿ ಅನುಸರಿಸಬೇಕಾದ ನಿಯಮಗಳನ್ನು ಜಿಲ್ಲಾಾ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆ ಸಂಪೂರ್ಣ ಎಡವಿದೆ. ಈ ಉದ್ಘಾಾಟನೆ ವೇಳೆ ನನಗೆ ಅನುಸರಿಸಿದ ಮಾನದಂಡಗಳು, ನಿಯಮಗಳನ್ನು ಎಲ್ಲಾಾ ಚುನಾಯಿತ ಜನಪ್ರತಿನಿಧಿಗಳಿಗೆ ಅನುಸರಿಸಬೇಕಿತ್ತು, ಜಿಲ್ಲಾಾ ಉಸ್ತುವಾರಿ ಸಚಿವರ ಮೇಲೆ ಕೂಡ ಪ್ರಕರಣವಿದ್ದು, ಆದರೆ ಬೇರೊಬ್ಬರಿಗೆ ಒಂದು ನ್ಯಾಾಯ ನನಗೆ ಒಂದು ನ್ಯಾಾಯ ಎನ್ನುವಂತೆ ಆಗಿದೆ. ಜಿಲ್ಲಾಾ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಆದ ಶಿಷ್ಟಾಾಚಾರದ ಉಲ್ಲಂಘನೆ ಸಂಬಂಧ ಹಕ್ಕು ಚ್ಯುತಿ ಸಭಾಪತಿಗಳಿಗೆ ಮಂಡಿಸಲಾಗುವದು.
ನಾನು ದೇವದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಜನರ ವಿಶ್ವಾಾಸದಿಂದ ಆಯ್ಕೆೆಯಾದ ಶಾಸಕಿಯಾಗಿದ್ದು, ಜನಪರ ಹೋರಾಟಗಳನ್ನು ಮಾಡಿದ್ದೇನೆ. ಕೋರ್ಟ್ ಕಟ್ಟಡದ ಉದ್ಘಾಾಟನೆ ವೇಳೆ ನನ್ನನ್ನೂ ಕೈಬಿಟ್ಟಿಿರುವದನ್ನು ಉನ್ನತ ಮಟ್ಟದ ಅಧಿಕಾರಿಗಳಿಗೆ ವಿಚಾರಿಸಿದರೆ ನನಗೆ ಧಮ್ಕಿಿ ಹಾಕಿದ್ದಾಾರೆಂದು ಆರೋಪಿಸಿದ್ದು, ಧಮ್ಕಿಿಹಾಕಿದ ಅಧಿಕಾರಿಯ ಹೆಸರನ್ನು ಕಾರ್ಯಕ್ರಮ ಮುಗಿದ ನಂತರ ಬಹಿರಂಗ ಪಡಿಸುತ್ತೇನೆ.
ಪಟ್ಟಣ ವ್ಯಾಾಪ್ತಿಿಯಲ್ಲಿ ನಡೆಯುವ ಕೋರ್ಟ್ ಉದ್ಘಾಾಟನೆ ಕಾರ್ಯಕ್ರಮ ನಾನು ಮತ್ತು ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸುವುದಿಲ್ಲ, ಆದರೆ ಶಾಂತಿ, ಸುವ್ಯವಸ್ಥೆೆಯಿಂದ ಕಾರ್ಯಕ್ರಮ ನಡೆಯಲಿ ನಾನು ಕಾನೂನು ಪಾಲಿಸುತ್ತೇವೆಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.
