ಸುದ್ದಿಮೂಲ ವಾರ್ತೆ ಸಿಂಧನೂರು , ನ.17:
ಶಿಕ್ಷಣಕ್ಕೆೆ ಹೆಚ್ಚಿಿನ ಒತ್ತು ನೀಡಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಿಸಿದಾಗ್ಯೂ ಲಿತಾಂಶದಲ್ಲಿ ಸುಧಾರಣೆ ಕಾಣುತ್ತಿಿಲ್ಲ ಎಂದು ಶಾಸಕ, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಹಂಪನಗೌಡ ಬಾದರ್ಲಿ ಬೇಸರ ವ್ಯಕ್ತಪಡಿಸಿದರು.
ಅವರು ಸೋಮವಾರ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾಾರ್ಥಿನಿಯವರಿಗೆ ಸ್ವಾಾಗತ ಸಮಾರಂಭ, ವಿವಿಧ ಘಟಕಗಳ ಉದ್ಘಾಾಟನಾ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಕ-ಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ನಮ್ಮ ಭಾಗದ ವಿದ್ಯಾಾರ್ಥಿಗಳು ಬೇರೆ ಬೇರೆ ಜಿಲ್ಲೆೆಗಳಿಗೆ ಹೋಗಿ ಓದುತ್ತಿಿದ್ದಾಾರೆ. ಸಿಂಧನೂರು ತಾಲೂಕಿನಲ್ಲಿ ದಾಖಲೆಯ ಕಾಲೇಜುಗಳಿವೆ. ಸರಕಾರಿ ಕಾಲೇಜುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿಿದೆ. ಆದರೂ ನಿರೀಕ್ಷಿತ ಲಿತಾಂಶ ಬರುತ್ತಿಿಲ್ಲ. ಈ ಬಗ್ಗೆೆ ಪ್ರಾಾಂಶುಪಾಲರು, ಉಪನ್ಯಾಾಸಕರು ಚಿಂತನೆ ಮಾಡಬೇಕಿದೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಉಜ್ವಲ ಭವಿಷ್ಯ ರೂಪಿಸಬೇಕಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಮಹಿಳಾ ಮಹಾವಿದ್ಯಾಾಲಯಕ್ಕೆೆ ಬೇಕಾದ ಡಿಜಿಟಲ್ ಗ್ರಂಥಾಲಯ, ಪ್ರಯೋಗಾಲಯ, ಕ್ರೀೆಡಾಂಗಣ ಸೇರಿದಂತೆ ಎಲ್ಲಾಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಾಮಾಣಿಕ ಪ್ರಯತ್ನ ಮಾಡುವೆ. ವಿದ್ಯಾಾರ್ಥಿಗಳೇ ನಿಮ್ಮ ಭವಿಷ್ಯ ನಿಮ್ಮ ಕೈಲಿದೆ. ಗುರಿಯೊಂದಿಗೆ ಸತತ ಅಭ್ಯಾಾಸ ಮಾಡಬೇಕು. ಸಮಯಪ್ರಜ್ಞೆ, ಗುರಿ, ಛಲ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವಿದ್ಯಾಾರ್ಥಿಗಳಾಗಬೇಕು. ಕಲೆ, ಸಂಸ್ಕೃತಿ, ಕೌಟುಂಬಿಕ ವ್ಯವಸ್ಥೆೆ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆರ್ಕೆಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಪ್ರಾಾಂಶುಪಾಲ ಮಹಾಂತಪ್ಪ ಕೊಡಗಲಿ, ಹಿರಿಯ ಪ್ರಾಾಧ್ಯಾಾಪಕ ಬಸವರಾಜ ತಡಕಲ್, ಸಾಹಿತಿ ಬೀರಪ್ಪ ಶಂಭೋಜಿ, ಸಹಾಯಕ ಪ್ರಾಾಧ್ಯಾಾಪಕಿ ಡಾ.ಲಕ್ಷ್ಮೀದೇವಿ, ಡಾ.ರೇಣುಕಾ, ಉಪನ್ಯಾಾಸಕ ಶಂಕರಪ್ಪ, ಎ್ಡಿಎ ನೀಲಾಂಬಿಕ, ವಿದ್ಯಾಾರ್ಥಿ ಪ್ರತಿನಿಧಿ ಸುಧಾ ವೇದಿಕೆಯಲ್ಲಿದ್ದರು.
ಸ್ವಾಾಗತ ಸಮಾರಂಭ, ವಿವಿಧ ಚಟುವಟಿಕೆಗಳ ಉದ್ಘಾಾಟನೆ ಸೌಲಭ್ಯಗಳನ್ನು ನೀಡಿದಾಗ್ಯೂ ಲಿತಾಂಶ ಸುಧಾರಿಸುತ್ತಿಿಲ್ಲ – ಬಾದರ್ಲಿ

