ಸುದ್ದಿಮೂಲ ವಾರ್ತೆ
ರಾಯಚೂರು,ನ.17-
ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ಪ್ರಾಾಧಿಕಾರ ರಚಿಸಬೇಕು, ಖಾಲಿ ಇರುವ ಪ್ರಾಾಥಮಿಕ ಮತ್ತು ಪ್ರೌೌಢ ಶಾಲೆಗಳಲ್ಲಿ ಶಿಕ್ಷಕರ ಹುದ್ದೆೆ ಭರ್ತಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ವಿವಿಧ ಸಂಘಗಳ ಪ್ರತಿನಿಧಿಗಳು ಒತ್ತಾಾಯಿಸಿದರು.
ನಗರಕ್ಕೆೆ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿಿ ಮಹೇಶ ಅವರಿಗೆ ಮನವಿ ಸಲ್ಲಿಸಿದರು. ಶಿಕ್ಷಕರಿಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಿಲ್ಲ. ಉಚಿತ ಮತ್ತು ಕಡ್ಡಾಾಯ ಶಿಕ್ಷಣದ ಬಗ್ಗೆೆ ಮಾತನಾಡುತ್ತಿಿದ್ದರೂ ನಮ್ಮ ಭಾಗದ ಮಕ್ಕಳಿಗೆ ಮರೀಚಿಕೆಯಾಗಿದೆ. ಸುಮಾರು ಇಪ್ಪತ್ತು ವರ್ಷಗಳಿಂದ ಈ ಭಾಗದಲ್ಲಿ ಶಿಕ್ಷಕರ ಕೊರತೆಯಿದೆ. ಇಲ್ಲಿ ಶಿಕ್ಷಕರನ್ನು ಭರ್ತಿ ಮಾಡಿದಾಗಲು ವರ್ಗಾವಣೆಯ ನಂತರ ಶಿಕ್ಷಕರ ಕೊರತೆ ತೀವ್ರ ರೀತಿಯಲ್ಲಿ ಅನುಭವಿಸಲಾಗುತ್ತಿಿದೆ. ಹೀಗಾಗಿ ಶಿಕ್ಷಕರ ಭರ್ತಿಯನ್ನು ಕಲ್ಯಾಾಣ ಕರ್ನಾಟಕದ ಪ್ರಾಾಧಿಕಾರ ರಚಿಸಿ ಇದರ ಮೂಲಕ ಭರ್ತಿ ಮಾಡಬೇಕು. ಭರ್ತಿಯಾದ ಶಿಕ್ಷಕರು ಈ ಆರು ಜಿಲ್ಲೆಗಳಲ್ಲಿ ಮಾತ್ರ ವರ್ಗಾವಣೆ ತೆಗೆದುಕೊಳ್ಳುವಂತೆ ಆಗಬೇಕು ಎಂದು ಆಗ್ರಹಿಸಿದರು.
ಶಾಲೆಗಳಲ್ಲಿ ಮಕ್ಕಳ ಸಂಖ್ಯೆೆ ಕಡಿಮೆಯಾಗಲು ಶಿಕ್ಷಕರ ಕೊರತೆಯೇ ಮೂಲ ಕಾರಣ. ಈಗಿರುವ ಎಲ್ಲಾ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರನ್ನು ಭರ್ತಿಮಾಡಿ ಬಲವರ್ಧನೆಗೊಳಿಸಬೇಕು.
ಖಾಲಿ ಇರುವ ಶಿಕ್ಷಕರನ್ನು ತಕ್ಷಣ ತುಂಬಬೇಕು, ಪ್ರತಿ ಶಾಲೆಗೆ ಒಬ್ಬ ಪರಿಚಾರಕ ನೇಮಿಸಬೇಕು, ಕರ್ನಾಟಕ ಪಬ್ಲಿಿಕ್ ಶಾಲೆಗಳಿಗೆ ಪಕ್ಕದ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಿಯೆ ತಕ್ಷಣ ಕೈಬಿಡಬೇಕು, ಪ್ರಾಾಥಮಿಕ ಮತ್ತು ಪ್ರೌೌಢ ಶಾಲೆಯಲ್ಲಿ ವೃತ್ತಿಿಶಿಕ್ಷಣ ನಿಲ್ಲಿಸಿ ಪದವಿ ಹಂತದಲ್ಲಿ ವೃತ್ತಿಿ ಶಿಕ್ಷಣಕ್ಕೆೆ ಒತ್ತು ನೀಡಬೇಕು, ಶಾಲೆಗಳಲ್ಲಿ ಮೂಲ ಸೌಲಭ್ಯ ಒದಗಿಸಬೇಕು, ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಪಬ್ಲಿಿಕ್ ಸ್ಕೂಲ್ ಮ್ಯಾಾಗ್ನೆೆಟ್ ಶಾಲೆ ಗುರುತಿಸುವುದು ನಿಲ್ಲಿಸಬೇಕು ಎಂದು ಒತ್ತಾಾಯಿಸಿದರು.
ಜನವರಿ ಮೊದಲನೇ ವಾರದ ಒಳಗಡೆ ಈಡೇರಿಸದಿದ್ದರೆ ಸರ್ಕಾರಿ ಶಾಲೆ ಹಾಗೂ ಕನ್ನಡ ಭಾಷೆ ಉಳಿಸುವುದಕ್ಕಾಾಗಿ ಬೇಡಿಕೆ ಈಡೇರಿಕೆಗೆ ಹೋರಾಟ ರೂಪಿಸಲು ಆಗ್ರಹಿಸಿದರು.
ಬಿವಿಎಸ್ನ ಸೈಯ್ಯದ್ ಹಫಿಜುಲ್ಲಾ, ಮಹಿಳಾ ಒಕ್ಕೂಟದ ಮೋಕ್ಷಮ್ಮ, ಎಸ್ ಜೆ ವಿ ಎಸ್ ಎಸ್ ಎನ್ ಶಿವರಾಮರೆಡ್ಡಿಿ , ಗ್ರಾಾಕೂಸ್ ಕಾರ್ಯದರ್ಶಿ ಗುರುರಾಜ್, ಸರ್ಕಾರಿ ಶಾಲೆ ಅಭಿವೃದ್ದಿ ವೇದಿಕೆಯ ಬಸವರಾಜ್, ವಿದ್ಯಾಾಪಾಟೀಲ ಸೇರಿ ಇತರರಿದ್ದರು.

