ಸುದ್ದಿಮೂಲ ವಾರ್ತೆ ರಾಯಚೂರು, ನ.15:
ಸಹಕಾರ ಸಂಘಗಳ ಮೂಲಕ ಗ್ರಾಾಮೀಣರ ಆರ್ಥಿಕ ಸಬಲೀಕರಣದ ಉದ್ದೇಶಕ್ಕೆೆ ಕೇಂದ್ರ ಸರ್ಕಾರ ನಬಾರ್ಡ್ ನೆರವು ಕಡಿತಗೊಳಿಸಿ ಅಸಹಕಾರ ತೋರಿಸುತ್ತಿಿರುವುದು ಬೇಸರ ಮೂಡಿಸುತ್ತಿಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕೃಷಿ ವಿಶ್ವ ವಿದ್ಯಾಾಲಯದ ಶ್ರೀ ಜಗಜ್ಯೋೋತಿ ಬಸವೇಶ್ವರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ, ಬಸವೇಶ್ವರ ಸುದ್ದಿ ಮಾಧ್ಯಮ ಸಹಕಾರ ಮಹಾಮಂಡಳ ಬೆಂಗಳೂರು, ರಾಯಚೂರು ಜಿಲ್ಲಾಾ ಸಹಕಾರಿ, ಸೌಹಾರ್ಧ ಒಕ್ಕೂಟ ಸೇರಿ ವಿವಿಧ ಸಹಕಾರಿ ಸಂಘಗಳ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ರಾಜ್ಯ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಾಹ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿಗೂ ಅಧಿಕ ಆರ್ಥಿಕ ವ್ಯವಹಾರ ನಡೆಸುತ್ತಿಿರುವ ರಾಜ್ಯದ ಸಹಕಾರಿ ಸಂಘಗಳಿಗೆ ಕೇಂದ್ರ ಸರ್ಕಾರದ ನಬಾರ್ಡ್ ಮೂಲಕ ನೀಡುವ ನೆರವಿನಲ್ಲಿ ಶೇ.58ರಷ್ಟು ಅನುದಾನ ಕಡಿತಗೊಳಿಸಿ ಸಹಕಾರಿ ಕ್ಷೇತ್ರ ದುರ್ಬಲಗೊಳಿಸುವ ಹುನ್ನಾಾರಕ್ಕೆೆ ಕೈ ಹಾಕಿದೆ. ಇದನ್ನು ಆಕ್ಷೇಪಿಸಿ ಕಡಿತಗೊಳಿಸಿದ ಅನುದಾನಕ್ಕೆೆ ಕೋರಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಲವು ಬಾರಿ ಭೇಟಿಯಾದಾಗ ಪರಿಶೀಲಿಸುವುದಾಗಿ ನೀಡಿದ ಭರವಸೆ ಈಡೇರಿಸಿಲ್ಲಘಿ, ಪತ್ರ ವ್ಯವಹಾರ ಮಾಡಿದ್ದರೂ ಸ್ಪಂದನೆ ಸಿಗುತ್ತಿಿಲ್ಲಘಿ. ಇದರಿಂದ ಸಹಕಾರಿ ಕ್ಷೇತ್ರದ ಮೂಲಕ ರೈತರ, ಸೀಯರ ಒಕ್ಕೂಟ ಮತ್ತಿಿತರರ ಅಭಿವೃದ್ದಿಗೆ ನೆರವು ನೀಡಲು ಆಗುತ್ತಿಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಹಕಾರಿ ವಲಯದ ಮೂಲಕವೇ ಅನೇಕರು ರಾಜಕಾರಣಿಗಳಾಗಿದ್ದಾಾರೆ ಅವರು ಆ ಮೂಲಕ ಸರ್ಕಾರದ ಮೂಲಕ ಕ್ಷೇತ್ರಗಳಿಗೆ ನೆರವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿಿದ್ದಾಾರೆ ಎಂದ ಅವರು ತಾವು 1975ರಿಂದಲೂ ಸಹಕಾರಿ ರಂಗದಲ್ಲಿದ್ದುಕೊಂಡು ಹಲವರ ಜೊತೆಗೆ ಮಾಡಿದ ಸೇವೆಯ ಮೆಲಕು ಹಾಕಿದರು.ಹಿಂದೆ ಯಾರ ಬಳಿ ರಸೀದಿ, ಸೀಲು ಇರುತ್ತಿಿತ್ತೊೊ ಅವರು ಹೇಳಿದವರೆ ಸಹಕಾರಿ ಬ್ಯಾಾಂಕ್ನ ನಿರ್ದೇಶಕರಾಗುವ ಕಾಲವಿತ್ತು ಈಗ ಬದಲಾಗಿದೆ ಅನೇಕ ಜನೋಪಯೋಗಿ ಕೆಲಸಗಳು ನಡೆಯುತ್ತಿಿವೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿಯವರಿಗೂ ಮೀಸಲು ಸಿಗಬೇಕೆಂಬ ಉದ್ದೇಶದ ಜೊತೆಗೆ ಹೊಸಬರಿಗೂ ಅವಕಾಶಕ್ಕಾಾಗಿ ಸಹಕಾರದ ಉದ್ದೇಶದಂತೆ ಸಮಬಾಳು, ಸಮಪಾಲು ತತ್ವಕ್ಕೆೆ ಬಲ ತುಂಬುತ್ತಿಿದ್ದಾಾರೆ.ಯಶಸ್ವಿಿನಿ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ನೆರವು, ಮಹಿಳೆಯರ ಸ್ವಾಾವಲಂಬಿಗೆ ಎಸ್ಸಿ,ಎಸ್ಟಿ ಮಹಿಳೆಯರ ವಂತಿಗೆ ಸರ್ಕಾರವೇ ಭರಿಸುವ ಯೋಚನೆ, ಗೃಹಲಕ್ಷ್ಮಿಿ ಸ್ವಸಹಾಯ ಸಹಕಾರಿ ಸ್ಥಾಾಪಿಸುವ ಉದ್ದೇಶವೂ ಸರ್ಕಾರದಲ್ಲಿದೆ ಎಂದು ಹೇಳಿದರು.
ರಾಯಚೂರು ಜಿಲ್ಲಾಾ ಕೇಂದ್ರ ಸ್ಥಾಾನದ ಜನನಿಬಿಡ ಕೇಂದ್ರೀಯ ಬಸ್ ನಿಲ್ದಾಾಣದ ಮುಂದಿನ ಸಹಕಾರಿ ಸಂಘದ ನಿವೇಶನದಲ್ಲಿ ಸಹಕಾರಿ ಭವನ ನಿರ್ಮಾಣಕ್ಕೆೆ ಪಕ್ಷಾಾತೀತವಾಗಿ ಎಲ್ಲರೂ ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಲು ಬದ್ದವಾಗಿದ್ದು ಕೈ ಜೋಡಿಸಲು ಕೋರಿದ ಅವರು, ಸರ್ಕಾರ ಕಲಬುರ್ಗಿಗೆ ಸಹಕಾರಿ ಭವನಕ್ಕೆೆ 10 ಕೋಟಿ ನೀಡಿದ್ದು ಅದೇ ಮಾದರಿ ನಮಗೂ ಕೊಡಲು ಒತ್ತಡ ಹಾಕಲು ನಮ್ಮಲ್ಲಿ ಒಗ್ಗಟ್ಟು ಮುಖ್ಯವಾಗಿದೆ ಎಂದರು.
