ಸುದ್ದಿಮೂಲ ವಾರ್ತೆ ಬೀದರ್: ನ.16:
ಕಬ್ಬಿಿನ ಬೆಂಬಲ ಬೆಲೆ ಹೆಚ್ಚಳಕ್ಕಾಾಗಿ ಬೀದರ ನಗರದಲ್ಲಿ ನಡೆಯುತ್ತಿಿರುವ ಅಹೋರಾತ್ರಿಿ ಧರಣಿಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಪಾಲ್ಗೊೊಂಡು ರೈತರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಭಾನುವಾರ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಕಬ್ಬಿಿಗೆ ಸೂಕ್ತ ಬೆಲೆಗಾಗಿ ರೈತರು ನಡೆಸುತ್ತಿಿರುವ ಅಹೋರಾತ್ರಿಿ ಧರಣಿ ಸ್ಥಳಕ್ಕೆೆ ಭೇಟಿ ನೀಡಿ ಮಾತನಾಡಿದರು.
ರೈತರ ಹೋರಾಟ ನ್ಯಾಾಯ ಸಮ್ಮತ ಮತ್ತು ಭಾವನಾತ್ಮಕ ಬೇಡಿಕೆಯಾಗಿದೆ.
ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಿಗೆ ರೂ.3300 ನಿಗದಿ ಮಾಡಿದೆ. ಆದರೆ ನಮ್ಮ ಜಿಲ್ಲೆಯ ರೈತರು ತಮ್ಮ ಹೃದಯ ವೈಶಾಲ್ಯತೆ ತೋರಿಸಿ ರೂ.3100 ಕ್ಕೆೆ ಮಾತ್ರ ಬೇಡಿಕೆ ಇಟ್ಟಿಿದ್ದಾರೆ. ಈ ಬೇಡಿಕೆಗೆ ಸ್ಪಂದಿಸದಿರುವ ಜಿಲ್ಲಾ ಉಸ್ತುವಾರಿ ಮಂತ್ರಿಿಗಳು, ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಇದು ಒಳ್ಳೆೆಯದಾಗುವುದಿಲ್ಲ. ರೈತರ ಕಳಕಳಿ ಶಾಪ ತಟ್ಟುತ್ತದೆ, ಎಂದು ಖೂಬಾ ತೀವ್ರ ಆಕ್ರೋೋಶ ವ್ಯಕ್ತಪಡಿಸಿದರು.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಡೆಯುತ್ತಿಿರುವ ಹೋರಾಟಗಳಿಗೆ ಅಲ್ಲಿನ ಸಚಿವರು ಭೇಟಿ ನೀಡಿದರೂ, ಬೀದರ ಜಿಲ್ಲೆಯ ಇಬ್ಬರು ಸಚಿವರು ರೈತರತ್ತ ಗಮನ ಹರಿಸದೆ ಇರುವುದನ್ನು ಅವರು ತೀಕ್ಷ್ಣವಾಗಿ ಟೀಕಿಸಿದರು.
ಡಿ.ಸಿ.ಸಿ. ಬ್ಯಾಾಂಕ್ ಹಾಗೂ ಎನ್.ಎಸ್.ಎಸ್.ಕೆ ನಿರ್ವಹಣೆ ಕುರಿತಾಗಿಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಖುಬಾ,
ಬಿ.ಎಸ್.ಎಸ್.ಕೆ ಯ ಜಮೀನು ಡಿ.ಸಿ.ಸಿ. ಬ್ಯಾಾಂಕ್ ಕಬಳಿಸಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಡಿ.ಸಿ.ಸಿ. ಬ್ಯಾಾಂಕ್ ಅಧ್ಯಕ್ಷರು ರೈತರಿಗೆ ಸಾಲ ನೀಡುವ ಬದಲು ಬಡ್ಡಿಿ ವಸೂಲಿ ಮಾಡುವವರಂತೆ ವರ್ತಿಸುತ್ತಿಿದ್ದಾರೆ ಎಂದು ಅವರು ಆರೋಪಿಸಿದರು. ಈಶ್ವರ ಖಂಡ್ರೆೆ ತಮ್ಮ ತಮ್ಮನಿಗೆ ಬುದ್ದಿ ಹೇಳಬೇಕು. ರೈತರ ಮೇಲೆ ಆಟವಾಡುವುದನ್ನು ನಿಲ್ಲಿಸಬೇಕು, ಎಂದು ಖೂಬಾ ಒತ್ತಾಾಯಿಸಿದರು.
