ಸುದ್ದಿಮೂಲ ವಾರ್ತೆ ರಾಯಚೂರು, ನ.17:
ರಾಯಚೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿ ಕಲಬುರ್ಗಿ ಪ್ರಾಾದೇಶಿಕ ಆಯುಕ್ತರನ್ನು ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾಾರೆ. ಈ ಮಧ್ಯೆೆ ಪಾಲಿಕೆಯ ಚುನಾಯಿತ ಮಂಡಳಿ ತಡೆಯಾಜ್ಞೆೆ ತಂದಿದೆ.
ನ.3ರಂದು ರಾಜ್ಯಪಾಲರ ಆದೇಶಾನುಸಾರ ಈ ನೇಮಕ ಮಾಡಿದ್ದಾಾಗಿ ಸರ್ಕಾರದ ಕಾರ್ಯದರ್ಶಿ ಟಿ.ಮಂಜುನಾಥ ನ.15ರಂದು ರಾಜ್ಯಪತ್ರದಲ್ಲಿ ತಿಳಿಸಿದ್ದಾಾರೆ.
ರಾಯಚೂರು ಮಹಾನಗರ ಪಾಲಿಕೆಯೆ ಆಡಳಿತ ಮಂಡಳಿಯ ಅವಧಿ ನ.2ರಂದು ಪೂರ್ಣಗೊಂಡಿದೆ. ಆಡಳಿತಾತ್ಮಕ ದೃಷ್ಟಿಿಯಿಂದ ಹಾಗೂ ಹೊಸ ಚುನಾವಣೆ ನಡೆದು ಆಡಳಿತ ಮಂಡಳಿ ಬರವವರೆಗೂ ಪಾಲಿಕೆಯ ಆಡಳಿತಾಧಿಕಾರಿಯಾಗಿ ಪ್ರಾಾದೇಶಿಕ ಆಯುಕ್ತರು ಕಾರ್ಯ ನಿರ್ವಹಿಸಲು ಆದೇಶದಲ್ಲಿ ತಿಳಿಸಿದ್ದಾಾರೆ.
ಈ ಮಾಹಿತಿ ಪಡೆಯುತ್ತಿಿದ್ದಂತೆ ಪಾಲಿಕೆಯ ಕಚೇರಿಯಲ್ಲಿದ್ದ ಆಡಳಿತಾರೂಢ ಪಕ್ಷದ ಮೇಯರ್, ಸದಸ್ಯರು ಹಾಗೂ ಮುಖಂಡರು ದಿಢೀರನೇ ಕಚೇರಿಯಿಂದ ಹೊರ ನಡೆದು ಹೋದರು ಎಂದು ಅಲ್ಲಿದ್ದವರು ತಿಳಿಸಿದರು.
ಅಲ್ಲದೆ, ಈ ಬಗ್ಗೆೆ ಈಗಾಗಲೇ ಹೈಕೋರ್ಟ್ನಲ್ಲಿ ಆಡಳಿತಾಧಿಕಾರಿ ನೇಮಿಸದಂತೆ ಕೋರಿ ತಡೆಯಾಜ್ಞೆೆ ತಂದಿರುವ ಪಾಲಿಕೆ ಆಡಳಿತ ಮಂಡಳಿಯ ನಡೆ ಕುತೂಹಲ ಮೂಡಿಸಿದೆ.
ಅಲ್ಲದೆ, ಈ ಬಗ್ಗೆೆ ಸರ್ಕಾರಕ್ಕೂ ಮಾಹಿತಿ ಇದ್ದು ನ.18ರಂದು ವಿಚಾರಣೆಗೆ ಬರಲಿದ್ದು ಸದ್ಯ ಚರ್ಚೆಗೆ ಗ್ರಾಾಸವಾಗಿದೆ. ಈ ಬಗ್ಗೆೆ ಚುನಾಯಿತರು ತಮ್ಮ ಕೋರಿಕೆಗೆ ನ್ಯಾಾಯಾಲಯದ ತಡೆಯಾಜ್ಞೆೆ ನೀಡಿದ್ದು ಸರ್ಕಾರದ ಪರವಾಗಿ ವಕೀಲರು ಆಡಳಿತ ಮಂಡಳಿಯ ವಾದವನ್ನು ಹೇಗೆ ಮಂಡಿಸಲಿದ್ದಾಾರೆ ಎಂಬ ಪ್ರಶ್ನೆೆ ಹುಟ್ಟು ಹಾಕಿದೆ.
ತಾವು ಅಧಿಕಾರಕ್ಕೆೆ ಬಂದು ಅವಧಿ ಪೂರ್ಣಗೊಂಡಿಲ್ಲ ಅಲ್ಲದೆ, ಮೊದಲ ಮತ್ತು ಎರಡನೇ ಅವಧಿಯ ಮಧ್ಯೆೆ ಸರ್ಕಾರ ತನ್ನ ಮೀಸಲಾತಿ ಸಮಸ್ಯೆೆಯಿಂದ ವಿಳಂಬ ಮಾಡಿತ್ತುಘಿ. ಯಾವುದೆ ಸಭೆ ಮಾಡಿಲ್ಲಘಿ, ಬಜೆಟ್ ಮಂಡನೆ ಸಭೆ ಆಗಿಲ್ಲಘಿ. ಅಭಿವೃದ್ದಿಯಾಗಿಲ್ಲ ಎಂಬ ವಾದ ಚುನಾಯಿತ ಮಂಡಳಿ ಮಂಡಿಸಿದೆ. ಆಡಳಿತಾಧಿಕಾರಿಯನ್ನು ಯಾವುದೆ ಕಾರಣಕ್ಕೂ ಸರ್ಕಾರ ನೇಮಿಸಲು ಅವಕಾಶ ನೀಡಬಾರದು ಎಂದು ಕೋರಲಾಗಿದೆ. ಈ ಬಗ್ಗೆೆ ಇಂದು ವಿಚಾರಣೆಗೆ ಬರಲಿದ್ದು ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ

