ಸುದ್ದಿಮೂಲ ವಾರ್ತೆ ನವದೆಹಲಿ, ನ.15:
ಸಿದ್ದರಾಮಯ್ಯ ಮುಖ್ಯಮಂತ್ರಿಿಯಾಗಿ ಎರಡೂವರೆ ವರ್ಷ ಆಗುತ್ತಿಿರುವ ಹೊತ್ತಿಿನಲ್ಲಿಯೇ ಸಂಪುಟ ಪುನಾರಚನೆಗೆ ಕಾಂಗ್ರೆೆಸ್ ಹೈಕಮಾಂಡ್ನಿಂದ ಹಸಿರು ನಿಶಾನೆ ದೊರೆತಿದೆ. ಈ ಹಿನ್ನೆೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಮತ್ತೆೆ ಗರಿಗೆದರಿದೆ.
ಖ್ಯಾಾತ ವಕೀಲ, ಕಾಂಗ್ರೆೆಸ್ ನಾಯಕ ಕಪಿಲ್ ಸಿಬಲ್ ಅವರ ಕೃತಿ ಬಿಡುಗಡೆ ಸಮಾರಂಭಕ್ಕಾಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಶನಿವಾರ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಬಿಹಾರ ಚುನಾವಣೆಯ ಸೋಲಿನ ಹಿನ್ನೆೆಲೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ಗಾಾಂಧಿ ಅವರು ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಹಿರಿಯ ನಾಯಕರ ಸಮ್ಮುಖದಲ್ಲಿ ಹಾಜರಿದ್ದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ ಸಂಪುಟ ಪುನಾರಚನೆಯ ಪ್ರಸ್ತಾಾಪ ಮಾಡಿದ್ದಾರೆ. ಈ ವೇಳೆ ರಾಹುಲ್ಗಾಂಧಿ ಅವರು ಕರ್ನಾಟಕದಲ್ಲಿ ಸಂಪುಟ ವಿಸ್ತರಣೆಗೆ ಸಮ್ಮತಿ ಸೂಚಿಸಿದ್ದಲ್ಲದೆ, ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೊೊಮ್ಮೆೆ ಪ್ರತ್ಯೇಕವಾಗಿ ಭೇಟಿ ಮಾಡಿ ಪಟ್ಟಿಿಯ ಬಗ್ಗೆೆ ಚರ್ಚಿಸುವಂತೆ ಸೂಚೆನ ನೀಡಿದ್ದಾರೆ ಎನ್ನಲಾಗಿದೆ.
ಹೀಗೆ ಹೈಕಮಾಂಡ್ನಿಂದ ಗ್ರೀೀನ್ ಸಿಗ್ನಲ್ ದೊರೆತ ಬೆನ್ನಲ್ಲಿಯೇ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕರ್ನಾಟಕದ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಸಿಎಂ ಸಿದ್ದರಾಮಯ್ಯ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಸಂಪುಟ ಪುನಾರಚನೆ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆೆ ಸಚಿವಾಕಾಂಕ್ಷಿಗಳು ದೆಹಲಿ ಸುತ್ತಾಾಟ ಆರಂಭಿಸಿದ್ದಾರೆ. ಇದೇ ದಿನ ದೆಹಲಿಯಲ್ಲಿ ಹಾಜರಿದ್ದ ಬಿ.ಕೆ. ಹರಿಪ್ರಸಾದ್ ಸೇರಿ ಹಿರಿಯ ನಾಯಕರುಗಳು ಸಚಿವರಾಗಲು ಉತ್ಸುಕರಾಗಿದ್ದು, ದೆಹಲಿ ಮಟ್ಟದಲ್ಲಿ ಲಾಭಿ ಪ್ರಾಾರಂಭಿಸಿದ್ದಾರೆ.
ಸಿದ್ದರಾಮಯ್ಯ ಸ್ಥಾಾನ ಗಟ್ಟಿಿ:
ಈ ಮಧ್ಯೆೆ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಿಯಾಗಿ ಇದೇ ನ.20ಕ್ಕೆೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿಿದೆ. ಅಧಿಕಾರ ಹಂಚಿಕೆಯ ಸೂತ್ರದ ಪ್ರಕಾರ ಸಿದ್ದರಾಮಯ್ಯ ಸಿಎಂ ಸ್ಥಾಾನ ತ್ಯಜಿಸಬೇಕು ಎಂದು ಡಿ.ಕೆ. ಶಿವಕುರ್ಮಾ ಬೆಂಬಲಿಗ ಶಾಸಕರು ಥರಾವರಿ ಹೇಳಿಕೆಗಳನ್ನು ನೀಡಿದ್ದರು. ಆದ್ದರಿಂದ ಎರಡೂವರೆ ವರ್ಷದ ಬಳಿಕ ಸಿಎಂ ಸ್ಥಾಾನದ ಬದಲಾವಣೆಯ ಚರ್ಚೆಯೂ ಗಂಭೀರವಾಗಿ ನಡೆಯುತ್ತಿಿತ್ತು.