ಜಿಲ್ಲೆೆಯ ಹೊರಗಿನಿಂದ, ಹಳ್ಳಿಿಗಳಿಂದ ಬಂದು ಮರಳಲು ಆಗದವರಿಗೆ ಉಳಿದುಕೊಳ್ಳಲು ಸುಸಜ್ಜಿಿತ ವಸತಿ ಸೌಕರ್ಯಕ್ಕೆೆ ಭವನದ ಅಗತ್ಯವಿದೆ ಈ ನಿಟ್ಟಿಿನಲ್ಲಿ ಜಿಲ್ಲೆೆಯ ಎಲ್ಲ ಸಹಕಾರಿ ಕ್ಷೇತ್ರದಲ್ಲಿದ್ದವರು ಆಲೋಚಿಸಿ ಕೈ ಜೋಡಿಸಿ ಸರ್ಕಾರದ ಬಳಿಗೆ ಹೋಗಲು ಸಿದ್ದರಾಗಿ ಎಂದು ಪುನರುಚ್ಚರಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ರಾಜ್ಯಾಧ್ಯಕ್ಷ ಜಿ.ನಂಜನಗೌಡ ಮಾತನಾಡಿ, ಸಹಕಾರಿ ಕ್ಷೇತ್ರದ ಮೂಲಕ ಮಹಿಳೆಯರ, ರೈತರ ಆರ್ಥಿಕ ಸಬಲೀಕರಣಕ್ಕೆೆ ನಿರಂತರವಾಗಿ ಯೋಜನೆಗಳ ರೂಪಿಸಿ ಸಾಲ ನೀಡುತ್ತಿಿವೆ. ಆದರೆ, ಅಂದುಕೊಂಡಷ್ಟು ಗ್ರಾಾಮೀಣ ಭಾಗಕ್ಕೆೆ ತಲುಪಲು ಇನ್ನೂ ಆಗಿಲ್ಲ ಆ ನಿಟ್ಟಿಿನಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂದರು.
ಸಹಕಾರದ ಬಲ, ಸ್ವಾಾವಲಂಬಿ, ಲೋಪಗಳ ಗುರುತಿಸಿ ಸರಿಪಡಿಸಿ ಯುವಕರ ಸೆಳೆಯುವ ಉದ್ದೇಶದಿಂದಲೆ ತ್ರಿಿಭುವನ ಸಹಕಾರಿ ವಿಶ್ವ ವಿದ್ಯಾಾಲಯ ಸ್ಥಾಾಪಿಸಿದ್ದು ಇದು ಹಿರಿಯರಿಗೆ ಮಾತ್ರ ಎನ್ನುವ ಧೋರಣೆ ಅಳಸಿ ಹೊಸಬರು, ಯುವಜನಾಂಗದ ಮೂಲಕ ಪರಿವರ್ತನೆಗೆ ಅಣಿಯಾಗಬೇಕಾಗಿದೆ ಎಂದರು.
ಕೆಲ ಸಹಕಾರಿ ಸಂಘ, ಬ್ಯಾಾಂಕ್ಗಳು ಗ್ರಾಾಹಕರ ವಿಶ್ವಾಾಸಕ್ಕೆೆ ಚ್ಯುತಿ ತರುವ ಕೆಲಸ ಮಾಡುತ್ತಿಿದ್ದು ಸರಿಯಲ್ಲಘಿ. ಇಂತವರಿಂದ ಧಕ್ಕೆೆಯಾಗುತ್ತಿಿದೆ. ನಮ್ಮನ್ನು ನಂಬಿ ಹೂಡಿಕೆ ಮಾಡಿದವರ ವಿಶ್ವಾಾಸ ಉಳಿಸಿಕೊಳ್ಳಬೇಕಾಗಿದೆ. ಈಗ ಮೋಸ, ವಂಚನೆ ಮಾಡುವುದು ಸುಲಭವಲ್ಲ ಎಂದ ಅವರು, ಕಾಯಿದೆಗಳು ಬಿಗಿಯಾಗಿವೆ, ಆರ್ಬಿಐ ನಿಯಮ ಉಲ್ಲಂಘನೆಗೆ ಪಾಠ ಕಲಿಯಬೇಕು ಎಂದು ಪ್ರತಿಪಾದಿಸಿದರು.