ನ್ಯಾಾಯಾಂಗ ಮತ್ತು ಶಾಸಕಾಂಗದ ಮಧ್ಯೆೆ ನಡೆಯುತ್ತಿಿರುವ ಸಂಘರ್ಷಗಳು ಬಹಳ ವರ್ಷಳಿಂದ ಹಿಂದಿನಿಂದಲು ನಡೆಯುತ್ತಿಿದೆ, ಸ್ಥಳೀಯ ಶಾಸಕರಾದ ಕರೆಮ್ಮ ಜಿ. ನಾಯಕ ಇವರಿಂದ ಶಿಷ್ಟಾಾಚಾರದ ಉಲ್ಲಂಘನೆ ಮತ್ತು ಹಕ್ಕುಚ್ಯುತಿ ಸಂಬಂಧ ಕಾನೂನು ಹೋರಾಟದಿಂದ ಎಲ್ಲಾಾ ಚುನಾಯಿತ ಜನಪ್ರತಿನಿಧಿಗಳು ಅನುಕೂಲವಾಗಲಿದೆ ಹಿರಿಯ ವಕೀಲರು ಜೆ.ಡಿ.ಎಸ್. ಪಕ್ಷದ ಉಪಾಧ್ಯಕ್ಷರಾದ ಅಮರೇಶ್ ಪಾಟೀಲ್ ಪರತಪುರ ಹೇಳಿದರು. ನ್ಯಾಾಯಾಂಗ ಮತ್ತು ಶಾಸಕಾಂಗ, ಕಾರ್ಯಾಂಗವು ತಮ್ಮದೇ ಆದ ಕಾನೂನಿನ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿಿದ್ದು, ಆದರೆ ಕೆಲ ಸೂಕ್ಷ್ಮ ವಿಚಾರವಾಗಿ ಇಂತಹ ಬೆಳೆವಣಿಗೆಗಳು ಕಾಣುತ್ತಿಿದ್ದು,ಇದರ ಪರಿಹಾರಕ್ಕೆೆ ನಮ್ಮ ಶಾಸಕರು ದಿಟ್ಟ ಹೆಜ್ಜೆೆ ಇಟ್ಟಿಿರುವುದರಿಂದ ಮುಂದೆ ಎಲ್ಲಾಾ ಚುನಾಯಿತ ಜನಪ್ರತಿನಿಧಿಗಳಿಗೆ ಅನುಕೂಲವಾಗಲಿದೆ ಎಂದರು.
ನ್ಯಾಾಯಾಂಗ, ಶಾಸಕಾಂಗ, ಮತ್ತು ಕಾರ್ಯಾಂಗವು ಒಟ್ಟಾಾಗಿ ಶಿಷ್ಟಾಾಚಾರ, ನಡುವಳಿಕೆಗಳನ್ನು ಎಲ್ಲಾಾ ಚುನಾಯಿತ ಜನಪ್ರತಿನಿಧಿಗಳನ್ನು ಸಮಾನವಾಗಿ ನಿಯಮಗಳನ್ನು ಜಾರಿ ಮಾಡಬೇಕು. ಈ ಕೋರ್ಟ್ ಕಟ್ಟಡ ಉದ್ಘಾಾಟನೆ ವೇಳೆ ಎಲ್ಲರಿಗೂ ಸಮಾನವಾದ ನಿಯಮಾವಳಿಗಳನ್ನು ಮಾಡದೇ ಇರುವದರಿಂದ ಶಿಷ್ಟಾಾಚಾರ ಉಲ್ಲಂಘನೆಯಾಗಿರುವದು ಮೇಲ್ನೋೋಟಕ್ಕೆೆ ಕಾಣುತ್ತಿಿದೆಂದು ಅಮರೇಶ ಪಾಟೀಲ್ ವಕೀಲರು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಣ್ಣ ತಾತ ಮುಂಡರಗಿ, ರಾಜಾ ರಂಗಪ್ಪ ನಾಯಕ, ಚಂದಪ್ಪ ಅಕ್ಕರಕಿ, ಶಾಲಂ ಉದ್ದಾಾರ, ನಾಗಪ್ಪ ಪಾಮರತಿ, ದೊಡ್ಡ ರಂಗಣ್ಣ ಅಳ್ಳುಂಡಿ, ಸಿದ್ದಣ್ಣ ಗಣೇಕಲ್, ಇಸಾಕ್ ಸಾಬ್ ಮೇಸಿ, ವೆಂಕಟೇಶ್ ಕೊತ್ತದೊಡ್ಡಿಿ, ದಾವುದ್ ಔಂಟಿ, ಗೋವಿಂದರಾಜ ಚಿಕ್ಕಗುಡ್ಡ, ಶರಣಗೌಡ ಸುಂಕೇಶ್ವರಹಾಳ, ತಬ್ಬಸುಮ್ಮ ಉದ್ದಾಾರ, ನಿರ್ಮಲಾ ಡಿ. ಅಮರೇಗೌಡ ಯಾಟಗಲ್, ಸೇರಿದಂತೆ ಹಲವಾರು ಜೆ.ಡಿ.ಎಸ್. ಮುಖಂಡರು ಉಪಸ್ಥಿಿತರಿದ್ದರು.
*ಉನ್ನತ ಮಟ್ಟದ ಅಧಿಕಾರಿಗಳಿಂದ ಶಾಸಕಿಗೆ ಧಮ್ಕಿಿ, *ನ್ಯಾಾಯಾಂಗ, ಶಾಸಕಾಂಗ ಮಧ್ಯದಲ್ಲಿ ನಡೆಯುತ್ತಿಿರುವ ಸಂಘರ್ಷ, ಶಿಷ್ಟಾಾಚಾರ ಉಲ್ಲಂಘನೆ ಸಭಾಪತಿಗಳಿಗೆ ದೂರು