ಆದರೆ, ಇಂದು ರಾಹುಲ್ಗಾಂಧಿ ಅವರೇ ಸಿದ್ದರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಹಸಿರು ನಿಶಾನೆ ತೋರಿರುವುದರಿಂದ ಸಿಎಂ ಸ್ಥಾಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದರ ಸೂಚಕವಾಗಿದೆ. ಸಿದ್ದರಾಮಯ್ಯ ಅವರು ಈಗ ಮತ್ತಷ್ಟು ಆತ್ಮಸ್ಥೈರ್ಯದೊಂದಿಗೆ ಆಡಳಿತಕ್ಕೆೆ ಚುರುಕು ನೀಡುವ ಜೊತೆಗೆ ಸಂಪುಟದಲ್ಲಿಯೂ ಬದಲಾವಣೆ ಮಾಡಲು ಉತ್ಸುಕರಾಗಿದ್ದಂತೆ ಕಂಡುಬಂತು.
ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸಂಪುಟ ವಿಸ್ತರಣೆಗೆ ಅನುಮತಿ ನೀಡಿರುವ ಚರ್ಚೆಯನ್ನು ಅಲ್ಲಗಳೆದಿರುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು, ನಾನು ರಾಹುಲ್ ಗಾಂಧಿಯವರ ಜೊತೆ ಸಚಿವ ಸಂಪುಟದ ಬಗ್ಗೆೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ನವದೆಹಲಿಯಲ್ಲಿ ಹೇಳಿದರು.
ಬಿಹಾರ ಚುನಾವಣಾ ಲಿತಾಂಶದಿಂದ ರಾಹುಲ್ ಗಾಂಧಿ ಬೇಸರಗೊಂಡಿದ್ದರು. ಹೀಗಾಗಿ, ನಾವು ನಿಮ್ಮ ಜೊತೆ ಇದ್ದೇವೆ ಎಂದು ರಾಹುಲ್ ಗಾಂಧಿಗೆ ಧೈರ್ಯ ತುಂಬಿ ಬಂದಿದ್ದೇನೆ ಎಂದು ಹೇಳಿದರು.
ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಸಮಯ ನಿಗದಿಯಾಗಿದೆ. ನಾನು ಮೋದಿಯವರನ್ನು ಭೇಟಿಯಾಗುತ್ತೇನೆ. ಈ ವೇಳೆ ಕಬ್ಬು ಬೆಳೆಗಾರರ ಸಮಸ್ಯೆೆ ಮತ್ತು ರಾಜ್ಯದ ಇತರೆ ವಿಷಯಗಳ ಕುರಿತು ಪ್ರಧಾನಿಯವರೊಂದಿಗೆ ಚರ್ಚಿಸಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.
ರಾಹುಲ್ ಭೇಟಿಗೆ ಡಿಕೆಶಿ ಪ್ರಯತ್ನಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರೂ ಸಹ ಇಂದು ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಾಗಿ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಅವರೂ ಸಹ ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಅಲ್ಲದೆ, ಸಂಪುಟ ಪುನಾರಚನೆ ಸೂಚನೆ ಹಿನ್ನೆೆಲೆಯಲ್ಲಿ ಭಾನುವಾರವೂ ಒಂದು ದಿನ ನವದೆಹಲಿಯಲ್ಲಿಯೇ ಉಳಿದುಕೊಂಡು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಪ್ರಯತ್ನದಲ್ಲಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಗೆ ಹೈಕಮಾಂಡ್ ನಾಯಕರು ಗ್ರೀೀನ್ ಸಿಗ್ನಲ್ ನೀಡಿರುವ ಬಗ್ಗೆೆ ನನಗೆ ಮಾಹಿತಿ ಇಲ್ಲ. ಒಂದು ವೇಳೆ ಹಾಗೆ ಒಪ್ಪಿಿಗೆ ಸೂಚಿಸಿದ್ದರೆ ನನ್ನ ಅಭಿಪ್ರಾಾಯವನ್ನೂ ಕೇಳುತ್ತಾಾರೆ. ನಾಳೆ ಈ ಬಗ್ಗೆೆ ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಲು ಪ್ರಯತ್ನಿಿಸಲಾಗುವುದು ಎಂದು ಹೇಳಿದರು.

