ಸುದ್ದಿಮೂಲ ವಾರ್ತೆ ಬೆಂಗಳೂರು, ನ.16:
ಸಚಿವ ಸಂಪುಟ ಪುನರ್ರಚನೆಯಾದರೆ ನಾಯಕತ್ವ ಬದಲಾವಣೆಯಾಗುವುದಿಲ್ಲ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಸ್ಥಾಾನ ಅಬಾಧಿತ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಿ ಸಿದ್ದರಾಮಯ್ಯ ದೆಹಲಿಗೆ ಹೋಗುವ ಮುನ್ನ, ನಾನು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೆ. ಅನಂತರದ ವಿದ್ಯಮಾನಗಳ ಬಗ್ಗೆೆ ಮಾಹಿತಿ ಇಲ್ಲ. ಆದರೆ ಸಚಿವ ಸಂಪುಟ ಪುನರ್ರಚನೆಗೆ ಅನುಮತಿಸಲಾಗಿದೆ ಎಂಬ ವರದಿಯನ್ನು ನೋಡಿದ್ದೇನೆ ಎಂದರು.
ಸಾಕಷ್ಟು ಮಂದಿ ಶಾಸಕರಿಗೆ ಸಚಿವರಾಗಬೇಕು ಎಂದು ಬಹಳಷ್ಟು ದಿನಗಳಿಂದಲೂ ಬೇಡಿಕೆ ಇದೆ. ಅವರಿಗೆ ಅವಕಾಶ ಸಿಗಬೇಕು. ಸಂಪುಟ ಪುನರ್ರಚನೆ ಮುಖ್ಯಮಂತ್ರಿಿ ಅವರ ಪರಮಾಧಿಕಾರ. ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆೆ ವಿವರ ಗೊತ್ತಿಿಲ್ಲ. ಸಮಯ ಸಂದರ್ಭ ನೋಡಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಸಂಪುಟ ಪುನರ್ರಚನೆ ಹಿನ್ನೆೆಲೆಯಲ್ಲಿ ತಾವು ದೆಹಲಿಗೆ ಹೋಗಿಲ್ಲ, ಹೋಗುವುದೂ ಇಲ್ಲ ಎಂದು ಪ್ರಶ್ನೆೆಯೊಂದಕ್ಕೆೆ ಉತ್ತರಿಸಿದರು. ಕಬ್ಬಿಿಗೆ ಎ್ಆರ್ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾಾರಿ. 2024-25, 2025-26ನೇ ಸಾಲಿಗೆ ಪ್ರತಿ ಟನ್ಗೆ 3,300 ರೂ.ಗಳನ್ನು ನಿಗದಿ ಮಾಡಿದೆ. ನಮ್ಮ ರೈತರು ಇನ್ನಷ್ಟು ಹೆಚ್ಚು ಕೇಳುತ್ತಿಿದ್ದಾರೆ. ಹೆಚ್ಚುವರಿ ದರವನ್ನು ಕಾರ್ಖಾನೆಗಳು ಕೊಡಬೇಕು, ಸರ್ಕಾರಗಳು ನೀಡಬೇಕಿದೆ. ರಾಜ್ಯ ಸರ್ಕಾರ ರೈತರ ಹಿತದೃಷ್ಟಿಿಯಿಂದ ಪ್ರತಿ ಟನ್ಗೆ 50 ರೂ. ಹೆಚ್ಚುವರಿ ಹಣ ನೀಡಲು ಮತ್ತು ಕಾರ್ಖಾನೆಗಳಿಂದ 50 ರೂ. ಕೊಡಿಸಲು ದರ ನಿಗದಿಪಡಿಸಲಾಗಿದೆ ಎಂದರು.
ಕಬ್ಬಿಿನ ಉಪ ಉತ್ಪನ್ನಗಳ ಆಧಾರದ ಮೇಲೆ ದರ ಕೊಡುವಂತೆ ರೈತರು ಬೇಡಿಕೆ ಮಂಡಿಸಿದ್ದರು. ಈ ಎಲ್ಲಾ ವಿಚಾರಗಳ ಚರ್ಚೆ ಮಾಡಲು ಮುಖ್ಯಮಂತ್ರಿಿ ಅವರು ಪ್ರಧಾನಮಂತ್ರಿಿಯವರ ಸಮಯ ಕೇಳಿದ್ದರು. ಈಗ ಸಮಯ ಸಿಕ್ಕಿಿದೆ, ನಾಳೆ ಭೇಟಿಯಾಗುತ್ತಾಾರೆ ಎಂದು ಹೇಳಿದರು. ಪ್ರಧಾನಿ ಭೇಟಿಯ ವೇಳೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆೆ ಅನುಮತಿಸಿರುವುದು ಮತ್ತಿಿತರ ವಿಚಾರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದರು.

