ಸುದ್ದಿಮೂಲ ವಾರ್ತೆ ರಾಯಚೂರು, ನ.15:
ನಾಗರಿಕರ ಸಹಭಾಗಿತ್ವ, ಸರ್ಕಾರಿ ಯಂತ್ರಾಾಂಗದ ಸಾಂಘಿಕ ಬದ್ದತೆಯ ಪ್ರಯತ್ನದಿಂದ ದೇವದಾಸಿ ಪದ್ಧತಿ ಬೇರು ಸಮೇತ ಕಿತ್ತೊೊಗೆಯಬಹುದಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಾಯಾಲಯದ ಮುಖ್ಯ ನ್ಯಾಾಯಮೂರ್ತಿಗಳಾದ ವಿಭು ಬಖ್ರು ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಹಾಗೂ ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಾಶ್ರಯದಲ್ಲಿ ನಡೆದ ದೇವದಾಸಿ ಪದ್ದತಿ ನಿಷೇಧ, ಪರಿಹಾರ, ತಡೆಗಟ್ಟುವಿಕೆ ಕುರಿತ ಕಾನೂನು ಸಾಕ್ಷರತಾ ಶಿಬಿರ ಮತ್ತು ಬೃಹತ್ ಆರೋಗ್ಯ ಶಿಬಿರ ಉದ್ಘಾಾಟಿಸಿ ಮಾತನಾಡಿದರು.
ಕರ್ನಾಟಕ ದೇವದಾಸಿ ಪದ್ಧತಿ ನಿರ್ಮೂಲನಾ ಕಾಯ್ದೆೆ-2025 ದೇವದಾಸಿ ಮಕ್ಕಳ ಪಿತೃತ್ವದ ಹಕ್ಕು, ಸಮಗ್ರ ಪುನರ್ವಸತಿ, ಆರೋಗ್ಯ, ಶಿಕ್ಷಣ ಮತ್ತು ಉದ್ಯೋೋಗಾವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಬಗ್ಗೆೆ ಗಮನ ಹರಿಸಬೇಕು. ಮಾಜಿ ದೇವದಾಸಿಯರ ಕುಟುಂಬದವರಿಗೆ ವಸತಿ, ಜಮೀನು, ಉದ್ಯೋೋಗದಂತಹ ಮೂಲಭೂತ ಸೌಕರ್ಯ ಕಲ್ಪಿಿಸಲು ಒತ್ತು ನೀಡಿ ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಿಸುವತ್ತ ಕಾರ್ಯಾಂಗದಲ್ಲಿರುವವರು ಗಮನ ಹರಿಸಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ, ಈಗಾಗಲೇ ಮಾಜಿ ದೇವದಾಸಿಯರ ಸ್ಥಿಿತಿಗತಿ ಅರಿಯಲು ಸಮೀಕ್ಷೆ ನಡೆದಿರುವುದು ಉತ್ತಮ ಜಿಲ್ಲೆೆಯಲ್ಲಿ ಸಾವಿರಾರು ಸಂಖ್ಯೆೆಯಲ್ಲಿರುವ ಕುಟುಂಬಗಳ ಈಗಿನ ಪರಿಸ್ಥಿಿತಿಯ ಬಗ್ಗೆೆ ಅಧ್ಯಯನ ನಡೆದು ಅವರ ಮಕ್ಕಳಿಗೆ ಶಿಕ್ಷಣ ಮತ್ತು ಕುಟುಂಬಗಳಿಗೆ ಆರ್ಥಿಕ ಶಕ್ತಿಿ ತುಂಬುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಉಚ್ಛ ನ್ಯಾಾಯಾಲಯ ಹಾಗೂ ರಾಯಚೂರು ಆಡಳಿತಾತ್ಮಕ ನ್ಯಾಾಯಮೂರ್ತಿ ಎಂ.ಜಿ. ಶುಕುರೆ ಕಮಲ್ ಮಾತನಾಡಿ, ಈ ಸಮಾಜಕ್ಕೆೆ ಕಸದಂತಾಗಿರುವ, ಅಮಾನವೀಯ ದೇವದಾಸಿ ಪದ್ಧತಿ ಬೇರಿನಿಂದ ಕಿತ್ತೊೊಗೆಯುವ ಸಂಕಲ್ಪದೊಂದಿಗೆ ಸರ್ಕಾರ ಮಸೂದೆಯೊಂದನ್ನು ತಂದಿದೆ. ಇದು ಕಾರ್ಯರೂಪಕ್ಕೆೆ ಬರಬೇಕು. ಜನ ಸಹಕರಿಸಬೇಕು. ದೇವದಾಸಿಯರು ಪ್ರಶ್ನೆೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷೆೆಘಿ, ನ್ಯಾಾಯಮೂರ್ತಿಗಳಾದ ಅನು ಶಿವರಾಮನ್ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿನ ದೇವದಾಸಿ ಮುಕ್ತರಿಗೆ ನ್ಯಾಾಯ ಸಿಗಬೇಕು. ಕಾರ್ಯಯೋಜನೆ ಕಾರ್ಯಗತಗೊಳಿಸುವ ಶಕ್ತಿಿ ರಾಯಚೂರ ಜಿಲ್ಲೆಯ ಕಾನೂನು ಸೇವೆಗಳ ಪ್ರಾಾಧಿಕಾರಕ್ಕೆೆ ಇದೆ. ಪ್ರಾಾಧಿಕಾರ ಮತ್ತು ಜಿಲ್ಲಾಡಳಿತ ಉತ್ತಮ ಕಾರ್ಯಕ್ರಮ ಸಂಘಟಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ಮೋಕ್ಷಮ್ಮ ಮಾತನಾಡಿ, ದೇವಾಲಯಗಳಲ್ಲಿ ದೇವರ ಸೇವೆ ಮಾಡುವ ಕಾರ್ಯಕ್ಕೆೆ ದೇವದಾಸಿ ಪದ್ಧತಿ ಎಂದು ಕರೆದರು. ಆ ದೇವದಾಸಿಯರನ್ನು ಲೈಂಗಿಕತೆಗೆ ಬಳಸಿಕೊಳ್ಳುವ ಪರಂಪರೆ ಮುಂದುವರೆಯಿತು. ಇದು ಹಳ್ಳಿಿಹಳ್ಳಿಿಗೂ ವ್ಯಾಾಪಿಸಿತ್ತುಘಿ. ಈ ಪದ್ಧತಿ ತೊಲಗಿಸಲು ನಾವು ಅವರನ್ನು ಸಂಘಟಿತರನ್ನಾಾಗಿ ಮಾಡಿದೆವು. ಅವರಿಗೆ ಮನೆ, ಜಮೀನು, ಮಾಶಾಸನದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿಿದ್ದೇವೆ ಎಂದರು. ಯಾರು ಸಹ ದೇವದಾಸಿಯರು ಆಗದಂತೆ ನಾವು ನೀವೆಲ್ಲರೂ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಆರಂಭಕ್ಕೂ ಮುನ್ನ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆೆ ಶ್ರದ್ಧಾಾಂಜಲಿ ಸಲ್ಲಿಸಲಾಯಿತು. ವಿವಿಧ ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಕುಂಭ ಸ್ವಾಾಗತ : ನ್ಯಾಾಯಮೂರ್ತಿಗಳಾದ ವಿಭು ಬಖ್ರು ಸೇರಿದಂತೆ ನ್ಯಾಾಯಮೂರ್ತಿಗಳನ್ನು ಡೊಳ್ಳುಕುಣಿತ ಹಾಗೂ ಮಹಿಳೆಯರ ಪೂರ್ಣ ುಂಭದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಾಗತಿಸಿದ್ದು ಗಮನ ಸೆಳೆಯಿತು.
ಮಳಿಗೆಗಳ ಉದ್ಘಾಾಟನೆ, ಮೆಚ್ಚುಗೆ :
ಜಿಲ್ಲಾ ಕಾನೂನು ಸೇವೆಗಳ ಪ್ರಾಾಧಿಕಾರ, ವಿಮುಕ್ತಿಿ ದೇವದಾಸಿ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಕೃಷಿ- ತೋಟಗಾರಿಕಾ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆ, ಆರೋಗ್ಯ ಇಲಾಖೆ ಸೇರಿ ವಿವಿಧ ಯೋಜನೆಗಳ ಮಾಹಿತಿ ನೀಡು ಮಳಿಗೆಗಳು, ಯೋಜನೆಗಳ ಕರಪತ್ರ ವಿತರಿಸಿ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆೆ ಅರಿವು ಮೂಡಿಸಲಾಯಿತು.
ಆದೇಶ ಪತ್ರ ವಿತರಣೆ : ಜಿಲ್ಲಾ ಪಂಚಾಯತ್ನಿಂದ ಮನೆ ಮಂಜೂರಾತಿ ಆದೇಶ ಪತ್ರವನ್ನು ಹುಲಿಗೆಮ್ಮ ಮತ್ತು ಯಲ್ಲಮ್ಮ ಅವರಿಗೆ ನ್ಯಾಾಯಮೂರ್ತಿಗಳು ವಿತರಿಸಿದರು. ದೇವದಾಸಿ ಮುಕ್ತ ಎಂದು ಸರೋಜಮ್ಮ, ನರಸಮ್ಮ ರಾಮವ್ವ ಅವರಿಗೆ ದೃಢೀಕರಣ ಪತ್ರ ನೀಡಲಾಯಿತು. ರಾಮಮ್ಮ ಮತ್ತು ಬಸಮ್ಮ ಅವರಿಗೆ ಆದಾಯೋತ್ಪನ್ನ ಚಟುವಟಿಕೆಯ ಮತ್ತು ಲಕ್ಷ್ಮಿಿ ಮತ್ತು ಕೃಷ್ಣದೇವಿ ಅವರಿಗೆ ಕಾರ್ಮಿಕ ಇಲಾಖೆಯ ಆದೇಶದ ಪ್ರತಿ ವಿತರಿಸಲಾಯಿತು.
ಆರೋಗ್ಯ ತಪಾಸಣೆ:
ವಿಶೇಷವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯಿಂದ ಐದಾರು ಮಳಿಗೆಗಳ ಅಳವಡಿಸಿ ಮಾಜಿ ದೇವದಾಸಿ ಮಹಿಳೆಯರಿಗೆ ಕಣ್ಣು, ರಕ್ತದೊತ್ತಡ, ಮಧುಮೇಹ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಲಾಯಿತು. ಔಷಧಿ ವಿತರಣೆಗೆ ವ್ಯವಸ್ಥೆೆ ಮಾಡಲಾಗಿತ್ತು.
ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಾಯಾದೀಶರಾದ ಮಾರುತಿ ಬಾಗಡೆ ಸ್ವಾಾಗತಿಸಿದರು. ಜಿಲ್ಲಾಧಿಕಾರಿ ನಿತೀಶ್ ಕೆ., ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಾಧಿಕಾರ ಸದಸ್ಯ ಕಾರ್ಯದರ್ಶಿ ಹೆಚ್.ಶಶಿಧರ ಶೆಟ್ಟಿಿ, ಎಸ್ಪಿ ಎಂ.ಪುಟ್ಟಮಾದಯ್ಯ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಎಡಿಸಿ ಶಿವಾನಂದ, ಉಪ ಕಾರ್ಯದರ್ಶಿ ಶ್ರೀಧರ ಎಂ ಅವರು ಉಪಸ್ಥಿಿತರಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇೇಣಿ ದಿವಾನಿ ನ್ಯಾಾಯಾೀಶರಾದ ಹೆಚ್.ಎ.ಸಾತ್ವಿಿಕ್ ವಂದಿಸಿದರು.
ಕಾನೂನು ಸಾಕ್ಷರತೆ-ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಸಹಭಾಗಿತ್ವಘಿ ಬದ್ದತೆಯ ಕಾರ್ಯದಿಂದ ದೇವದಾಸಿ ಪದ್ದತಿ ಸಂಪೂರ್ಣ ನಿರ್ಮೂಲನೆ ಸಾಧ್ಯ-ನ್ಯಾಾಘಿ.ವಿಭು ಬಖ್ರು

