ೆ ಪಾಟ್ನಾಾ, ನ.14:
ಅಭಿವೃದ್ದಿ ದೃಷ್ಟಿಿಕೋನ, ಜಾತಿಬಲದ ಜೊತೆಗೆ ಮುಖ್ಯವಾಗಿ ಮಹಿಳೆಯರಿಗೆ ನೀಡಲಾದ ಕಲ್ಯಾಾಣ ಯೋಜನೆಗಳು ಕೈಹಿಡಿದ ಪರಿಣಾಮ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಿಕೂಟ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಮೂಲಕ ಬಹುತೇಕ ಕಳೆದ 20 ವರ್ಷಗಳಿಂದ ಮುಖ್ಯಮಂತ್ರಿಿಯಾಗಿರುವ ನಿತೀಶ್ ಕುಮಾರ್ ಅವರ ಆಡಳಿತಕ್ಕೆೆ ಬಿಹಾರ ಜನ ಮತ್ತೊೊಮ್ಮೆೆ ಉಘೇ ಎಂದಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಆಡಳಿತಾರೂಢ ಎನ್ಡಿಎ ಮೈತ್ರಿಿಕೂಟ ನಿರೀಕ್ಷೆಗೂ ಮೀರಿ ಜಯ ಸಾಧಿಸಿದೆ. 243 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬಿಹಾರದಲ್ಲಿ ಎನ್ಡಿಎ ಮೈತ್ರಿಿಕೂಟ 201 ಸ್ಥಾಾನಗಳನ್ನು ಗಳಿಸಿದೆ. ವಿರೋಧ ಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆೆಸ್ ನೇತೃತ್ವದ ಮಹಾಘಟಬಂಧನ್ ಕೇವಲ 36 ಸ್ಥಾಾನಗಳನ್ನು ಗಳಿಸಲು ಶಕ್ತವಾಗಿದೆ. ಈ ಮೂಲಕ ಎನ್ಡಿಎ ಮೈತ್ರಿಿಕೂಟ ಬಿಹಾರದಲ್ಲಿ ಮತ್ತೊೊಮ್ಮೆೆ ಸರ್ಕಾರ ರಚನೆ ಮಾಡಲಿದೆ.
ನಿತೀಶ್ ಕುಮಾರ್ ಹಿರಿತನ ಮತ್ತು ರಾಜಕೀಯ ಮುನ್ನೋೋಟ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಿಯತೆ, ಲೋಕಜನಶಕ್ತಿಿ ಪಕ್ಷದ ಚಿರಾಗ್ ಪಾಸ್ವಾಾನ್ ಅವರಿಂದ ಯುವ ಸಮೂಹದ ಸೆಳೆತ ಬಿಹಾರದಲ್ಲಿ ಸಂಘಟಿತ ಕೆಲಸ ಮಾಡಿವೆ. ಅತಿಹೆಚ್ಚು ಮಹಿಳೆಯರು ನಿತೀಶ್ ಪರವಾಗಿ ಮತ ಚಲಾಯಿಸಿದ್ದು, ಎನ್ಡಿಿಎ ಮೈತ್ರಿಿಕೂಟವನ್ನು ಉತ್ತುಂಗಕ್ಕೆೆ ತಂದು ನಿಲ್ಲಿಸಿದೆ ಎಂದು ವಿಶ್ಲೇಷಿಸಲಾಗಿದೆ.
ರಾಜಕೀಯ ಲೆಕ್ಕಾಾಚಾರಗಳನ್ನೇ ತಲೆಕೆಳಗು ಮಾಡಿದ ಚುನಾವಣೆಗಳಲ್ಲಿ ಈಗ ಬಿಹಾರವೂ ಸೇರಿಕೊಂಡಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿ ಮತ್ತೊೊಮ್ಮೆೆ ಎನ್ಡಿಿಎಗೆ ಬಹುಮತ ಸಿಗುತ್ತದೆ. ಮಹಾಘಟಬಂಧನ್ 100 ಸ್ಥಾಾನಗಳ ಆಸುಪಾಸಿನಲ್ಲಿಸುತ್ತದೆ ಎಂದು ಹೇಳಿದ್ದವು. ಆದರೆ, ಎಲ್ಲಾ ಲೆಕ್ಕಾಾಚಾರಗಳು ತಲೆಕೆಳಗಾಗಿದ್ದು, ಎನ್ಡಿಿಎ ಮೈತ್ರಿಿಕೂಟ ನಾಗಾಲೋಟದಲ್ಲಿ ಮುನ್ನುಗ್ಗಿಿ ನಿರೀಕ್ಷೆಗೂ ಮೀರಿದಂತೆ ಎರಡು ಶತಕ ಬಾರಿಸಿದೆ.
