ಸುರೇಶ ಹೀರಾ ಸಿರವಾರ: ನ.16:
ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಜೆ ಅಥವಾ ಬೆಳಗಿನ ಜಾವ ವಾಕಿಂಗ್ ಮಾಡಲು, ಮಕ್ಕಳಿಗೆ ಆಟವಾಡಲು ಅನುಕೂಲಕ್ಕೆೆ ಮಾಡಿದ ಸಾರ್ವಜನಿಕರ ಉದ್ಯಾಾನವನ ಮರಗಳು ಇಲ್ಲದೆ ಸೊರಗಿ ಹಾಳಾಗುತ್ತಿಿದೆ.
ಸ್ಥಳೀಯ ಪಟ್ಟಣ ಪಂಚಾಯತಿಯ ಹೊಸ ಕಟ್ಟಡದ ಪಕ್ಕದಲ್ಲಿ, 1.5 ಎಕರೆಯಲ್ಲಿ, ನಾಗರಿಕರ ಸೌಲಭ್ಯ ಸ್ಥಳದಲ್ಲಿ ಪ.ಪಂ. ವತಿಯಿಂದ 2022-24ನೇ ಸಾಲಿನಲ್ಲಿ 10ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಾಾನವನ ಅಭಿವೃದ್ಧಿಿಗೆ ಹಣ ಖರ್ಚು ಮಾಡಲಾಗಿದೆ.
ಪ್ರಶಾಂತವಾದ ವಾತಾವರಣ ಪ್ರಕೃತಿ ಒದಗಿಸಿಕೊಟ್ಟಿಿದೆ. ಆದರೆ, ಪಟ್ಟಣ ಜನರಿಗೆ ಹಾಗೂ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಉಪಯೋಗಕ್ಕೆೆ ಬಾರದಂತೆ ಆಗಿದೆ.
ಈ ಉದ್ಯಾಾನವನದಲ್ಲಿ ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರು ಬಂಡೆ ಸೇರಿದಂತೆ ಹಲವಾರು ವಸ್ತುಗಳು, ಹಿರಿಯರಿಗೆ ವಿಶ್ರಾಾಂತಿಗೆ ಸಿಮೆಂಟ್ ಆಸನಗಳು ವ್ಯವಸ್ಥೆೆ ಮಾಡಿದೆ, ವಾಕಿಂಗ್ ಮಾಡಲು ಪಾದಚಾರಿ ರಸ್ತೆೆಯ ನಿರ್ಮಾಣ ಕಾರ್ಯ ಮಾಡಿದೆ, 5ಲಕ್ಷ ರೂಪಾಯಿ ವೆಚ್ಚದಲ್ಲಿ ಹೈ ಮಾಸ್ಟ್ ದೀಪದ ವ್ಯವಸ್ಥೆೆ ಮಾಡಿ, ನೆರಳು ನೀಡುವ ಮರಗಳು ಒಂದೂ ಇಲ್ಲ, ನೀರಿನ ವ್ಯವಸ್ಥೆೆ ಇಲ್ಲ, ಕಸದ ರಾಶಿ, ಮುಳ್ಳು ಮರಗಳು ತುಂಬಿದೆ, ವಿಷಕಾರಿ ಜೀವಿಗಳ ಭಯವಿದೆ, ನಾಗರಿಕರು, ಮಕ್ಕಳು ಹೋಗಿ ಬರಲು ಸರಿಯಾದ ರಸ್ತೆೆ ಇಲ್ಲ, ಇದರಿಂದ ಸಾರ್ವಜನಿಕರ ಉದ್ಯಾಾನವು ಉಪಯೋಗಕ್ಕೆೆ ಬಾರದೆ ದನಗಳ ಸಾಕಾಣಿಕೆ, ಪೋಲಿ ,ಕುಡಕರ ದುಶ್ಚಟ್ಟಗಳಿಗೆ ತಾಣವಾಗಿದೆ.
ಸಿರವಾರ ಪಟ್ಟಣದಲ್ಲಿ ಅನೇಕ ಲೇಔಟ್ ಗಳು ಇದ್ದರೂ ವಾಯು ವಿಹಾರ ಮಾಡಲು, ಮಕ್ಕಳಿಗೆ ಆಠಕ್ಕೆೆ, ಹಿರಿಯ ನಾಗರಿಕರಿಗೆ ತುಂಬಾ ತೊಂದರೆ ಇದೆ. ಇನ್ನಾಾದರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕರ ಉದ್ಯಾಾನವನದ ಕಡೆ ಗಮನಹರಿಸಿ ಉದ್ಯಾಾನವನ ಅಭಿವೃದ್ಧಿಿ ಮಾಡಿ, ಮರಗಳು ಬೆಳೆಸಬೇಕು, ನೀರಿನ, ಹುಲ್ಲಿನ ಹಾಸು ಕಾರ್ಯವನ್ನು ಮಾಡಲು ಮುಂದಾಗಬೇಕಾಗಿದೆ.
ಕೋಟ್ : 01
ಉದ್ಯಾಾನವನ ಅಭಿವೃದ್ಧಿಿಗೆ ಆದ್ಯತೆ ನೀಡಲಾಗಿದೆ, ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು, ಇನ್ನೂ ಸಣ್ಣಪುಟ್ಟ ಕಾಮಗಾರಿ ಬಾಕಿ ಇದೆ ಅವುಗಳನ್ನು, ಮರಗಳು ಬೆಳೆಸುವ ಕಾರ್ಯ ಇದೆ.
-ವೈ. ಭೂಪನಗೌಡ. ಅಧ್ಯಕ್ಷರು. ಪ.ಪಂ.
ಕೋಟ್ : 02
ಕಳೆದ ವರ್ಷ ಸಾರ್ವಜನಿಕರ ಉದ್ಯಾಾನವನದಲ್ಲಿ 150ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಅವುಗಳ ಪೋಷಣೆ, ಸ್ವಚ್ಚತಾ ಕಾರ್ಯವನ್ನು ನಮ್ಮ ಸ್ನೇಹಿತರ ಬಳಗದಿಂದ ಮಾಡಿ, ಪಟ್ಟಣ ಪಂಚಾಯತಿಗೆ ಕಲ್ಪಿಿಸಲಾಗಿತ್ತು ಪ.ಪಂ.ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಬೆಳೆದ ಮರಗಳು ಹಾಳಾಗಿವೆ, ಇದರಿಂದ ಬೇಸರವಾಗಿದೆ .
-ಜಿ.ಅನಿಲ್ ಕುಮಾರ, ಗೆಳೆಯರ ಬಳಗದ ಅಧ್ಯಕ್ಷ ಸಿರವಾರ.
ಸಿರವಾರ: ವಾಕಿಂಗ್ಗಾಗಿ ನಾಗರಿಕರ ಪರದಾಟ ಮರಗಳು ಇಲ್ಲದೆ ಸೊರಗಿದ ಸಾರ್ವಜನಿಕ ಉದ್ಯಾಾನವನ…!