ಇದೇ ವೇಳೆ ರಾಜ್ಯ ಮಟ್ಟದ ಸಹಕಾರಿ ರತ್ನ ಪ್ರಶಸ್ತಿಿ ಪುರಸ್ಕೃತ ಶರಬನಗೌಡ, ಸಯ್ಯದ್ ಸೇರಿ ಜಿಲ್ಲೆೆಯ 60ಜನ ಸಾಧಕರಿಗೆ ಜಿಲ್ಲಾಾ ಮಟ್ಟದ ಸಹಕಾರಿ ರತ್ನ, ಉತ್ತಮ ಕಾರ್ಯ ನಿರ್ವಹಿಸುತ್ತಿಿರುವ ಸಹಕಾರಿ ಸಂಘ, ಬ್ಯಾಾಂಕ್ಗಳಿಗೆ ಸನ್ಮಾಾನಿಸಿ ಗೌರವಿಸಲಾಯಿತು.
ಶಾಸಕ ಹಂಪನಗೌಡ ಬಾದರ್ಲಿ ಅವರು ಸಹಕಾರ ಧ್ವಜಾರೋಹಣ ಮಾಡಿದರೆ, ವಸ್ತು ಪ್ರದರ್ಶನ ಮಾರಾಟ ಮಳಿಗೆಗಳನ್ನು ಕೆಓಎ್ ಅಧ್ಯಕ್ಷ ವೆಂಕಟರಾವ್ ನಾಡಗೌಡ ಉದ್ಘಾಾಟಿಸಿದರೆ, ಶಾಸಕ ಬಸನಗೌಡ ದದ್ದಲ್ ಸಹಕಾರಿ, ಸ್ವಾಾಭಿಮಾನ ವಾರಪತ್ರಿಿಕೆಯ ವಿಶೇಷ ಸಂಚಿಕೆಗಳ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ್, ಶರಣಗೌಡ ಬಯ್ಯಾಾಪೂರು,ಆರ್ಡಿಸಿಸಿ ಬ್ಯಾಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ ತೋರಣದಿನ್ನಿಿಘಿ, ಜಿಲ್ಲಾಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪಾಟೀಲ ಶಾವಂತಗೇರಿ, ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ದೊಡ್ಡ ಬಸವರಾಜ, ಆರ್ಎಪಿಎಂಸಿ ಅಧ್ಯಕ್ಷ ಜಯವಂತರಾವ್ ಪತಂಗೆ, ಮಹಾಮಂಡಳ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ, ಸೌಹಾರ್ಧ ಸಹಕಾರಿ ನಿರ್ದೇಶಕ ಆರ್.ತಿಮ್ಮಯ್ಯ ಶೆಟ್ಟಿಿಘಿ, ಮಹಾಂತೇಶ ಪಾಟೀಲ ಅತ್ತನೂರು, ಜಿ.ಶ್ರೀಧರ,ಮಂಜುಳಾ ಪಾಟೀಲ, ಶೈಲಜಾ ತಪಲಿ, ಸುರೇಶ ರೆಡ್ಡಿಿ ಮಾದನೂರು, ಮಲ್ಲೇಶಗೌಡ ಮಟ್ಟೂರು,ಕಲ್ಲಯ್ಯಸ್ವಾಾಮಿ, ಶರಣಗೌಡ, ಅಮರೇಶ ಪಾಟೀಲ, ಸಹಕಾರಿ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೋಡ, ಉಪನಿಬಂಧಕ ಎಂ.ಆರ್.ಮನೋಹರ, ಲೆಕ್ಕ ಪರಿಶೋಧನ ಇಲಾಖೆ ಡಿಡಿ ಬಸವರಾಜ ಕೊಂಕಲ್ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
* 72ನೇ ಅಖಿಲ ಭಾರತ ಸಹಕಾರ ಸಪ್ತಾಾಹ ಸಮಾವೇಶ * ರಾಯಚೂರಿನಲ್ಲಿ ಸಹಕಾರ ಭವನಕ್ಕೆೆ ಕೈ ಜೋಡಿಸಿ ನಬಾರ್ಡ್ ನೆರವಿಗೆ ಕೇಂದ್ರ ಕತ್ತರಿ, ಸಹಕಾರಿ ವಲಯ ದುರ್ಬಲಕ್ಕೆೆ ಹುನ್ನಾಾರ-ಬೋಸರಾಜ್

