ಸುದ್ದಿಮೂಲ ವಾರ್ತೆ ಕೊಪ್ಪಳ , ನ.17:
ಕೊಪ್ಪಳ ಬಳಿಯಲ್ಲಿ ಲ್ಡೋೋಟಾ ಕಂಪನಿಯವರು ಕಾರ್ಖಾನೆ ವಿಸ್ತರಣೆಗೆ ರಾಜ್ಯ ಸರಕಾರ ತಡೆ ನೀಡಿದೆ. ಈ ಒಪ್ಪಂದ ರದ್ದತಿಗೆ ಏನಾದರೂ ಕಾನೂನು ತೊಡಕಿದೆಯೇ ಎಂಬ ಪರಿಶೀಲನೆ ನಡೆದಿದೆ. ಇಲ್ಲಿಯ ಜನರ ಭಾವನೆಗೆ ಸರಕಾರ ಸ್ಪಂದಿಸಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇಂದು ಕೊಪ್ಪಳದ ನಗರಸಭೆ ಬಳಿಯಲ್ಲಿ ಕೊಪ್ಪಳ ಬಚಾವೋ ಅಂದೋಲನಾ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ಸಮಿತಿಯಿಂದ ಅನಿರ್ಧಿಿಷ್ಠಾಾವಧಿ ಧರಣಿ ನಡೆಯುವ ಸ್ಥಳಕ್ಕೆೆ ಭೇಟಿ ನೀಡಿದ ನಂತರ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಚಿವರಿಗೆ ಬಳಿ.ಬಲ್ದೋೋಟಾ ವಿಸ್ತರಣಾ ನಿಲ್ಲಬೇಕು, ಕಾರ್ಖಾನೆ ಅಕ್ರಮಿಸಿಕೊಂಡ ಬಸಾಪುರ ಕೆರೆ ಮರಳಿ ಪಡೆಯಬೇಕು. ಕಾರ್ಖಾನೆ ಬಾಧಿತ ಗ್ರಾಾಮಗಳಿಗೆ ಕೈಗಾರಿಕ ಮಂತ್ರಿಿ, ಆರೋಗ್ಯ ಮಂತ್ರಿಿ ಭೇಟಿ ನೀಡಬೇಕು. ಇಂಡಿಯನ್ ಮೆಡಿಕಲ್ ಕೌನ್ಸಿಿಲ್ ಆಪ್ ಇನ್ಸ್ಟಿಿಟ್ಯೂಟ್ ನಿಂದ ಸರ್ವೇ ಮಾಡಿಸಬೇಕು ಎಂಬ ನಾಲ್ಕು ಬೇಡಿಕೆಗಳನ್ನು ಇಟ್ಟರು.
ಪ್ರತಿಭಟನೆಯ ವೇದಿಕೆಯಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ನಾನೊಬ್ಬ ರಾಜ್ಯ ಸರ್ಕಾರದ ಮಂತ್ರಿಿಯಾಗಿ ಸ್ಪಷ್ಟಪಡಿಸಿರುವೆ. ಈಗಾಗಲೇ ಮುಖ್ಯಮಂತ್ರಿಿ ಬಳಿ ನಮ್ಮ ನಿಯೋಗ ಭೇಟಿ ನೀಡಿದೆ. ಭೇಟಿ ನೀಡಿ ಬಲ್ದೋೋಟಾ ಕಾರ್ಖಾನೆ ವಿರೋಧ ಬಗ್ಗೆೆ ಸಿಎಂ ಗಮನಕ್ಕೆೆ ತಂದಿದ್ದೇವೆ. ಮುಖ್ಯಮಂತ್ರಿಿಗಳು ಜಿಲ್ಲಾಾಧಿಕಾರಿಗಳ ಗಮನಕ್ಕೆೆ ತಂದಿದ್ದಾಾರೆ. ಬಲ್ದೋೋಟಾ ವಿಸ್ತರಣಾ ಕೆಲಸ ಕಾರ್ಯ ನಿಲ್ಲಿಸಲಾಗಿದೆ. ನನ್ನ ಭೇಟಿ ಕೊಡುವುದಕ್ಕೆೆ ಸಿಎಂ ಹೇಳಿದ್ದರು. ನಿಮ್ಮ ಬಳಿ ಮಾತ್ನಾಾಡೋದಕ್ಕೆೆ ಹೇಳಿದ್ದಾಾರೆ. ಹಾಗಾಗಿ ನಿಮ್ಮ ಬಳಿ ನಾನು ಬಂದಿರುವೆ. ಕಾನೂನು ವಿಚಾರದೊಳಗೆ ಈಗಾಗಲೇ ಸಾಧಕ ಬಾಧಕಗಳು ನಡೆಯುತ್ತಿಿವೆ ಎಂದರು.
