ಸುದ್ದಿಮೂಲ ವಾರ್ತೆ ಹರಪನಹಳ್ಳಿಿ, ನ.16:
ಓಲೈಕೆ ರಾಜಕಾರಣ ತಾತ್ಕಾಾಲಿಕವಾಗಿ ಗೆಲುವು ಕೊಡುತ್ತದೆ ರಾಜನೀತಿ ರಾಜಕಾರಣ ದೀರ್ಘಾವಧಿವರೆಗೂ ಇರುತ್ತದೆ ದೀರ್ಘಕಾಲ ರಾಜಕೀಯ ಮಾಡಿದ ಕಾಂಗ್ರೆೆಸ್ ತನ್ನ ಸಿದ್ದಾಂತವನ್ನು ಹಾಗು ರಾಜನೀತಿಯನ್ನು ಬದಲಿಸಿಕೊಳ್ಳಬೇಕಿದೆ ಎಂದು ಬಿಜೆಪಿ ರಾಜ್ಯ ನಾಯಕ ಸಿಟಿ ರವಿ ಹೇಳಿದರು.
ಭಾನುವಾರ ಖಾಸಗಿ ಕಾರ್ಯಕ್ರಮಕ್ಕೆೆ ಆಗಮಿಸಿದ ಸಿಟಿ ರವಿ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಮುಖಂಡರೊಂದಿಗೆ ಪತ್ರಿಿಕಾಗೋಷ್ಠಿಿ ನಡೆಸಿದರು ಈ ಸಂದರ್ಭದಲ್ಲಿ ಪ್ರಚಲಿತ ರಾಜಕೀಯ ವಿಚಾರವಾಗಿ ಮಾತನಾಡಿದ ಅವರು ಬಿಹಾರ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟದ ಲಿತಾಂಶದಿಂದ ಕಾಂಗ್ರೆೆಸ್ ಪಕ್ಷಕ್ಕೆೆ ನಡುಕ ಶುರುವಾಗಿದೆ. ಈ ಲಿತಾಂಶದಿಂದ ಇಡೀ ದೇಶಕ್ಕೆೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ. ಕಾಂಗ್ರೆೆಸ್ ಮತ್ತು ಪ್ರಾಾದೇಶಿಕ ಪಕ್ಷಗಳನ್ನು ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.ಬಿಹಾರದಲ್ಲಿ ಜಂಗಲ್ ರಾಜ್ ಪಕ್ಷದ ಅಧಿಕಾರವನ್ನು ಬಯಸದೆ ನಿತೀಶ್ ಮತ್ತು ಮೋದಿಯವರ ನೇತೃತ್ವದಲ್ಲಿ ಬಿಹಾರದ ಜನ ಅಭಿವೃದ್ಧಿಿಯ ಆಡಳಿತಕ್ಕೆೆ ಅಚ್ಚರಿಯ ಲಿತಾಂಶ ನೀಡಿದ್ದಾರೆ.
ಬಹುದೀರ್ಘಕಾಲ ದೇಶವನ್ನಾಾಳಿದ ಕಾಂಗ್ರೆೆಸ್ ತನ್ನ ನೀತಿ ಸಿದ್ಧಾಾಂತಗಳಲ್ಲಿ ಎಡವಿದೆ. ಓಲೈಕೆ ಮತ್ತು ಪರಿವಾರದ ರಾಜಕಾರಣವನ್ನು ಬಿಟ್ಟು ಉತ್ತಮ ರಾಜನೀತಿಯನ್ನು ಅಳವಡಿಸಿಕೊಂಡು ಪಕ್ಷವನ್ನು ಮುನ್ನಡೆಸಲಿ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರ ರಾಜಕೀಯ ಅಪ್ಪ್ರಬುದ್ಧತೆ ಬಗ್ಗೆೆ ಟೀಕಿಸಿದರು. ಬಿಹಾರದಲ್ಲಿ ನೀತಿ. ನೇತಾ. ಹಾಗೂ ಒಗ್ಗಟ್ಟು ಈ ಮೂರು ಅಂಶಗಳಿಂದ ಎನ್.ಡಿಎ ಗೆದ್ದು ಬೀಗಿದೆ ಎಂದರು.
ಇಡೀ ದೇಶದಲ್ಲಿ ಬೆರಣಿಕೆ ರಾಜ್ಯದಲ್ಲಿ ಕಾಂಗ್ರೆೆಸ್ ಆಡಳಿತದಲ್ಲಿದೆ ಅದರಲ್ಲಿ ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ಕಾಂಗ್ರೆೆಸ್ ಆಡಳಿತ ನಡೆಸುತ್ತಿಿದ್ದು ಸಿದ್ದರಾಮಯ್ಯರವರ ನೇತೃತ್ವದಲ್ಲಿ ಭ್ರಷ್ಟಾಾಚಾರ.ಓಲೈಕೆ ನೀತಿ.ಬೆಲೆ ಏರಿಕೆ. ಹಲವಾರು ಸಮಸ್ಯೆೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿಿ ಕಾರ್ಯ ಸ್ಥಗಿತವಾಗಿದೆ. ರಾಜ್ಯದ ಜನ ರೋಸಿ ಹೋಗಿದ್ದಾರೆ ಪ್ರಸ್ತುತ ಚುನಾವಣೆ ನಡೆದರೆ ಬಿಹಾರ ಮಾದರಿಯ ಲಿತಾಂಶ ಬರುತ್ತದೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿಿದೆ ಎಂದರು.
ಈ ಪತ್ರಿಿಕಾಗೋಷ್ಠಿಿಯಲ್ಲಿ ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ್ ರೆಡ್ಡಿಿ, ಮಾಜಿ ಅಧ್ಯಕ್ಷ ಚನ್ನಬಸವನಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಶೇಖರಪ್ಪ, ಸ್ಥಳೀಯ ಬಿಜೆಪಿ ಮುಖಂಡರಾದ, ವೈಡಿ ಅಣ್ಣಪ್ಪ, ನಂಜನ ಗೌಡ, ಆರುಂಡಿ ನಾಗರಾಜ್. ಬಾಗಳಿ ಕೊಟ್ರೇೇಶಪ್ಪ , ಆರ್ಲೋಕೇಶ್, ಮುತ್ತಿಿಗೆ ವಾಗೀಶ್. ಓಂಕಾರ್ ಗೌಡ, ಮಲ್ಲಿಕಾರ್ಜುನ್. ಶಿವಣ್ಣ, ಗಿರೀಶ, ಸಂಗಮೇಶ್, ಮಲ್ಲೇಶ್, ವಾಗೀಶ್, ರವಿ ನಾಯ್ಕ್. ತಿಮ್ಮಣ್ಣ, ಕಣಿವೆಹಳ್ಳಿಿ ಮಾರುತಿ, ಆಲೂರು ಶ್ರೀನಿವಾಸ್, ಹಾಗೂ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

