ಸುದ್ದಿಮೂಲ ವಾರ್ತೆ ಕಲಬುರಗಿ, ನ.15:
ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ರಾಜ್ಯ ಸರ್ಕಾರ ಎಸ್.ಡಿ.ಆರ್.ಎ್/ ಎನ್.ಡಿ.ಆರ್.ಎ್ ಮಾರ್ಗಸೂಚಿಯನ್ವಯ ಜಿಲ್ಲೆಯ 3.26 ಲಕ್ಷ ರೈತರಿಗೆ 250.97 ಕೋಟಿ ರೂ. ಪರಿಹಾರ ಮಂಜೂರಾತಿ ನೀಡಿದೆ ಎಂದು ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಆಗಸ್ಟ್ ಮತ್ತು ಸೆಪ್ಟೆೆಂಬರ್ ಮಾಹೆಯಲ್ಲಿ ಅಪಾರ ಪ್ರಮಾಣದಲ್ಲಿ ಬಿದ್ದ ಮಳೆಯಿಂದ 3.24 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ, ತೋಟಗಾರಿಕೆ ಪ್ರದೇಶ ಹಾನಿಯಾಗಿದ್ದಕ್ಕೆೆ ಪರಿಹಾರ ಬಿಡುಗಡೆಗೆ ಪ್ರಸ್ತಾಾವನೆ ಸಲ್ಲಿಸಲಾಗಿತ್ತು.
ಇದೀಗ ಸರ್ಕಾರ ಪರಿಹಾರ ತಂತ್ರಂಶದಲ್ಲಿ ಅರ್ಹ ರೈತರ ಹಾಗೂ ಹಾನಿ ಪ್ರದೇಶದ ದತ್ತಾಾಂಶದನ್ವಯ ಮೊದಲನೆ ಹಂತದಲ್ಲಿ ಎಸ್ಡಿಆರ್ಎ್/ಎನ್ ಡಿ ಆರ್ ಎ್ ಮಾರ್ಗಸೂಚಿಯನ್ವಯ ಜಿಲ್ಲೆಯ 3,26,183 ಲಾನುಭವಿ ರೈತರಿಗೆ ಒಟ್ಟು 250.97 ಕೋಟಿ ರೂ. ಹಣ ಮಂಜೂರಾತಿ ನೀಡಲಾಗಿದ್ದು, ಇನ್ ಪುಟ್ ಸಬ್ಸಿಿಡಿ ನೇರವಾಗಿ ಆಧಾರ ಸಂಖ್ಯೆೆಗೆ ಜೋಡಣೆ ಹೊಂದಿರುವ ಸಂಬಂದಪಟ್ಟ ರೈತರ ಬ್ಯಾಾಂಕ್ ಖಾತೆಗಳಿಗೆ ಮುಂದಿನ 3-4 ದಿನಗಳಲ್ಲಿ ಪರಿಹಾರ ಹಣ ಜಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