ಇತ್ತ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಮಹಾಘಟಬಂಧನ್ನ ಆರ್ಜೆಡಿ ಮತ್ತು ಕಾಂಗ್ರೆೆಸ್ ಏನೇ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದರೂ ಅವರು ಜನರ ಮನ ಗೆಲ್ಲಲು ಸಾಧ್ಯವಾಗಿಲ್ಲ. ಸಾಕಷ್ಟು ಹೋರಾಟದ ಬಳಿಕವೂ ಇಂದಿನ ಲಿತಾಂಶದಲ್ಲಿ ಹೀನಾಯ ಸೋಲು ಕಂಡಿದ್ದು, ಬಿಹಾರಿ ಜನತೆ ಈ ಪಕ್ಷಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂಬುದು ಸಾಬೀತಾಗಿದೆ.
ಬಿಹಾರದಲ್ಲಿ 2005ರಿಂದಲೂ ಬಹುತೇಕ ನಿರಂತರವಾಗಿ (ನಿತಿನ್ ರಾಮ್ ಮಾಂಜಿ 2014ರ ಮೇ ನಿಂದ 2025ರ ೆಬ್ರುವರಿವರೆಗೆ 278 ದಿನ ಸಿಎಂ ಆಗಿದ್ದರು) ಮುಖ್ಯಮಂತ್ರಿಿ ಆಗಿದ್ದಾರೆ. ಹೀಗೆ ಸುದೀರ್ಘ ಆಡಳಿತ ನೀಡಿರುವ ನಿತೀಶ್ ವಿರುದ್ಧ ಈ ಬಾರಿಯ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಇದೆ, ನಿತೀಶ್ ಅವರಿಗೆ ವಯಸ್ಸಾಾಗಿದ್ದು ಆರೋಗ್ಯ ಸಮಸ್ಯೆೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅದೇನೇ ಇದ್ದರೂ ನಿತೀಶ್ ಮೇಲೆ ಬಿಹಾರದ ಜನ ಮತ್ತೊೊಮ್ಮೆೆ ವಿಶ್ವಾಾಸವಿಟ್ಟು ಅಭೂತಪೂರ್ವ ಜಯ ನೀಡಿದ್ದಾರೆ.
ಇತ್ತ ಆರ್ಜೆಡಿ ಮತ್ತು ಕಾಂಗ್ರೆೆಸ್ ಮೈತ್ರಿಿಕೂಟ ಅರಂಭದಿಂದಲೇ ಗೊಂದಲಗಳನ್ನು ಎದುರಿಸಿದ್ದವು. ಒಂದನೇ ಮತ್ತು ಎರಡನೇ ಹಂತದ ನಾಮಪತ್ರ ಸಲ್ಲಿಕೆ ಕೊನೆಯ ದಿನದವರೆಗೂ ಸೀಟು ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಎರಡೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಪ್ರಚಾರದಲ್ಲಿಯೂ ಹೊಂದಾಣಿಕೆ ಇರಲಿಲ್ಲ. ಇತ್ತ ರಾಹುಲ್ಗಾಂಧಿ ಅವರು ದೂರವಾಣಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಆರ್ಜೆಡಿ ನಾಯಕರು ಪರಸ್ಪರ ಆರೋಪ ಮಾಡುತ್ತಿಿದ್ದರು.
ಯಾದವ ಸಮುದಾಯದ 52 ಅಭ್ಯರ್ಥಿಗಳನ್ನು ಕಣಕ್ಕಿಿಳಿಸಿ ಜಾತಿ ಪ್ರೇೇಮ ಮೆರೆದಿದ್ದು, ಅತಿಯಾದ ಮುಸ್ಲಿಿಮರ ಓಲೈಕೆ ರಾಜಕಾರಣ ಮಾಡಿದ್ದು ಆರ್ಜೆಡಿ ಹಿನ್ನಡೆಗೆ ಕಾರಣ ಎಂದು ಪ್ರಾಾಥಮಿಕವಾಗಿ ವಿಶ್ಲೇಷಿಸಲಾಗುತ್ತಿಿದೆ. ಈ ಮಧ್ಯೆೆ ಮಹಾಘಟಬಂಧನ್ನಿಂದ ಒಂದು ಕೋಟಿ ಸರ್ಕಾರಿ ನೌಕರಿ, ಮಹಿಳಾ ರೋಜಗಾರ್ ಯೋಜನೆ, ಮಹಿಳೆಯರಿಗೆ ವಾರ್ಷಿಕ 2 ಲಕ್ಷ ರೂ.ವರೆಗೆ ಸಹಾಯಧನ, 1 ಕೋಟಿ ಮಹಿಳೆಯರನ್ನು ಲಕ್ಷಾಧೀಶ್ವರರನ್ನಾಾಗಿ ಮಾಡುವುದು ಸೇರಿದಂತೆ ಹಲವು ಜನಪ್ರಿಿಯ ಯೋಜನೆಗಳನ್ನು ನೀಡಿದರೂ ಅವು ಬಿಹಾರದ ಜನರ ಮನ ಗೆಲ್ಲಲು, ವಿಶ್ವಾಾಸ ಗಳಿಸಲು ಸಾಧ್ಯವಾಗಿಲ್ಲ.
