ಬಿಹಾರದ ನೂತನ ಮುಖ್ಯಮಂತ್ರಿಿಯಾಗಿ ಸಂಯುಕ್ತ ಜನತಾ ದಳದ ನಿತೀಶ್ ಕುಮಾರ್ ನ.20ರ ಗುರುವಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇವರು ಬಿಹಾರದ ಮುಖ್ಯಮಂತ್ರಿಿಯಾಗಿ 10ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಬಿಹಾರ ರಾಜ್ಯದ ಇತಿಹಾಸದಲ್ಲಿ ದಾಖಲೆಯಾಗಲಿದೆ.
ಪಟ್ನಾಾದ ಇತಿಹಾಸ ಪ್ರಸಿದ್ಧ ಗಾಂಧಿ ಮೈದಾನದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆೆಲೆಯಲ್ಲಿ ಮಂಗಳವಾರ ಸ್ವತಃ ನಿತೀಶ್ ಕುಮಾರ್ ಅವರು ಮೈದಾನದಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.
ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಎನ್ಡಿಿಎ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಿಗಳು ಭಾಗವಹಿಸಲಿದ್ದಾರೆ.
ಭದ್ರತೆ:
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿರುವ ಗಾಂಧಿ ಮೈದಾನ ಹಾಗೂ ಪಾಟ್ನಾಾ ಸುತ್ತಮುತ್ತ ಬಿಗಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೈದಾನಕ್ಕೆೆ ನ.20ರವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ವಿಧಾನಸಭಾಧ್ಯಕ್ಷ ಹುದ್ದೆಗೆ ಜೆಡಿಯು ಹಾಗೂ ಬಿಜೆಪಿ ಪಟ್ಟು ಹಿಡಿದಿದ್ದವು. ಕೊನಗೆ ಅಧ್ಯಕ್ಷ ಪದವಿಯನ್ನು ಬಿಜೆಪಿಗೆ ಬಿಟ್ಟುಕೊಡಲಾಯಿತು. ಉಪ ಸ್ಪೀಕರ್ ಹುದ್ದೆಯನ್ನು ಜೆಡಿಯುಗೆ ನೀಡಲಾಗಿದೆ. ಗೃಹ ಸಚಿವ ಹುದ್ದೆಯನ್ನು ಜೆಡಿಯುಗೆ ಬಿಟ್ಟಕೊಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ನವೆಂರ್ಬ 19ರಂದು ಜೆಡಿಯುವ ಹಾಗೂ ಬಿಜೆಪಿ ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆೆ ಮಾಡಲಿವೆ.

