ಸುದ್ದಿಮೂಲ ವಾರ್ತೆ ರಾಯಚೂರು, ನ.14:
ಮುಧೋಳದಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಟ್ರ್ಯಾಾಕ್ಟರಗಳಿಗೆ ಬೆಂಕಿ ಹಚ್ಚಿಿದ್ದು ಸಕ್ಕರೆ ಕಾರ್ಖಾನೆಗಳು ನಿಯೋಜಿಸಿದ್ದ ಗೂಂಡಾಗಳು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಆರೋಪಿಸಿದರು.
ನಗರದಲ್ಲಿ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರೈತರು ಶಾಂತಿಯಿಂದ ಪ್ರತಿಭಟನೆ ಮಾಡುತ್ತಿಿದ್ದಾಾಗ ಅದನ್ನು ಹತ್ತಿಿಕ್ಕಲು ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಶಾಮೀಲಾಗಿ ರೈತರ ವಿರುದ್ಧ ಷಡ್ಯಂತರ ಮಾಡುತ್ತಿಿದೆ ಅಲ್ಲದೆ, ಮಾಲೀಕರು ತಮ್ಮ ಗೂಂಡಾಗಳನ್ನು ಕಾರ್ಖಾನೆಯ ಒಳಗೆ ಕರೆಸಿ ಅವರಿಂದಲೇ ರೈತರ ಟ್ರ್ಯಾಾಕ್ಟರ್ ಹಾಗೂ ಕಬ್ಬಿಿಗೆ ಬೆಂಕಿ ಹಚ್ಚಿಿಸಿದ್ದಾಾರೆ. ರೈತರು ತಮ್ಮ ಟ್ರ್ಯಾಾಕ್ಟರಗಳಿಗೆ ಬೆಂಕಿ ಹಚ್ಚಿಿಕೊಳ್ಳುವುದಕ್ಕೆೆ ಸಾಧ್ಯವೇ ಇಲ್ಲ ಇದೆಲ್ಲ ಕಾರ್ಖಾನೆಯವರದ್ದೆೆ ಕುತಂತ್ರ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ರೈತರಿಗೆ ನ್ಯಾಾಯೋಚಿತ ಬೆಲೆ ನೀಡುವುದಕ್ಕೆೆ ಸರ್ಕಾರ ಹಾಗೂ ಕಾರ್ಖಾನೆಗಳು ಮುಂದಾಗಬೇಕು. ಹೋರಾಟದಲ್ಲಿ ಸುಟ್ಟಿಿರುವ ರೈತರ ಟ್ರ್ಯಾಾಕ್ಟರ್ ಹಾಗೂ ಕಬ್ಬಿಿಗೆ ಪರಿಹಾರ ನೀಡದಿದ್ದರೆ ರೈತ ಸಂಘದಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆೆಯಲ್ಲಿ 5 ಲ 50 ಸಾ ಹೆಕ್ಟೆೆರ್ನಲ್ಲಿ ಹತ್ತಿಿ ಬೆಳೆಯಲಾಗಿದೆ ಕಳೆದ ವರ್ಷಕ್ಕಿಿಂತ ಈ ಸಾಲಿನಲ್ಲಿ ಇಳುವರಿ ಕಡಿಮೆ ಬಂದಿದ್ದರೂ ಹೆಚ್ಚಿಿನ ಬೆಳೆ ಇದ್ದ ಕಾರಣ ಆವಕ ಹೆಚ್ಚಿಿದೆ ಮುಕ್ತ ಮಾರುಕಟ್ಟೆೆಯಲ್ಲಿ ಕ್ವಿಿಂಟಾಲ್ಗೆ 7500 ರೂ ಇರುವುದರಿಂದ ಅಪಾರ ನಷ್ಟವಾಗಲಿದೆ. ಹತ್ತಿಿ ಖರೀದಿಸುವ ಸಂದರ್ಭದಲ್ಲಿ ಒಂದು ದರಕ್ಕೆೆ ಖರೀದಿಸಿ, ಅನ್ಲೋಡ್ ಮಾಡುವಾಗ 500 ರೂವರೆಗೆ ಕಡಿಮೆ ಮಾಡುವ ಮೂಲಕ ಮೋಸ ಮಾಡಲಾಗುತ್ತಿಿದೆ ಎಂದು ದೂರಿದರು.
ಬೆಂಬಲ ಬೆಲೆಯ ಹತ್ತಿಿ ಕೇಂದ್ರದಲ್ಲಿ ಹತ್ತಿಿ ಮಾರಾಟಕ್ಕೆೆ ನೋಂದಾಯಿಸುವಾಗ ಕೇವಲ 30 ಸೆಕೆಂಡ್ ಸ್ಲಾಾಟ್ ಅವಕಾಶ ನೀಡಲಾಗಿದೆ. ಒಬ್ಬ ರೈತನಿಗೂ ನೋಂದಾಯಿಸಿಕೊಳ್ಳಲಾಗುತ್ತಿಿಲ್ಲಘಿ. ಸರ್ಕಾರಿ ಅಧಿಕಾರಿಗಳು ಖಾಸಗಿ ಖರೀದಿದಾರರೊಂದಿಗೆ ಶಾಮೀಲಾಗಿ ರೈತರಿಗೆ ಮೋಸ ಮಾಡುತ್ತಿಿದ್ದಾಾರೆ. ಭತ್ತ ಖರೀದಿಗೂ ಕೇಂದ್ರ ತಕ್ಷಣ ಆರಂಭಿಸಬೇಕು, ಬೆಳೆ ಪರಿಹಾರ ನೀಡಬೇಕು, ಖರೀದಿಗೆ ನೋಂದಾಯಿಸಲು ಆಗುತ್ತಿಿರುವ ತೊಂದರೆಗಳನ್ನು ನ.21ರೊಳಗೆ ನಿವಾರಿಸಿ ರೈತರ ಹತ್ತಿಿ ಬೆಂಬಲ ಬೆಲೆಯಲ್ಲಿ ಖರೀದಿಸಿಸುವುದಕ್ಕೆೆ ಕ್ರಮ ಕೈಗೊಳ್ಳದೆ ಹೋದರೆ ಹೋರಾಟ ರೂಪಿಸುವುದಾಗಿ ಜಿಲ್ಲಾಾಡಳಿತಕ್ಕೆೆ ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಬೂದಯ್ಯಸ್ವಾಾಮಿ, ಪ್ರಭಾಕರ, ದೇವರಾಜ ನಾಯಕ ಇತರರಿದ್ದರು.
ಬೆಂಬಲ ಬೆಲೆಯಲ್ಲಿ ಹತ್ತಿಿ ಖರೀದಿಗೆ 21ರ ಗಡವು ಮಾಲೀಕರಿಂದಲೇ ಕಬ್ಬು ಹೊತ್ತ ಟ್ರಾಾಕ್ಟರ್ಗಳಿಗೆ ಬೆಂಕಿ-ಚಾಮರಸ ಪಾಟೀಲ

