ಸುದ್ದಿಮೂಲ ವಾರ್ತೆ ಬೆಂಗಳೂರು, ನ.17:
ರಾಜಕಾರಣ ಮತ್ತು ಮಾಧ್ಯಮ ಸಮಾಜದ ಎರಡು ಕಣ್ಣುಗಳು. ಇವು ಸಮಾನವಾಗಿ, ಸಾಮರಸ್ಯದಿಂದ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಹೇಳಿದರು.
ಪ್ರೆೆಸ್ ಕ್ಲಬ್ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆೆಸ್ ಕ್ಲಬ್ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪತ್ರಿಿಕಾ ದಿನಾಚರಣೆಯಲ್ಲಿ ಮಾತನಾಡಿದರು
ಒಂದು ಕಣ್ಣು ಸಮಾಜದ ಸಮಸ್ಯೆೆಗಳನ್ನು ತಿಳಿಸುತ್ತದೆ. ಆಗ ಇನ್ನೊೊಂದು ಕಣ್ಣು ಅದಕ್ಕೆೆ ಪರಿಹಾರ ಒದಗಿಸುತ್ತದೆ ಮಾಧ್ಯಮ ಮತ್ತು ರಾಜಕಾರಣ ಎಂಬ ಎರಡು ಕಣ್ಣುಗಳು ಸತ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಲವಾದರೆ ಸಮಾಜ ಕತ್ತಲೆಗೆ ಜಾರುತ್ತದೆ. ಇವುಗಳು ಜೊತೆ ಜೊತೆಯಾಗಿ ಇದ್ದರೆ ಸಮಾಜದಲ್ಲಿ ಶಾಂತಿ ಇರುತ್ತದೆ. ಆಗ ಮಾತ್ರ ಶುದ್ಧ ಭಾರತ ನಿರ್ಮಾಣ ಮಾಡಬಹುದು ಎಂದರು.
ಸಮಾಜದಲ್ಲಿ ಏಕತೆ ಮತ್ತು ಸಾಮರಸ್ಯ ಕಾಪಾಡಲು ಹಿಂದೆಯೂ ಮಾಧ್ಯಮಗಳು ಕೊಡುಗೆ ನೀಡಿದ್ದವು. ಈಗಲೂ ಕೊಡುಗೆ ನೀಡುತ್ತಾಾ ಇವೆ. ಸಮಾಜದ ಅಭಿಪ್ರಾಾಯ ರೂಪಿಸುವಲ್ಲಿ ಮಾಧ್ಯಮಗಳ ಜವಾಬ್ದಾಾರಿ ದೊಡ್ಡದು. ಮಾನವೀಯ ಮೌಲ್ಯಗಳನ್ನು ಎತ್ತಿಿ ಹಿಡಿಯುವ ಜವಾಬ್ದಾಾರಿಯುತ ಮಾಧ್ಯಮಗಳ ಇಂದಿನ ಅಗತ್ಯ. ಜನ ಸಾಮಾನ್ಯರಿಗೆ ತೊಂದರೆ ಬಂದಾಗ ಮಾಧ್ಯಮಗಳು ಮಾನವೀಯತೆ ಉಳಿದುಕೊಂಡು ಹೋಗಬೇಕು. ದೇಶದ ಸಂಸೃತಿ, ಏಕತೆಯನ್ನು ಉಳಿಸಿಕೊಂಡು ಬಲಿಷ್ಠ ದೇಶ ನಿರ್ಮಿಸುವ ಜವಾಬ್ದಾಾರಿ ಸಹ ಮಾಧ್ಯಮಗಳ ಮೇಲಿದೆ ಎಂದು ಹೇಳಿದರು.
ಶಾಸಕರಾದ ರಿಜ್ವಾಾನ್ ಅರ್ಷದ್ ಅವರು ಮಾತನಾಡಿ. ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆೆ ಸ್ವತಂತ್ರ ಮಾಧ್ಯಮ ಬೇಕು. ಮಾಧ್ಯಮಗಳಿಗೆ ಸ್ವತಂತ್ರ ಇಲ್ಲದಿದ್ದರ ಆರೋಗ್ಯವಾಗಿರುವುದಿಲ್ಲ. ಭಾರತೀಯ ಮಾಧ್ಯಮಗಳನ್ನು ಕಾರ್ಪೋರೇಟ್ ಜಗತ್ತು ಆಳುತ್ತಿಿದೆ. ಮಾಧ್ಯಮಗಳಿಗೆ ಸ್ವತಂತ್ರ ಇಲ್ಲದಿದ್ದರೆ ಹೆಸರಿಗೆ ಮಾತ್ರ ಮಾಧ್ಯಮ ಆಗುತ್ತದೆ ಎಂದರು.
ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಅವರು ಮಾತನಾಡಿ, ಸುಳ್ಳು ಸುದ್ದಿಗಳ ನಡುವೆ ವಿಶ್ವಸಾರ್ಹ ಸುದ್ದಿ ಹೇಗೆ ಮಾಡುವುದು ಎಂಬ ಆತಂಕ ಇದು ಇದೆ. ಇದರ ಬಗೆಗೆ ಭಯ ಪಡಬೇಕಾದ ಸನ್ನಿಿವೇಶದಲ್ಲಿ ನಾವು ಇದ್ದೇವೆ. ಮಾಧ್ಯಮಗಳ ವಿಶ್ವಾಾಸಾರ್ಹತೆ ರಕ್ಷಿಸಬೇಕಾಗಿದೆ. ಇದರ ಬಗ್ಗೆೆ ಯೋಚಿಸದಿದ್ದರೆ ಭವಿಷ್ಯದಲ್ಲಿ ಅನಾಹುತಗಳ ನಡೆಯುತ್ತವೆ ಎಂದರು.
ಪತ್ರಕರ್ತೆಯರಾದ ನೂರ್ಪು ಬಸು, ಡಾ. ಆರ್.ಪೂರ್ಣಿಮಾ, ಪ್ರೆೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ, ಅಕಾಡೆಮಿಯ ಸದಸ್ಯರು, ಮಾಜಿ ಅಧ್ಯಕ್ಷರು, ಹಿರಿಯ ಪತ್ರಕರ್ತರು, ಕಾಲೇಜು ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಪ್ರೆೆಸ್ ಕ್ಲಬ್ನಲ್ಲಿ ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಮಾಧ್ಯಮ ರಾಜಕಾರಣ ಸಮಾಜದ ಎರಡು ಕಣ್ಣುಗಳು: ಯು. ಟಿ. ಖಾದರ್