ಬಸಾಪುರದ ಕೆರೆಯನ್ನು ಸರ್ಕಾರದ ವ್ಯಾಾಪ್ತಿಿಯಲ್ಲಿ ತೆಗೆದುಕೊಳ್ಳಲು ಚರ್ಚಿಸುವೆ. ಮತ್ತೊೊಮ್ಮೆೆ ಬಲ್ದೋೋಟಾ ಕಾರ್ಖಾನೆಗಳ ವಿಚಾರ ಕ್ಯಾಾಬಿನೆಟ್ ನಲ್ಲಿ ಪ್ರಸ್ತಾಾಪ ಮಾಡುವೆ. ಕೈಗಾರಿಕಾ ಹಾಗೂ ಆರೋಗ್ಯ ಸಚಿವರಿಗೆ ಭೇಟಿ ನೀಡುವಂತೆ ಸಿಎಂ ಗಮನಕ್ಕೆೆ ತರುವೆ. ಇಂಡಿಯನ್ ಮೆಡಿಕಲ್ ಇನ್ಸ್ಟಿಿಟ್ಯೂಟ್ ಅವರಿಗೆ ಪತ್ರ ಬರೆಯುತ್ತೇವೆ. ಜಿಲ್ಲಾಾಧಿಕಾರಿ ಹಾಗೂ ನಾನು ಕೂಡ ಪತ್ರ ಬರೆಯುತ್ತೇವೆ ಎಂದರು.
ತುಂಗಾಭದ್ರ ಜಲಾಶಯದಿಂದ ಎರಡನೇ ಬೆಳೆಗೆ ನೀರು ಕೊಡುವುದಕ್ಕೆೆ ಆಗುವುದಿಲ್ಲ. ಆಂಧ್ರ-ತೆಲಂಂಗಾಣದ ಪಾಲು ನೀರು ಕೊಡಬೇಕು. ಹಾಗಾಗಿ ಎರಡನೇ ಬೆಳೆಗೆ ನೀರು ಕೊಡಲು ಆಗವುದಿಲ್ಲ. ನಮಗೆ ಉಳಿದಿರುವ 20 ಟಿಎಂಸಿ ನೀರು ಮಾತ್ರ ಸಿಗುತ್ತೆೆ. ಹಾಗಾಗಿ ಉಳಿದ ನೀರನ್ನು ಬೇಸಿಗೆಯಲ್ಲಿ ಬಳಸಬೇಕಾಗುತ್ತೆೆ. ಕುಡಿಯುವ ನೀರಿನ ಅನುಕೂಲ ನೋಡಬೇಕಾಗುತ್ತದೆ. ನೀರು ಕಡಿಮೆ ಆದಾಗ ನಾವು ಗೇಟ್ ಬದಲಾವಣೆ ಮಾಡಬೇಕಾಗಿದೆ. ಹಾಗಾಗಿ ಎರಡನೇ ಬೆಳೆಗೆ ನೀರು ಕೊಡಲು ಆಗುವುದಿಲ್ಲ ಎಂದು ಹೇಳಿದರು.
ಬಲ್ಡೋೋಟಾ ಕಾರ್ಖಾನೆ ವಿಸ್ತರಣೆ ತಡೆಗೆ ಕಾನೂನು ತೊಡಕಿದ್ದರೆ ನಿವಾರಿಸಲು ನಿರ್ಧಾರ

