ಸುದ್ದಿಮೂಲ ವಾರ್ತೆ ಬೆಂಗಳೂರು, ನ.18:
ಪೋಕ್ಸೋೋ ಪ್ರಕರಣ ಸಂಬಂಧ ವಿಚಾರಣೆಗೆ ಖುದ್ದು ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನ್ಯಾಾಯಾಲಯವು ಸಮನ್ಸ್ ಜಾರಿ ಮಾಡಿದೆ.
ಹೈಕೋರ್ಟ್ನ ತಡೆಯಾಜ್ಞೆ ತೆರವಾದ ಹಿನ್ನೆೆಲೆಯಲ್ಲಿ ಎಸ್ಪಿ ಅಶೋಕ್ ನಾಯ್ಕ್ ಅವರು ಅರ್ಜಿ ಸಲ್ಲಿಸಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಆರಂಭವಾದ ಹಿನ್ನೆೆಲೆಯಲ್ಲಿ ಆರೋಪಿಗಳಾದ ಬಿಎಸ್ ಯಡಿಯೂರಪ್ಪನವರ ಜೊತೆಗೆ ಇತರೆ ಮೂವರು ಆರೋಪಿಗಳಾದ ವೈ.ಎಂ. ಅರುಣ, ರುದ್ರೇೇಶ್ ಮರುಳಸಿದ್ದಯ್ಯ, ಜಿ. ಮರಿಸ್ವಾಾಮಿ ಅವರಗಳು ಡಿ.2ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ನೀಡಲಾಗಿದೆ.
ಪೋಕ್ಸೋೋ ಪ್ರಕರಣಕ್ಕೆೆ ಸಂಬಂಧಿಸಿದಂತೆ ತಮಗೆ ಕೆಳಹಂತದ ನ್ಯಾಾಯಾಲಯ ತಮಗೆ ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಿಸಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಯಡಿಯೂರಪ್ಪನವರ ಅರ್ಜಿಯನ್ನು ವಜಾಗೊಳಿಸಿ ವಿಚಾರಣೆಗೆ ಅನುಮತಿ ನೀಡಿತ್ತು. ವಿಚಾರಣಾಧೀನ ನ್ಯಾಾಯಾಲಯವು ಸಮನ್ಸ್ ಜಾರಿಗೊಳಿಸಿರುವುದನ್ನು ನ್ಯಾಾಯಮೂರ್ತಿ ಎಂ.ಐ. ಅರುಣ್ ಅವರ ಏಕಸದಸ್ಯ ಪೀಠ ಎತ್ತಿಿಹಿಡಿದಿತ್ತು. ಇದರ ಪರಿಣಾಮವಾಗಿ, ಯಡಿಯೂರಪ್ಪ ಅವರು ಸಿಐಡಿ ವಿಚಾರಣೆಯನ್ನು ಎದುರಿಸಲೇಬೇಕಾಗಿದೆ.
2024ರಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ಮನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಯಡಿಯೂರಪ್ಪ ಎದುರಿಸುತ್ತಿಿದ್ದಾರೆ. ಅವರ ಬಳಿ ಸಹಾಯ ಕೇಳಿ ಹೋದಾಗ ಯಡಿಯೂರಪ್ಪನವರು ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 2024ರಲ್ಲಿ ಆ ಬಾಲಕಿಯ ತಾಯಿ ದೂರು ನೀಡಿದ್ದರು. ಹೀಗಾಗಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