ಈ ಮಧ್ಯೆೆ ರಾಹುಲ್ಗಾಂಧಿ ಅವರು ಚುನಾವಣೆಗೆ ಮುಂಚೆ ನಡೆಸಿದ ಮತಾಧಿಕಾರ ಯಾತ್ರೆೆಗೆ ಹೆಚ್ಚಿಿನ ಜನಬೆಂಬಲ ಕಂಡುಬಂದಿತ್ತು. ಚುನಾವಣಾ ವೇಳೆಯಲ್ಲಿ ನಡೆಸಿದ ಮತಗಳ್ಳತನದ ಅಕ್ರಮ ಬಹಿರಂಗ ಮಾಡಿದ್ದು ಚುನಾವಣೆಯಲ್ಲಿ ಅವು ಮತಗಳಾಗಿ ಪರಿವರ್ತನೆಯಾಗಿಲ್ಲ. 2020ರಲ್ಲಿ 19 ಸ್ಥಾಾನ ಗೆದ್ದಿದ್ದ ಕಾಂಗ್ರೆೆಸ್ ಈ ಬಾರಿ ಕೇವಲ 3 ಸ್ಥಾಾನಗಳಿಗೆ ತೃಪ್ತಿಿಪಟ್ಟುಕೊಂಡಿದೆ.
ನಿತೀಶ್ಕುಮಾರ್ಗೆ ಮತ್ತೊೊಮ್ಮೆೆ ಅಧಿಕಾರದ ಉಡುಗೊರೆ?
ಎನ್ಡಿಎ ಒಕ್ಕೂಟದಿಂದ ಮುಖ್ಯಮಂತ್ರಿಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿರಲಿಲ್ಲ. ಪ್ರಮುಖವಾಗಿ ಜೆಡಿಯು-ಬಿಜೆಪಿ ಸಂಘಟಿತ ಹೋರಾಟವನ್ನೇ ಮಾಡಿವೆ. ಈಗ ಬಿಜೆಪಿ 89, ಜೆಡಿಯು 85 ಸ್ಥಾಾನಗಳನ್ನು ಗಳಿಸಿದ್ದು ಬಿಜೆಪಿಯೇ ನಾಲ್ಕು ಹೆಚ್ಚುವರಿ ಸ್ಥಾಾನಗಳನ್ನು ಗಳಿಸಿದೆ. ಮತ್ತೊೊಂದು ಪ್ರಮುಖ ಮೈತ್ರಿಿಕೂಟ ಪಕ್ಷವಾದ ಕೇಂದ್ರ ಸಚಿವ ಚಿರಾಗ್ ಪಾಸ್ವಾಾನ್ ನಾಯಕತ್ವದ ಲೋಕಜನಶಕ್ತಿಿ ಪಕ್ಷ (ಎಲ್ಜಿಪಿ) 19 ಸ್ಥಾಾನ ಗಳಿಸಿದೆ. ಹೀಗಾಗಿ ಮುಂದಿನ ಮುಖ್ಯಮಂತ್ರಿಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದ್ದರೂ ಸಹ ಮೂಲಗಳ ಪ್ರಕಾರ ನಿತೀಶ್ಕುಮಾರ್ ಮತ್ತೊೊಮ್ಮೆೆ ಮುಖ್ಯಮಂತ್ರಿಿ ಆಗುವುದು ಬಹುತೇಕ ನಿಶ್ಚಿಿತ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆೆ ಜೆಡಿಯು ಸಂಸದರು ಬೆನ್ನೆೆಲುಬಾಗಿದ್ದು, ಬಿಹಾರದಲ್ಲಿ ನಿತೀಶ್ಗೆ ಮತ್ತೊೊಮ್ಮೆೆ ಅಧಿಕಾರದ ಉಡುಗೊರೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿಿವೆ.
ಪ್ರಯಾಸಪಟ್ಟು ಗೆದ್ದ ತೇಜಸ್ವಿಿ:
ಆರ್ಜೆಡಿಯ ನಾಯಕ ತೇಜಸ್ವಿಿ ಯಾದವ್ ಅವರನ್ನು ಮುಖ್ಯಮಂತ್ರಿಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಇಂದು ಅವರೇ ತುಂಬಾ ಪ್ರಯಾಸಪಟ್ಟು ಗೆಲುವು ಸಾಧಿಸಿದ್ದಾರೆ. ಆರ್ಜೆಡಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ರಘೋಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೇಜಸ್ವಿಿ ಯಾದವ್ ಮೊದಲ ಕೆಲವು ಸುತ್ತಿಿನ ಮತ ಎಣಿಕೆಯಲ್ಲಿ ಹಿನ್ನಡೆ ಕಂಡಿದ್ದರು. ಅಂತಿಮ ಘಟ್ಟದವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಅಂತಿಮವಾಗಿ 11,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

