ಢಾಕಾ (ಬಾಂಗ್ಲಾಾದೇಶ), ನ.17:
ನೆರೆ ರಾಷ್ಟ್ರ ಬಾಂಗ್ಲಾಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾಾ ದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಾಯಮಂಡಳಿ ಮರಣ ದಂಡನೆ ಶಿಕ್ಷೆ ವಿಧಿಸಿದೆ.
2024ರಲ್ಲಿ ನಡೆದ ಕ್ಷಿಪ್ರ ಕ್ರಾಾಂತಿ ವೇಳೆ ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆೆ ಮಾಡಿದ ಆರೋಪ ಸಾಬೀತಾದ ಹಿನ್ನೆೆಲೆಯಲ್ಲಿ ನ್ಯಾಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ.
ಪ್ರಕರಣದ ವಿಚಾರಣೆ ವೇಳೆ ಪ್ರಾಾಸಿಕ್ಯೂಟರ್ಗಳು ಶೇಖ್ ಹಸೀನಾ ಅವರು ಯಾವುದೇ ಆಯುಧ ಇಲ್ಲದೆ ಪ್ರತಿಭಟನೆ ನಿರತರಾಗಿದ್ದವರನ್ನು ಹತ್ಯೆೆ ಮಾಡಿಸಿರುವುದರಿಂದ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ನ್ಯಾಾಯಮಂಡಳಿ ಮರಣ ದಂಡನೆ ವಿಧಿಸಿದೆ.
ಬಾಂಗ್ಲಾಾ ದೇಶದಲ್ಲಿ 2024ರಲ್ಲಿ ಸರ್ಕಾರದ ವಿರುದ್ಧ ಜನರು ಬೀದಿಗೆ ಇಳಿದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಅವರನ್ನು ಹತ್ಯೆೆ ಮಾಡಲಾಯಿತು. ಪ್ರತಿಭಟನೆ ಇಡೀ ಬಾಂಗ್ಲಾಾ ದೇಶ ಆವರಿಸಿದ ಹಿನ್ನೆೆಲೆಯಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಶೇಖ್ ಹಸೀನಾ ಅವರು ಭಾರತಕ್ಕೆೆ ಪಲಾಯನ ಮಾಡಿದರು.
ದಂಗೆ ವೇಳೆ ನಡೆದ ಹಿಂಸಾಚಾರವನ್ನು ಇವರ ಮೇಲೆ ಹೊರಿಸಲಾಗಿದೆ. ಶೇಖ್ ಹಸೀನಾ ಅವರ ಗೈರು ಹಾಜರಿಯಲ್ಲಿ ನ್ಯಾಾಯಮಂಡಳಿ ವಿಚಾರಣೆ ನಡೆಸಿತು.
ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ನಂತರ ಬಾಂಗ್ಲಾಾ ದೇಶದ ಪ್ರಧಾನಿಯಾಗಿ ಯೂನಸ್ ಅಧಿಕಾರ ವಹಿಸಿಕೊಂಡರು.
ವರದಿಗಳ ಪ್ರಕಾರ ಪ್ರತಿಭಟನೆ ವೇಳೆಯಲ್ಲಿ 1,400 ಮಂದಿ ಪ್ರತಿಭಟನಾಕಾರರು ಮೃತಪಟ್ಟಿಿದ್ದಾರೆ ಎಂದು ಅಂದಾಜಿಸಲಾಗಿದೆ.
ಶೇಖ್ ಹಸೀನಾ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸುವಂತೆ ಆದೇಶಿಸಿದ್ದರು ಎಂದು ವಿಶ್ವ ಸಂಸ್ಥೆೆಯ ಮಾನವ ಹಕ್ಕುಗಳ ತನಿಖಾಧಿಕಾರಿಗಳು ನ್ಯಾಾಯಮಂಡಳಿಗೆ ಮಾಹಿತಿ ನೀಡಿದ್ದರು. ಆದರೆ ಶೇಖ್ ಹಸೀನಾ ಅವರು ತಾವು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಆದೇಶ ನೀಡಿಲ್ಲ ಎಂದು ನಿರಾಕರಿಸಿದ್ದರು.
ಪ್ರಕರಣದ ವಿಚಾರಣೆಗೆ ಅವರು ಹಾಜರಾಗಲು ನಿರಾಕರಿಸಿದ್ದರು. ಅಲ್ಲದೆ ಭಾರತದಲ್ಲಿ ಉಳಿದುಕೊಂಡಿದ್ದರು.
ಬಾಕ್ಸ್
ಏನಿದು ಬಾಂಗ್ಲಾಾ ದಂಗೆ
ಬಾಂಗ್ಲಾಾದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಭ್ರಷ್ಟಾಾಚಾರ ಎಲ್ಲೆ ಮೀರಿತ್ತು. ಉದ್ಯೋೋಗ ಕೊರತೆಯಿಂದ ವಿದ್ಯಾಾರ್ಥಿಗಳು ಕಂಗೆಟ್ಟು ಕ್ರಾಾಂತಿಗೆ ಮುಂದಾದರು.
ಆರ್ಥಿಕ ಸಂಕಷ್ಟ, ಭ್ರಷ್ಟಾಾಚಾರ ಮತ್ತು ಉದ್ಯೋೋಗ ಕೊರತೆಯಿಂದ ವಿದ್ಯಾಾರ್ಥಿಗಳು ಆಕ್ರೋೋಶಗೊಂಡು ಬೀದಿಗಿಳಿದರು. ದಂಗೆ 2024ರ ಜುಲೈನಲ್ಲಿ ಆರಂಭವಾಗಿ ಇಡೀ ದೇಶ ಆವರಿಸಿತು. ಕೊನೆಗೆ ಅವರು ಅಧಿಕಾರದಿಂದ ಇಳಿದು ಭಾರತಕ್ಕೆೆ ಪಲಾಯನ ಮಾಡಿದರು.
ಕೋಟ್
ಬಾಂಗ್ಲಾಾ ದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಾಯಮಂಡಳಿ ತೀರ್ಪಿನಿಂದ ಪಕ್ಷದ ಬೆಂಬಲಿಗರು ಭಯಬೀಳುವುದು ಬೇಡ. ನನಗೆ ಏನು ಆಗುವುದಿಲ್ಲ. ನಾನು ಜೀವಂತವಾಗಿರುತ್ತೇನೆ. ಬಾಂಗ್ಲಾಾ ದೇಶದ ಜನರೊಂದಿಗೆ ನಿಲ್ಲುತ್ತೇನೆ.
-ಶೇಖ್ ಹಸೀನಾ, ಗಲ್ಲು ಶಿಕ್ಷೆಗೆ ಒಳಗಾದ ಬಾಂಗ್ಲಾಾ ಮಾಜಿ ಪ್ರಧಾನಿ.

