ಸುದ್ದಿಮೂಲ ವಾರ್ತೆ ಕವಿತಾಳ, ನ.15:
ಕೇಂದ್ರ ಗೃಹ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣೆ ವಾರ್ಷಿಕ ಪ್ರಶಸ್ತಿಿಗೆ ಕವಿತಾಳ ಪೊಲೀಸ್ ಠಾಣೆ ಆಯ್ಕೆೆಯಾಗಿದೆ.
ದೇಶದ ಪ್ರತಿ ರಾಜ್ಯದಿಂದ ಮೂರು ಪೊಲೀಸ್ ಠಾಣೆಗಳನ್ನು ಆಯ್ಕೆೆ ಮಾಡಿ ಅವುಗಳಲ್ಲಿ 10 ಠಾಣೆಗಳನ್ನು ಪ್ರಶಸ್ತಿಿಗೆ ಗುರುತಿಸಲಾಗಿದ್ದು ಅವುಗಳ ಪೈಕಿ ಕವಿತಾಳ ಠಾಣೆ 3ನೇ ಸ್ಥಾಾನ ಪಡೆದಿದೆ ಕರ್ನಾಟಕ ರಾಜ್ಯದಿಂದ ಆಯ್ಕೆೆಯಾದ ಏಕೈಕ ಅತ್ಯುತ್ತಮ ಠಾಣೆ ಎನ್ನುವ ಹೆಗ್ಗಳಿಕೆ ಪಡೆದಿದೆ.
ರಾಯ್ಪುರದ ಇಂಡಿಯನ್ ಇನ್ಸ್ಟಿಿಟ್ಯೂಟ್ ಆ್ ಮ್ಯಾಾನೇಜ್ಮೆಂಟ್ನಲ್ಲಿ ನ. 28 ರಂದು ನಡೆಯಲಿರುವ ಡಿಜಿಎಸ್ಪಿ ಮತ್ತು ಐ ಜಿಎಸ್ಪಿ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿಿಯನ್ನು ವಿತರಿಸಲಿದ್ದಾರೆ ಕವಿತಾಳ ಠಾಣೆ ಪಿಎಸ್ಐ ಗುರುಚಂದ್ರ ಯಾದವ ಅವರು ಪ್ರಶಸ್ತಿಿ ಸ್ವೀಕರಿಸಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ದೂರು ವಿಭಾಗಕ್ಕೆೆ ಪ್ರತ್ಯೇಕ ಕೊಠಡಿ ವ್ಯವಸ್ಥೆೆ, ಕಡತಗಳು, ಕಸ್ಟಡಿ ಕೊಠಡಿಗಳು, ಗ್ರಂಥಾಲಯ, ಬೇರೆ ಕಡೆಯಿಂದ ಬರುವ ಪೊಲೀಸ್ ಸಿಬ್ಬಂದಿಗೆ ತಂಗಲು ಸ್ಥಳ, ದಾಖಲಾತಿಗಳ ನಿರ್ವಹಣೆ, ಕಚೇರಿ ನಿರ್ವಹಣೆ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳು, ಸಾರ್ವಜನಿಕರ ಸಮಸ್ಯೆೆಗಳಿಗೆ ಉತ್ತಮ ಸ್ಪಂದನೆ, ಸಿಬ್ಬಂದಿ ಕಾರ್ಯ ಸಂಚಾರಿ ವ್ಯವಸ್ಥೆೆ, ಅಪರಾಧ ತಡೆ, ಕಟ್ಟಡದ ಸ್ವಚ್ಛತೆ, ಮಹಿಳಾ ಅಪರಾಧ ತಡೆ, ಬಾಲ್ಯ ವಿವಾಹ ತಡೆ ಮತ್ತಿಿತರ ಅಂಶಗಳನ್ನು ಪರಿಗಣಿಸಿ ಅತ್ಯುತ್ತಮ ಠಾಣೆ ಎಂದು ವಾರ್ಷಿಕ ಪ್ರಶಸ್ತಿಿಗೆ ಆಯ್ಕೆೆ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪುಟ್ಟಮಾದಯ್ಯ, ಸಿ.ಪಿ.ಐ.ಶಶಿಕಾಂತ ಎಂ ಸಿರವಾರ, ಡಿವೈಎಸ್ಪಿ ಸಿಂಧನೂರು, ಕವಿತಾಳ ಠಾಣೆಯ ಹಿಂದಿನ ಪಿ ಎಸ್ ಐ ವೆಂಕಟೇಶ ನಾಯಕ ಮತ್ತು ಠಾಣೆಯ ಸಿಬ್ಬಂದಿಗಳ ಪರಿಶ್ರಮ, ಸಹಾಯ ಸಹಕಾರದೊಂದಿಗೆ ಈ ಪ್ರಶಸ್ತಿಿ ಲಭ್ಯವಾಗಿದೆ, ರಾಜ್ಯ, ಜಿಲ್ಲೆ ಮತ್ತು ಕವಿತಾಳ ಪಟ್ಟಣಕ್ಕೆೆ ಕೀರ್ತಿ ತರುವ ವಿಷಯವಾಗಿದೆ ಎಂದು ಪಿ.ಎಸ್.ಐ.ಗುರುಚಂದ್ರ ಯಾದವ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ವಾರ್ಷಿಕ ಪ್ರಶಸ್ತಿಿಗೆ ಆಯ್ಕೆೆಯಾದ ಏಕೈಕ ಠಾಣೆ ಕವಿತಾಳಗೆ 3 ನೇ ಅತ್ಯುತ್ತಮ ಠಾಣೆ ಗರಿ