ಜಿಲ್ಲೆಯ ಬಿಜೆಪಿಯ ನಾಲ್ಕು ಶಾಸಕರು, ರೈತರ ಬೇಡಿಕೆ, ಡಿ.ಸಿ.ಸಿ. ಬ್ಯಾಾಂಕ್ನ ಅನ್ಯಾಾಯಗಳು ಮತ್ತು ಬಿ.ಎಸ್.ಎಸ್.ಕೆ ವಿಚಾರವನ್ನು ವಿಧಾನಸಭೆಯಲ್ಲಿ ಎತ್ತಿಿ ಹಿಡಿಯಬೇಕು ಎಂದು ಖೂಬಾ ಒತ್ತಾಾಯಿಸಿದರು.
ಧರಣಿಯಲ್ಲಿ ಬೀದರ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಾಳೆ, ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಾಮಿ, ಸಿದ್ರಾಾಮಪ್ಪಾಾ ಆಣದೂರೆ, ಶ್ರೀಮಂತ ಬಿರಾದಾರ, ಪ್ರಕಾಶ ಬಾವುಗೆ, ಶಾಂತಮ್ಮ ಮೂಲಗೆ, ಶಿವಲೀಲಾ ಹೋಳಸಮುದ್ರ, ವಿಜಯಕುಮಾರ ಬಾವುಗೆ, ವೀರಾರೆಡ್ಡಿಿ, ವಿಠಲ್ ರಾವ, ನಾಗಶೆಟ್ಟಿಿ, ಭೀಮರಾವ, ಖಮರ ಪಟೇಲ್ ಸೇರಿದಂತೆ ಅನೇಕ ರೈತ ನಾಯಕರು ಉಪಸ್ಥಿಿತರಿದ್ದರು.
ಬಾಕ್ಸ್
ಜಿಲ್ಲೆಯ ಬಿಜೆಪಿಯ ನಾಲ್ವರು ಶಾಸಕರು, ರೈತರ ಬೇಡಿಕೆ, ಡಿ.ಸಿ.ಸಿ. ಬ್ಯಾಾಂಕ್ನ ಅನ್ಯಾಾಯಗಳು ಮತ್ತು ಬಿ.ಎಸ್.ಎಸ್.ಕೆ ಕಾರ್ಖಾನೆ ಆರಂಭಿಸದಿರುವ ವಿಚಾರವನ್ನು ವಿಧಾನಸಭೆಯಲ್ಲಿ ಎತ್ತಿಿ ಹಿಡಿಯಬೇಕು.
-ಭಗವಂತ ಖುಬಾ, ಮಾಜಿ ಕೇಂದ್ರ ಸಚಿವ.
ಬಾಕ್ಸ್
3200 ರೂ ಕೊಡಿ : ಬೆಲ್ದಾಾಳೆ
ಜಿಲ್ಲಾದ್ಯಂತ ಅತಿವೃಷ್ಟಿಿಯಿಂದ ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಅಗಿಲ್ಲ. ಇದೀಗ ರೈತರಿಗೆ ಆಸರೆಯಾಗಿ ಉಳಿದಿರುವುದು ಕಬ್ಬೊೊಂದೇ. ಹಾಗಾಗಿ ಟನ್ ಕಬ್ಬಿಿಗೆ 3200 ರೂ. ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಾಳೆ ಒತ್ತಾಾಯಿಸಿದ್ದಾರೆ.
ಬೀದರ್ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗದಲ್ಲಿ ರೈತ ಸಂಘಗಳ ಒಕ್ಕೂಟ ವತಿಯಿಂದ ಜಿಲ್ಲೆಯಲ್ಲಿ ಕಬ್ಬು ಬೆಳೆದ ರೈತರಿಗೆ ಪ್ರತಿ ಟನ್ ಕಬ್ಬಿಿಗೆ ರೂ. 3, 200 ದರ ನಿಗದಿ ಮಾಡಬೇಕು ಎಂದು ನಡೆಯುತ್ತಿಿರುವ ಅಹೋರಾತ್ರಿಿ ಧರಣಿಯಲ್ಲಿ ಪಾಲ್ಗೊೊಂಡು ಮಾತನಾಡಿದರು.
ರೈತರ ಬೇಡಿಕೆ ನ್ಯಾಾಯಯುತವಾಗಿದ್ದು, ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು ಎಂದರು.
ರೈತರ ಹೋರಾಟಕ್ಕೆೆ ಬೆಂಬಲ- ಭಗವಂತ ಖೂಬಾ

