ಸುದ್ದಿಮೂಲ ವಾರ್ತೆ ಪಾಟ್ನಾಾ, ನ.15:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಿಕೂಟ ಅಭೂತಪೂರ್ವ ಜಯ ಸಾಧಿಸಿದ್ದು, ನಿತೀಶ್ ಕುಮಾರ್ ಅವರೇ ಮತ್ತೊೊಮ್ಮೆೆ ಮುಖ್ಯಮಂತ್ರಿಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿಿತವಾಗಿದೆ.
ಜೆಡಿಯು ಮತ್ತು ಬಿಜೆಪಿ ಮೈತ್ರಿಿಮೂಟದ ಎನ್ಡಿಎ ಬಿಹಾರದ ವಿಧಾನಸಭಾ ಚುನಾವಣೆಯ 243 ಕ್ಷೇತ್ರಗಳ ಪೈಕಿ 202ರಲ್ಲಿ ಎನ್ಡಿಎ ಜಯಗಳಿಸಿದೆ. ಹಾಲಿ ಮುಖ್ಯಮಂತ್ರಿಿ ನಿತೀಶ್ಕುಮಾರ್ ಅವರೇ ಮತ್ತೆೆ ಮುಖ್ಯಮಂತ್ರಿಿಯಾಗುವ ಸಾಧ್ಯತೆಗಳಿವೆ. ಈ ಮಧ್ಯೆೆ ಕೇಂದ್ರ ಸಚಿವ ಎಲ್ಜೆಪಿ (ರಾಮ್ವಿಲಾಸ್) ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾಾನ್ ಅವರು ನಿತೀಶ್ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಿ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿಿದೆ.
2005ರಿಂದ ಬಹುತೇಕ ಬಿಹಾರದ ಮುಖ್ಯಮಂತ್ರಿಿಯಾಗಿಯೇ ಅಧಿಕಾರದಲ್ಲಿರುರವ ನಿತೀಶ್ಕುಮಾರ್ ಈ ಎರಡು ದಶಕಗಳ ರಾಜಕೀಯ ಏಳುಬೀಳುಗಳಲ್ಲಿ ಒಟ್ಟು 9 ಬಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ನಿರೀಕ್ಷೆಯಂತೆ ಎನ್ಡಿಎ ಮೈತ್ರಿಿಕೂಟ ಅವರ ಹಿರಿತನಕ್ಕೆೆ ಬೆಲೆ ನೀಡಿ ಮತ್ತೊೊಮ್ಮೆೆ ಅಧಿಕಾರದಲ್ಲಿ ಮುಂದುವರಿಸಿದಲ್ಲಿ ಇದು ನಿತೀಶ್ಕುರ್ಮಾ ಅವರ 10ನೇ ಪ್ರಮಾಣವಚನ ಆಗಲಿದೆ.
ಚಿರಾಗ್ ಪಾಸ್ವಾಾನ್ ಅವರು ಇಂದು ಪಾಟ್ನಾಾದಲ್ಲಿ ನಿತೀಶ್ ಕುರ್ಮಾ ಅವರ ನಿವಾಸಕ್ಕೆೆ ಬಂದು ಅಭಿನಂದನೆ ಸಲ್ಲಿಸಿದರು. ಇದುವರೆಗಿನ ರಾಜಕೀಯ ವೈರತ್ವವನ್ನು ಮರೆತು ಎನ್ಡಿಎ ಕೂಟದ ಸದಸ್ಯರಾಗಿ ಒಟ್ಟಾಾಗಿ ಚುನಾವಣೆ ಎದುರಿಸಿ ಗೆದ್ದು ಬೀಗಿರುವುದಕ್ಕೆೆ ಪರಸ್ಪರ ಅಭಿನಂದಿಸಿದರು. ಎಲ್ಜೆಪಿಗೆ ನೀಡಲಾಗಿದ್ದ 29 ಕ್ಷೇತ್ರಗಳ ಪೈಕಿ ಚಿರಾಗ್ ಪಾಸ್ವಾಾನ್ 19 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಯಶಸ್ವಿಿಯಾಗಿದ್ದು ಚಿರಾಗ್ ಸಾಧನೆಯನ್ನು ಎಲ್ಲೆಡೆ ಕೊಂಡಾಡಲಾಗುತ್ತಿಿದೆ.
ದಲಿತ ಸಮುದಾಯದ ಚಿರಾಗ್ ಪಾಸ್ವಾಾನ್ ಅತ್ಯಂತ ಕಿರಿಯ ವಯಸ್ಸಿಿನಲ್ಲಿಯೇ ರಾಜಕೀಯವಾಗಿ ಸಾಧಿಸಿ ತೋರಿಸಿದ್ದು, ಬಿಹಾರದಲ್ಲಿ ಅವರಿಗೆ ಉಪಮುಖ್ಯಮಂತ್ರಿಿ ಸ್ಥಾಾನ ನೀಡುವುದು ನಿಶ್ಚಿಿತ ಎಂದು ಹೇಳಲಾಗುತ್ತಿಿದೆ.
ಬಳಿಕ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಚಿರಾಗ್ ಪಾಸ್ವಾಾನ್, ಬಿಹಾರದಲ್ಲಿ ಎನ್ಡಿಎ ಮೈತ್ರಿಿಕೂಟದ ಎಲ್ಲಾ ಪಕ್ಷಗಳೂ ಅತ್ಯುತ್ತಮ ಸಾಧನೆ ಮಾಡಿದ್ದು ಪ್ರಧಾನಮಂತ್ರಿಿ ನರೇಂದ್ರ ಮೋದಿಯವರು ಎಲ್ಲರನ್ನೂ ಅಭಿನಂದಿಸಿದ್ದಾರೆ. ಬಿಹಾರದಲ್ಲಿ ನಿತೀಶ್ಕುಮಾರ್ ಅವರ ನಾಯಕತ್ವ ಮುಂದುವರಿಯುವುದು ಅಗತ್ಯವಿದೆ ಎಂದು ಸೂಚ್ಯವಾಗಿ ಹೇಳಿದರು.
ಹೊಸ ಸರ್ಕಾರವನ್ನು ಸೇರಲು ನಾನೂ ಸಹ ಎದುರು ನೋಡುತ್ತಿಿದ್ದೇನೆ. ಎಲ್ಜೆಪಿಗೆ ಬಿಹಾರದ ಜನತೆ ವಿಶ್ವಾಾಸ ಇಟ್ಟುಕೊಂಡಿದ್ದ ಆ ಜನರಿಗಾಗಿ ಸೇವೆ ಸಲ್ಲಿಸುವುದು ಅಗತ್ಯವಿದೆ ಎಂದು ಚಿರಾಗ್ ಹೇಳಿದ್ದಾರೆ.

