ಸುದ್ದಿಮೂಲ ವಾರ್ತೆ ಬೆಂಗಳೂರು, ನ.18:
ಹೆಸರುಘಟ್ಟದಲ್ಲಿ ಸ್ಥಾಾಪಿಸಲು ಉದ್ದೇಶಿಸಲಾಗಿರುವ ಕ್ವಾಾಂಟಮ್ ಸಿಟಿಯ ರೂಪುರೇಷೆಗಳನ್ನು ಬೆಂಗಳೂರು ಟೆಕ್ ಸಮಾವೇಶದಲ್ಲಿ ಬುಧವಾರ (ನ.19)ರಂದು ಅನಾವರಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ತಿಳಿಸಿದರು.
ಇಂದು ಬೆಂಗಳೂರು ಸೈನ್ಸ್ ಗ್ಯಾಾಲರಿಯಲ್ಲಿ ಬೆಂಗಳೂರು ಟೆಕ್ ಸಮ್ಮಿಿಟ್ ನ ಭಾಗವಾಗಿ ಆಯೋಜಿಸಲಾಗಿದ್ದ ಸ್ಮಾಾರ್ಟ್ ಬಯೋ ಪ್ರಶಸ್ತಿಿ ನೀಡಿ, ಸಮಾವೇಶದಲ್ಲಿ ಪಾಲ್ಗೊೊಂಡಿದ್ದ ಗಣ್ಯರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಮತ್ತು ಐಟಿ ಬಿಟಿ ಸಚಿವರಾದ ಪ್ರಿಿಯಾಂಕ ಖರ್ಗೆ ಅವರ ನಾಯಕತ್ವದಲ್ಲಿ ಬೆಂಗಳೂರು ಟೆಕ್ ಸಮಾವೇಶ, ಏಷ್ಯಾಾದ ಅತಿದೊಡ್ಡ ವೈಜ್ಞಾನಿಕ ವೇದಿಕೆಯಾಗಿ ಬೆಳೆದಿದ್ದು, ವಿಶ್ವದ ಪ್ರಮುಖ ಡೀಪೆಟೆಕ್, ಸ್ಟಾಾರ್ಟ್ಅಪ್ಗಳು, ಸಂಶೋಧಕರು ಮತ್ತು ನೀತಿ ನಿರ್ಮಾಣದ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.
ಎಲ್ಲರಿಗೂ ವಿಜ್ಞಾನ ಎನ್ನುವ ಧ್ಯೇಯವಾಕ್ಯದ ಅಡಿಯಲ್ಲಿ ನಮ್ಮ ರಾಜ್ಯದ ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗುತ್ತಿಿದೆ. ಪ್ರತಿ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರಗಳು ಮತ್ತು ತಾರಾಲಯಗಳನ್ನು ಸ್ಥಾಾಪಿಸಲಾಗುತ್ತಿಿದೆ. ಆಸ್ಟ್ರಾಾನಮಿ ಆಕ್ಸೆೆಸ್ ಯೋಜನೆಯ ಅಡಿಯಲ್ಲಿ ರಾಜ್ಯದ ಶಾಲೆಗಳಿಗೆ ಟೆಲಿಸ್ಕೋೋಪ್ಗಳ ವಿತರಣೆ ಮಾಡಲಾಗಿದ್ದು, ಗ್ರಾಾಮೀಣ ಮಕ್ಕಳು ಕೂಡ ಅಂತರಿಕ್ಷದ ಕುತೂಹಲಗಳನ್ನು ಕಲಿಯುವ ಅವಕಾಶ ಕಲ್ಪಿಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿಿರುವ 300 ಕೋಟಿ ಮೌಲ್ಯದ ಸೈನ್ಸ್ ಸಿಟಿ ಕಾರ್ಯ ಚುರುಕುಗೊಂಡಿದೆ. ಇದು ಪ್ರಯೋಗಾಧಾರಿತ, ಕಲಿಕೆಯ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವ ವಾತಾವರಣ ಹೊಂದಿರಲಿದೆ. ಅಲ್ಲದೇ ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಕ್ವಾಾಂಟಮ್ ಮಿಷನ್ಗೆ 1,000 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಿಗಳು ಘೋಷಿಸಿದ್ದಾರೆ. ಕರ್ನಾಟಕವನ್ನು ಏಷ್ಯಾಾದ ಕ್ವಾಾಂಟಮ್ ಕ್ಯಾಾಪಿಟಲ್ ಆಗಿ ರೂಪಿಸುವುದೇ ಇದರ ಉದ್ದೇಶವಾಗಿದೆ.
ರಾಜ್ಯ ಸರ್ಕಾರವು ಭಾರತದ ಮೊದಲ ಕ್ವಾಾಂಟಮ್ ಸಿಟಿಯನ್ನು ಬೆಂಗಳೂರಿನಲ್ಲಿ ಸ್ಥಾಾಪಿಸುತ್ತಿಿದೆ ಈ ಸಿಟಿಯ ಬಗ್ಗೆೆ ನಾಳೆ ಬೆಂಗಳೂರು ಟೆಕ್ ಸಮ್ಮಿಿಟ್ನಲ್ಲಿ ರೂಪು ರೇಷೆಗಳನ್ನು ಹಮ್ಮಿಿಕೊಳ್ಳಲಾಗುವುದು. ಜೊತೆಯಲ್ಲೇ, ರಾಷ್ಟ್ರೀಯ ಕ್ವಾಾಂಟಮ್ ಮಿಷನ್ಗೆ ಅನುಗುಣವಾಗಿ ಕ್ವಾಾಂಟಮ್ ಮೆಟೀರಿಯಲ್ಸ್ ಇನೋವೇಶನ್ ನೆಟ್ವರ್ಕ್ ಅನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆೆ ವಿನಂತಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಸೈನ್ಸ್ ಗ್ಯಾಾಲರಿ ಬೆಂಗಳೂರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿಿದೆ. ವಿಜ್ಞಾನವನ್ನು ಕಲೆ ಮತ್ತು ವಿನ್ಯಾಾಸದೊಂದಿಗೆ ಮಿಶ್ರಣಗೊಳಿಸಿ ಯುವಜನತೆಗೂ ಸಾಮಾನ್ಯ ನಾಗರಿಕರಿಗೂ ವಿಜ್ಞಾನದ ಅನುಭವ ಸಿಗುವಂತೆ ಮಾಡುತ್ತಿಿದೆ. ಆರಂಭದಿಂದಲೇ 6 ಲಕ್ಷಕ್ಕೂ ಹೆಚ್ಚು ಜನರು ಈ ಗ್ಯಾಾಲರಿಯನ್ನು ಭೇಟಿ ಮಾಡಿರುವುದು ಶ್ಲಾಾಘನೀಯ ಎಂದರು.

